ಜಮೀರ್ ಅಹ್ಮದ್ ಖಾನ್ ಆಪ್ತನಿಗೆ ಬೆಳ್ಳಂ ಬೆಳಗ್ಗೆ ಐಟಿ ಶಾಕ್: ಎಂಸಿ ವೇಣುಗೋಪಾಲ್ ಮನೆ ಮೇಲೆ ದಾಳಿ
ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಮಾಜಿ ಎಂಎಲ್ಸಿ ಎಂ.ಸಿ.ವೇಣುಗೋಪಾಲ್ಗೆ ಐಟಿ ಶಾಕ್ ಎದುರಾಗಿದೆ. ನಗರದ ಜೆ.ಪಿ.ನಗರದಲ್ಲಿರುವ ಎಂ.ಸಿ.ವೇಣುಗೋಪಾಲ್ ನಿವಾಸದ ಮೇಲೆ ಇಂದು ಬೆಳಿಗ್ಗೆ 2 ಕಾರುಗಳಲ್ಲಿ ಬಂದಿರುವ 15 ಅಧಿಕಾರಿಗಳ ತಂಡ ಮನೆಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು, ಮೇ 2: ಸಂಸದ ಪ್ರಜ್ವಲ್ ರೇವಣ್ಣರದ್ಧು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇದರ ಮಧ್ಯೆ ನಗರದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ (Zameer Ahmed Khan) ಆಪ್ತ ಮಾಜಿ ಎಂಎಲ್ಸಿ ಎಂ.ಸಿ.ವೇಣುಗೋಪಾಲ್ಗೆ (MC Venugopal) ಐಟಿ ಶಾಕ್ ಎದುರಾಗಿದೆ. ನಗರದ ಜೆ.ಪಿ.ನಗರದಲ್ಲಿರುವ ಎಂ.ಸಿ.ವೇಣುಗೋಪಾಲ್ ನಿವಾಸದ ಮೇಲೆ ಇಂದು ಬೆಳಿಗ್ಗೆ 2 ಕಾರುಗಳಲ್ಲಿ ಬಂದಿರುವ 15 ಅಧಿಕಾರಿಗಳ ತಂಡ ಮನೆಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಕೆ.ಎನ್ ರಾಜಣ್ಣ ಅವರಿಗೂ ಎಂ.ಸಿ.ವೇಣುಗೋಪಾಲ್ ಆಪ್ತರಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos