ಪಕ್ಷದವರನ್ನು ಹಾಸನಕ್ಕೆ ಕರೆದೊಯ್ದು ಸಂತ್ರಸ್ತೆಯರಿಗೆ ಧೈರ್ಯ ತುಂಬುವ ಕೆಲಸ ಅಶೋಕ ಮಾಡಲಿ: ಡಿಕೆ ಶಿವಕುಮಾರ್
ಅಶೋಕ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಶೋಭಾ ಕರಂದ್ಲಾಜೆ, ಡಿ ವಿ ಸದಾನಂದಗೌಡ, ಸುನೀಲ್ ಕುಮಾರ್, ಸಿಟಿ ರವಿ ಮೊದಲಾದವರನ್ನು ಹಾಸನಕ್ಕೆ ಕರೆದುಕೊಂಡು ಹೋಗಿ ಸಂತ್ರಸ್ತೆಯರ ವಿಳಾಸಗಳನ್ನು ಪತ್ತೆ ಮಾಡಿ ಅವರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ಮಾಡಲಿ ಎಂದು ಶಿವಕುಮಾರ್ ಹೇಳಿದರು.
ಕಲಬುರಗಿ: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಪ್ರಜ್ವಲ್ ರೇವಣ್ಣ (Prajwal Revanna) ಲೈಂಗಿಕ ದುರಾಚಾರದ ಟೇಪ್ ಗಳಲ್ಲಿ ಕಾಣುವ ಮಹಿಳೆಯರ ಬಗ್ಗೆ ಒಣ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೆಯೇ ಹೊರತು ಅವರನ್ನು ಪತ್ತೆ ಮಾಡಿ ಧೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕನಾಗಿ ಆರ್ ಅಶೋಕ (R Ashoka) ಆಡುವ ಮಾತು ಆಶ್ಚರ್ಯ ಹುಟ್ಟಿಸುತ್ತದೆ. ಪ್ರಜ್ವಲ್ ರೇವಣ್ಣಗೆ 2019 ರಲ್ಲಿ ಕಾಂಗ್ರೆಸ್ ಬೆಂಬಲ ನೀಡಿದ್ದು ಸತ್ಯ, ಆದರೆ ಈಗ ಅವರು ಯಾವ ಪಾರ್ಟಿಯ ಬೆಂಬಲದಿಂದ ಸ್ಪರ್ಧೆ ಮಾಡುತ್ತಿದ್ದಾರೆ? ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಬೇಡ ಎಂದ ಶಿವಕುಮಾರ್, ಅಶೋಕ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಶೋಭಾ ಕರಂದ್ಲಾಜೆ, ಡಿ ವಿ ಸದಾನಂದಗೌಡ, ಸುನೀಲ್ ಕುಮಾರ್, ಸಿಟಿ ರವಿ ಮೊದಲಾದವರನ್ನು ಹಾಸನಕ್ಕೆ ಕರೆದುಕೊಂಡು ಹೋಗಿ ಸಂತ್ರಸ್ತೆಯರ ವಿಳಾಸಗಳನ್ನು ಪತ್ತೆ ಮಾಡಿ ಅವರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ಮಾಡಲಿ ಎಂದರು. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿಹೋಗಲು ಕಾಂಗ್ರೆಸ್ ನೆರವಾಗಿದೆ ಅಂತ ವಿಪಕ್ಷಗಳು ಆರೋಪ ಮಾಡುತ್ತಿದ್ದಾವಲ್ಲ ಎಂದಾಗ ಶಿವಕುಮಾರ್, ಈ ಪ್ರಶ್ನೆಗೆ ಗೃಹ ಸಚಿವರು ಉತ್ತರ ನೀಡುತ್ತಾರೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಶ್ಲೀಲ ಚಿತ್ರಕ್ಕೆ ಡಿಕೆ ಶಿವಕುಮಾರ್ ಫೋಟೋ ಮಾರ್ಫಿಂಗ್, ಮೂವರ ವಿರುದ್ಧ ಎಫ್ಐಆರ್