ಗುಡ್​ನ್ಯೂಸ್: NWKRTC ಬಸ್​ಗಳಲ್ಲಿ ಯುಪಿಐ ಮೂಲಕ ಹಣ ಪಾವತಿ ಯಶಸ್ವಿ

|

Updated on: Nov 16, 2023 | 11:46 AM

ನವೆಂಬರ್​​ 1ರಿಂದ ಫೋನ್ ಪೇ ಕಂಪನಿಯ ಸಹಯೋಗದಲ್ಲಿ ಯುಪಿಐ ಮೂಲಕ ಹಣ ಸ್ವೀಕೃತಿ ವ್ಯವಸ್ಥೆಯನ್ನು ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕದ ಬಸ್ಸುಗಳಲ್ಲಿ ಆರಂಭಿಸಲಾಗಿತ್ತು. ಪ್ರಯಾಣಿಕರು ಫೋನ್ ಪೇ, ಗೂಗಲ್ ಪೇ ಸೇರಿದಂತೆ ಯಾವುದೇ ಯುಪಿಐ ಅಪ್ಲಿಕೇಷನ್ ಮೂಲಕ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿತ್ತು. ಸದ್ಯ ಯುಪಿಐ ವ್ಯವಸ್ಥೆಗೆ ಸಾರ್ವಜನಿಕರಿಂದ ಹಾಗೂ ಸಿಬ್ಬಂದಿಗಳಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿದೆ.

ಗುಡ್​ನ್ಯೂಸ್: NWKRTC ಬಸ್​ಗಳಲ್ಲಿ ಯುಪಿಐ ಮೂಲಕ ಹಣ  ಪಾವತಿ ಯಶಸ್ವಿ
NWKRTC ಬಸ್​ಗಳಲ್ಲಿ ಯುಪಿಐ ಮೂಲಕ ಹಣ ಪಾವತಿ ಯಶಸ್ವಿ
Follow us on

ಹುಬ್ಬಳ್ಳಿ, ನ.16: ಕೆಎಸ್​ಆರ್​ಟಿಸಿ (KSRTC) ಬಸ್ ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಇನ್ನು ಮುಂದೆ ಗ್ರಾಹಕರಿಗೆ ಚಿಲ್ಲರೆ ತಲೆ ನೋವು ಇರಲ್ಲ. ಏಕೆಂದರೆ ಮೊದಲ ಬಾರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ(NWKRTC)  ಸಂಸ್ಥೆಯ ಬಸ್ಸುಗಳಲ್ಲಿ ಯುಪಿಐ (UPI) ಪಾವತಿ ವ್ಯವಸ್ಥೆ ಮಾಡಲಾಗಿದ್ದು ಯಶಸ್ವಿಯಾಗಿದೆ. ಈ ಮೂಲಕ ಸಾರಿಗೆ ಬಸ್​ಗಳಲ್ಲಿ ಚಿಲ್ಲರೆ ಸಮಸ್ಯೆಗೆ ಪರಿಹಾರ ಸಿಕ್ಕಿದೆ.

NWKRTC ಬಸ್​ಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶೀಘ್ರದಲ್ಲಿಯೇ ನಿಗಮದ ಎಲ್ಲ ಬಸ್‌ಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಎಂಡಿ ಭರತ್ ಎಸ್ ತಿಳಿಸಿದ್ದಾರೆ. ನವೆಂಬರ್​​ 1ರಿಂದ ಫೋನ್ ಪೇ ಕಂಪನಿಯ ಸಹಯೋಗದಲ್ಲಿ ಯುಪಿಐ ಮೂಲಕ ಹಣ ಸ್ವೀಕೃತಿ ವ್ಯವಸ್ಥೆಯನ್ನು ಹುಬ್ಬಳ್ಳಿ ಗ್ರಾಮಾಂತರ 3ನೇ ಘಟಕದ ಬಸ್ಸುಗಳಲ್ಲಿ ಆರಂಭಿಸಲಾಗಿತ್ತು. ಪ್ರಯಾಣಿಕರು ಫೋನ್ ಪೇ, ಗೂಗಲ್ ಪೇ ಸೇರಿದಂತೆ ಯಾವುದೇ ಯುಪಿಐ ಅಪ್ಲಿಕೇಷನ್ ಮೂಲಕ ಹಣ ಪಾವತಿಸಲು ಅವಕಾಶ ಕಲ್ಪಿಸಲಾಗಿತ್ತು. ಸದ್ಯ ಚಿಲ್ಲರೆ ಸಮಸ್ಯೆಗೆ ಪರಿಹಾರ ಸಿಕ್ಕಿದೆ, ನಗದು ರಹಿತ ಪ್ರಯಾಣ ಮತ್ತಿತರ ಪ್ರಯೋಜನಗಳಿಂದಾಗಿ ಯುಪಿಐ ವ್ಯವಸ್ಥೆಗೆ ಸಾರ್ವಜನಿಕರಿಂದ ಹಾಗೂ ಸಿಬ್ಬಂದಿಗಳಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿದೆ.

ಪೈಲಟ್ ಯೋಜನೆಯಡಿಯಲ್ಲಿ, ಪ್ರತಿ ಕಂಡಕ್ಟರ್‌ಗೆ ಪ್ರತ್ಯೇಕ ಸ್ಟ್ಯಾಟಿಕ್ ಕ್ಯೂಆರ್ ಕೋಡ್ ನೀಡಲಾಗಿದೆ. ಮತ್ತು ಅವರ ಟಿಕೆಟಿಂಗ್ ಯಂತ್ರಗಳನ್ನು ಅದಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಕಂಡಕ್ಟರ್ ಗಳಿಗೆ ಅಗತ್ಯ ತರಬೇತಿ ನೀಡಲಾಗಿದೆ. ಪ್ರಯಾಣಿಕರು ಫೋನ್‌ಪೇ, ಗೂಗಲ್ ಪೇ ಅಥವಾ ಇತರ ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸುತ್ತಿದ್ದಾರೆ ಎಂದು ಎಂಡಿ ಭರತ್ ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿಲ್ಲರೆ ಗಲಾಟೆಗೆ ಮುಕ್ತಿ: ಯುಪಿಐ ಸ್ಕ್ಯಾನ್‌ ಮಾಡಿ ಟಿಕೆಟ್‌ ತಗೊಳ್ಳಿ

ಇಲ್ಲಿಯವರೆಗೆ, 27,498 ಯುಪಿಐ ವಹಿವಾಟುಗಳು ನಡೆದಿವೆ ಮತ್ತು 71 ಲಕ್ಷ ರೂ. ಹಣ ಆನ್​ಲೈನ್ ಮೂಲಕ ಬಂದಿದೆ. ಮತ್ತೊಂದೆಡೆ ಈ ವ್ಯವಸ್ಥೆಯಿಂದ ಚಿಲ್ಲರೆ ಸಮಸ್ಯೆ ಬಗೆ ಹರಿದಿದೆ ಎಂದು ಸಾರಿಗೆ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ NWKRTC ಯ ಎಲ್ಲಾ 4,581 ಬಸ್‌ಗಳಿಗೆ UPI ಪಾವತಿ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಬಸ್‌ಗಳಲ್ಲಿ ಚಿಲ್ಲರೆಗಾಗಿ ಹೊಡೆದಾಟ-ಬಡಿದಾಟ, ಅಥವಾ ಚಿಲ್ಲರೆ ಇಲ್ಲ ಎಂದು ಬಸ್​ನಿಂದ ಇಳಿಸುವುದು, ಟಿಕೆಟ್ ನೀಡಿದ ಬಳಿಕ ಚಿಲ್ಲರೆ ಇಲ್ಲ ಎಂದು ಪ್ರಯಾಣಿಕರಿಗೆ ಚಿಲ್ಲರೆ ನೀಡದೆ ಮರೆಯುವಂತಹ ಅನೇಕ ಘಟನೆಗಳು ಪ್ರತಿ ದಿನ ನಡೆಯುತ್ತಿದ್ದವು. ಸದ್ಯ ಈಗ ಸಾರಿಗೆ ಇಲಾಖೆಯ ಈ ಮಹತ್ವದ ಹೆಜ್ಜೆ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ. ಆದರೆ ನೆಟ್ವರ್ಕ್ ಸಮಸ್ಯೆಯಾಗದೇ ಇದ್ರೆ ಸಾಕು.

RBI ಗವರ್ನರ್ ಶಕ್ತಿಕಾಂತ ದಾಸ್ ಅವರು ಗಡಿಯಾಚೆಗಿನ ವಹಿವಾಟುಗಳ ವೆಚ್ಚವನ್ನು ಕಡಿಮೆ ಮಾಡಲು ಜಪಾನ್‌ನ ಸ್ಥಳೀಯ ವೇಗದ ಪಾವತಿ ವ್ಯವಸ್ಥೆಯೊಂದಿಗೆ ಭಾರತದ UPI ಅನ್ನು ಲಿಂಕ್ ಮಾಡಲು ಪ್ರಸ್ತಾಪಿಸಿದ್ದಾರೆ. ಸಿಂಗಾಪುರದ PayNow ಸಿಸ್ಟಮ್‌ನೊಂದಿಗೆ UPI ಅನ್ನು ಲಿಂಕ್ ಮಾಡುವ ಯಶಸ್ಸನ್ನು ಇದು ಅನುಸರಿಸುತ್ತದೆ. ಫಿನ್‌ಟೆಕ್ ಅನ್ನು ನಿಯಂತ್ರಿಸಲು ಮತ್ತು ಗಡಿಯಾಚೆಗಿನ ಪಾವತಿಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಇತರ ದೇಶಗಳೊಂದಿಗೆ ಇದೇ ರೀತಿಯ ಸಂಪರ್ಕವನ್ನು ಅನ್ವೇಷಿಸುವ ಅಗತ್ಯವನ್ನು ದಾಸ್ ಉಲ್ಲೇಖಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ