ಐತಿಹಾಸಿಕ ಸಿದ್ದಾರೂಢ ರಥೋತ್ಸವ ಜಾತ್ರೆ ದಿನವೇ ಮನಬಂದಂತೆ ಕೊಚ್ಚಿ ಯುವಕನ ಕೊಲೆ
ಆ ಕಡೆ ಹುಬ್ಬಳ್ಳಿಯ ಐತಿಹಾಸಿಕ ಸಿದ್ದಾರೂಢ ರಥೋತ್ಸವ ನಡೆದಿತ್ತು. ಈ ಕಡೆ ಕಣ್ಣಲ್ಲಿ ಖಾರದ ಪುಡಿ ಹಾಕಿ ನಾಗರಾಜ ಎಂಬ ಯುವಕನನ್ನು ಪಕ್ಕಾ ಪ್ಲ್ಯಾನ್ ಮಾಡಿ ಮರ್ಡರ್ ಮಾಡಿದ್ದಾರೆ.
ಆತ ಸಣ್ಣಪುಟ್ಟ ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದ. ಅಲ್ಲದೆ ಆತನಿಗೆ ಪೊಲೀಸ್ ಸ್ಟೇಶನ್ ಕೂಡಾ ಹೊಸದಲ್ಲ. ತನ್ನದೇ ಆದ ಗುಂಪು ಕಟ್ಟಿಕೊಂಡು ರಿಯಲ್ ಎಸ್ಟೇಟ್ ಮಾಡ್ತಿದ್ದ. ಆತನಿಗೆ ಜೊತೆಗಿದ್ದವರೇ ಖೆಡ್ಡಾ ತೋಡಿದ್ದಾರೆ. ಇಷ್ಟು ದಿನ ಜೊತೆಗಿದ್ದು, ಪ್ಲ್ಯಾನ್ ಮಾಡಿ ಜಾತ್ರೆ ದಿನವೇ ಆತನನ್ನ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ. ಇದಕ್ಕೆಲ್ಲ ಹಳೇ ವೈಷಮ್ಯವೇ ಕಾರಣ ಎನ್ನಲಾಗ್ತಿದ್ದರೂ ಜೊತೆಗಿದ್ದವರೇ ಇಷ್ಟೊಂದು ಬರ್ಬರವಾಗಿ ಕೊಲೆ ಮಾಡೋಕೆ ಕಾರಣ ಏನೂ ಅನ್ನೋದು ಇನ್ನೂ ನಿಗೂಢವಾಗಿದೆ. ಇತ್ತ ಎದೆಯುದ್ದ ಬೆಳೆದ ಮಗನನ್ನ ಕಳೆದುಕೊಂಡ ತಾಯಿ ಕಣ್ಣೀರು ಹಾಕುತ್ತಿದ್ದಾಳೆ. ಒಂದು ಕಡೆ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರೋ ಮೃತದೇಹ (Murder).. ಇನ್ನೊಂದು ಮಗನನ್ನ ಕಳೆದುಕೊಂಡ ತಾಯಿಯ ಕಣ್ಣೀರು… ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ.. ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ (Hubballi) ಹಾಡುಹಗಲೆ ನೆತ್ತರು ಹರಿದಿದೆ. ಹುಬ್ಬಳ್ಳಿಯ ನೇಕಾರ ನಗರ ನಿವಾಸಿಯಾದ ನಾಗರಾಜ್ ಚಲವಾದಿ (26) ಯನ್ನು ಆತನ ಜೊತೆಗಿದ್ದವರೇ (Miscreants) ಹಾಡಹಗಲಲ್ಲೆ ಸಿಕ್ಕ ಸಿಕ್ಕಲ್ಲಿ ತಲ್ವಾರ್, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ. ಕಣ್ಣಲ್ಲಿ ಖಾರದ ಪುಡಿ ಹಾಕಿ ನಾಗರಾಜನನ್ನು ಪಕ್ಕಾ ಪ್ಲ್ಯಾನ್ ಮಾಡಿ ಮರ್ಡರ್ ಮಾಡಿದ್ದಾರೆ. ಅವತ್ತು ಹುಬ್ಬಳ್ಳಿಯ ಐತಿಹಾಸಿಕ ಸಿದ್ದಾರೂಢ ರಥೋತ್ಸವ (Siddaruda Rathotsava). ಈ ಹಿನ್ನೆಲೆಯಲ್ಲಿ ಆತನ ಸ್ನೇಹಿತರು ಭಕ್ತರಿಗೆ ಪಲಾವ್ ಮಾಡಿಸಿದ್ದರು. ಮಠಕ್ಕೆ ಬಂದ ಭಕ್ತರಿಗೆ ಪಲಾವ್ ಕೊಡುವ ನೆಪದಲ್ಲಿ ನಾಗರಾಜನನ್ನು ಕರೆಸಿದ್ದಾರೆ.
ಇಲ್ಲಿ ಯಾವದೋ ವಿಷಯಕ್ಕೆ ಅವರ ಅವರ ಮಧ್ಯೆ ಗಲಾಟೆಯಾಗಿದೆ. ಬಳಿಕ ನಾಗರಾಜನ ಬೆನ್ನುಬಿದ್ದ ಗ್ಯಾಂಗ್ ನೇಕಾರನಗರದಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಆಟೋದಲ್ಲಿ ಬಂದ ಮೂರ್ನಾಲ್ಕು ಜನರ ಗ್ಯಾಂಗ್ ಆತನ ಕಣ್ಣಿಗೆ ಮೊದಲು ಖಾರದ ಪುಡಿ ಎರಚಿದ್ದಾರೆ. ನಂತರ ಮುಖಕ್ಕೆ ತಲ್ವಾರ್, ಚಾಕುವಿನಿಂದ ಸಿಕ್ಕ ಸಿಕ್ಕ ಹಾಗೆ ಇರಿದು ಓಡಿ ಹೋಗಿದ್ದಾರೆ. ರಕ್ತದ ಮಡುವಿನಲ್ಲಿ ತನ್ನ ಜೊತೆಗಿದ್ದವರಿಂದಲೇ ನಾಗರಾಜ್ ಕೊಲೆಯಾಗಿ ಹೋಗಿದ್ದಾನೆ. ಇನ್ನು ಮಗನನ್ನ ಕಳೆದುಕೊಂಡ ತಾಯಿ ಲಕ್ಷ್ಮೀ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ನಾಗರಾಜ್ ಚಲವಾದಿ ಹುಬ್ಬಳ್ಳಿಯಲ್ಲಿ ಸಣ್ಣ ಪುಟ್ಟ ರಿಯಲ್ ಎಸ್ಟೇಟ್ ಮಾಡಿಕೊಂಡಿದ್ದ.ಅಲ್ಪ ಸ್ವಲ್ಪ ಹಣ ಕೂಡಾ ಸಂಪಾದನೆ ಮಾಡಿಕೊಂಡಿದ್ದ, ಸಿದ್ದಾರೂಢ ಮಠದ ಬಳಿಯೆ ಹೆಂಡತಿಯೊಡನೆ ವಾಸ ಮಾಡ್ತಿದ್ದ. ನಾಗರಾಜ್ ಗೂ ಪೊಲೀಸ್ ಠಾಣೆ ಏನು ಹೊಸದಲ್ಲ. ಆದ್ರೆ ಅವರ ತಾಯಿ ಹೇಳೋ ಪ್ರಕಾರ ಇತ್ತೀಚೆಗೆ ತನ್ನ ಮಗ ಚಲೋ ಆಗಿದ್ದ, ಯಾವ ಕೇಸ್ ಇರಲಿಲ್ಲ ಅಂತಿದಾರೆ.
ರಿಯಲ್ ಎಸ್ಟೇಟ್ ಮಾಡೋದ್ರಿಂದ ನಾಗರಾಜ್ ಕೂಡಾ ಕೆಲ ಹುಡಗರನ್ನ ಸಾಕಿದ್ದ, ಅವರು ನಾಗರಾಜ್ ಮನೆಯಲ್ಲಿ ವಾಸ ಮಾಡ್ತಿದ್ದರು. ಅದ್ರೆ ಕಳೆದ ಕೆಲ ದಿನಗಳ ಹಿಂದೆ ಸ್ನೇಹಿತರ ನಡುವೆ ಯಾವದೋ ವಿಷಯಕ್ಕೆ ಕಿರಿಕ್ ಆಗಿದೆ. ನಾಲ್ಕೈದು ತಿಂಗಳಿಂದ ಆ ಹುಡುಗ್ರು ನಾಗರಾಜ್ ನಿಂದ ಅಂತರ ಕಾಯ್ದುಕೊಂಡಿದ್ರು. ಹುಡಗರನ್ನ ನಾಗರಾಜ್ ಸ್ವಂತ ತಮ್ಮಂದಿರಂತೆ ನೋಡಿಕೊಂಡಿದ್ದ.
ಆದ್ರೆ ನಾಲ್ಕು ದಿನಗಳ ಹಿಂದೆ ಮತ್ತೆ ನಾಗರಾಜ್ ಮತ್ತು ಸ್ನೇಹಿತರ ನಡುವೆ ಕಿರಿಕ್ ಆಗಿದೆ. ಅದೇ ಸಿಟ್ಟಿನಲ್ಲಿ ಜಾತ್ರೆ ದಿನ ಪಲಾವ್ ಹಂಚೋ ನೆಪದಲ್ಲಿ ನಿಖಿಲ್, ಮಚ್ಚಿ ಇನ್ನು ಕೆಲ ಯುವಕರು ಸೇರಿಕೊಂಡು ನಾಗರಾಜ್ ನನ್ನ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಹಾಡಹಗಲೇ ಹುಬ್ಬಳ್ಳಿಯಲ್ಲಿ ನೆತ್ತರು ಹರಿದಿದ್ದು, ಅದು ಸಿದ್ದಾರೂಢನ ಜಾತ್ರೆ ದಿನವೇ ನೆತ್ತರು ಹರದಿರೋದಕ್ಕೆ ಹುಬ್ಬಳ್ಳಿ ಜನ ಬೆಚ್ಚಿ ಬಿದ್ದಿದ್ದಾರೆ.
ಒಟ್ಟಾರೆ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಛೋಟಾ ಮುಂಬೈ ಹುಬ್ಬಳ್ಳಿ ಸೈಲೆಂಟ್ ಆಗಿತ್ತು. ಆದ್ರೆ ಸಿದ್ದಾರೂಢನ ಜಾತ್ರೆ ದಿನವೇ ಮತ್ತೆ ನೆತ್ತರು ಹರದಿದ್ದು, ಜೊತೆಯಲ್ಲಿದ್ದುಕೊಂಡೆ ಪ್ಲ್ಯಾನ್ ಮಾಡಿ ಕೊಚ್ಚಿ ಕೊಲೆ ಮಾಡಿ ದುರುಳರು ಎಸ್ಕೇಪ್ ಆಗಿದ್ದಾರೆ. ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.
ವರದಿ: ಶಿವಕುಮಾರ್ ಪತ್ತಾರ್, ಟಿವಿ9, ಹುಬ್ಬಳ್ಳಿ