ಮತ್ತೆ ಹವಾಮಾನ ವೈಪರೀತ್ಯ, ಚಂಡಮಾರುತದ ಲಕ್ಷಣ: ಆದರೆ ಕರ್ನಾಟಕದಲ್ಲಿ ಬಾಧೆ ಇಲ್ಲ: ಹವಾಮಾನ ತಜ್ಞ ಡಾ. ಪಾಟೀಲ

| Updated By: ಸಾಧು ಶ್ರೀನಾಥ್​

Updated on: Nov 29, 2021 | 12:05 PM

ಡಿ. 1ರ ಬಳಿಕ ಮತ್ತೊಂದು ವಾಯಭಾರ ಕುಸಿತ ಆಗಲಿದೆ. ಅಂಡಮಾನ್ ಮತ್ತು ನಿಕೋಬಾರ್‌ ಭಾಗದಲ್ಲಿ ಅದು ಸಂಭವಿಸಲಿದೆ. ಅದು ಅಂಧ್ರದ ಕಡಲದ ಭಾಗದಲ್ಲಿ ಪರಿಣಾಮ ಬೀರಲಿದೆ. ಅದು ಸಹ ಚಂಡಮಾರುತ ಆಗುವ ಲಕ್ಷಣಗಳಿವೆ. ಆದರೆ ಅದರಿಂದ ಕರ್ನಾಟಕ ಭಾಗದಲ್ಲಿ ಯಾವುದೇ ಬಾಧೆ ಇಲ್ಲ

ಮತ್ತೆ ಹವಾಮಾನ ವೈಪರೀತ್ಯ, ಚಂಡಮಾರುತದ ಲಕ್ಷಣ: ಆದರೆ ಕರ್ನಾಟಕದಲ್ಲಿ ಬಾಧೆ ಇಲ್ಲ: ಹವಾಮಾನ ತಜ್ಞ ಡಾ. ಪಾಟೀಲ
ಮತ್ತೆ ಹವಾಮಾನ ವೈಪರೀತ್ಯ, ಚಂಡಮಾರುತ ಆಗುವ ಲಕ್ಷಣ: ಆದರೆ ಕರ್ನಾಟಕ ಭಾಗದಲ್ಲಿ ಯಾವುದೇ ಬಾಧೆ ಇಲ್ಲ- ಡಾ. ಆರ್.ಎಚ್. ಪಾಟೀಲ
Follow us on

ಧಾರವಾಡ: ರಾಜ್ಯದಲ್ಲಿ ದಿಢೀರನೆ ಮತ್ತೆ ಹವಾಮಾನ ವೈಪರೀತ್ಯ ಕಾಣಿಸಿಕೊಂಡಿದೆ. ಇನ್ನೆರಡು ದಿನ ಮೋಡ ಕವಿದ ವಾತಾವರಣ ಇರಲಿದೆ. ಉತ್ತರ ಕರ್ನಾಟಕ‌ ಭಾಗದಲ್ಲಿ ಎರಡು ದಿನ ಮೋಡದ ವಾತಾವರಣ ಇರಲಿದೆ. ಇದರಿಂದ ಯಾವುದೇ ಹಾನಿಕಾರಕ ಮಳೆ ಇಲ್ಲ. ಆದರೆ ಕಡಲ ತೀರದ ಭಾಗದಲ್ಲಿ ಮಳೆ ಆಗಲಿದೆ. 48 ಗಂಟೆಗಳ ಬಳಿಕ ಪುನಃ ಬಿಸಿಲು ಬರಲಿದೆ ಎಂದು ಧಾರವಾಡ ಕೃಷಿ ವಿವಿ ಹವಾಮಾನ ಕೇಂದ್ರ ಮುಖ್ಯಸ್ಥ, ಹವಾಮಾನ ತಜ್ಞ ಡಾ. ಆರ್.ಎಚ್. ಪಾಟೀಲ ಹೇಳಿದ್ದಾರೆ.

ಡಿ. 1ರ ಬಳಿಕ ಮತ್ತೊಂದು ವಾಯಭಾರ ಕುಸಿತ ಆಗಲಿದೆ. ಅಂಡಮಾನ್ ಮತ್ತು ನಿಕೋಬಾರ್‌ ಭಾಗದಲ್ಲಿ ಅದು ಸಂಭವಿಸಲಿದೆ. ಅದು ಅಂಧ್ರದ ಕಡಲದ ಭಾಗದಲ್ಲಿ ಪರಿಣಾಮ ಬೀರಲಿದೆ. ಅದು ಸಹ ಚಂಡಮಾರುತ ಆಗುವ ಲಕ್ಷಣಗಳಿವೆ. ಆದರೆ ಅದರಿಂದ ಕರ್ನಾಟಕ ಭಾಗದಲ್ಲಿ ಯಾವುದೇ ಬಾಧೆ ಇಲ್ಲ ಎಂದು ಡಾ. ಆರ್.ಎಚ್. ಪಾಟೀಲ ಹೇಳಿದ್ದಾರೆ.

Published On - 11:55 am, Mon, 29 November 21