ಹುಬ್ಬಳ್ಳಿ: ಮಹಿಳೆಯರು ಹಿಜಾಬ್ (Hijab) ಹಾಕದಿದ್ದರೆ ಅತ್ಯಾಚಾರವಾಗುತ್ತೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ (Jameer Ahmed) ಇದೀಗ ಯುಟರ್ನ್ ಹೊಡೆದಿದ್ದಾರೆ. ಹಿಜಾಬ್ ಧರಿಸದಿದ್ದರೆ ರೇಪ್ ಆಗುತ್ತೆಂದು ನಾನು ಹೇಳಿಲ್ಲ. ಹಿಜಾಬ್ನಿಂದ ಹೆಣ್ಣು ಮಕ್ಕಳಿಗೆ ಸೇಫ್ಟಿ ಎಂದು ಹೇಳಿದ್ದೇನೆ. ಹಿಜಾಬ್ ಧರಿಸಿದರೆ ಹೆಣ್ಣು ಮಕ್ಕಳ ಬ್ಯೂಟಿ ಕಾಣುವುದಿಲ್ಲ. ಅವರಿಗೆ ಸೇಫ್ಟಿ ಇರುತ್ತೆ ಎಂಬ ಅರ್ಥದಲ್ಲಿ ನಾನು ಹೇಳಿದ್ದೇನೆ ಅಂತ ಹುಬ್ಬಳ್ಳಿಯಲ್ಲಿ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ.
ಹಿಜಾಬ್ ಹಾಕಿಕೊಂಡರೆ ಒಳ್ಳೆಯದು ಅಂತ ನಾನು ಹೇಳುತ್ತೇನೆ. ಬೇರೆಯವರ ಟೀಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅಥವಾ ಬೇರೆ ದೇಶದ ಜೊತೆ ಹೋಲಿಕೆ ಕೂಡ ಮಾಡಿಲ್ಲ. ನಮ್ಮ ದೇಶದಲ್ಲಿ ರೇಪ್ ರೇಟ್ ಜಾಸ್ತಿಯಿದೆ. ಬೇಕಾದರೆ ನೋಡಿ. ಅದಕ್ಕೆ ನಾನು ಅವರ ಸೇಫ್ಟಿ ಎನ್ನೋ ಅರ್ಥದಲ್ಲಿ ಹೇಳಿದ್ದೇನೆ ಎಂದು ಶಾಸಕ ಜಮೀರ್ ಅಹ್ಮದ್ ತಿಳಿಸಿದ್ದಾರೆ.
ವಿವಾದಾತ್ಮಕ ಹೇಳಿಕೆ ನೀಡಿದ್ದ ಜಮೀರ್:
ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಜಮೀರ್ ಅಹ್ಮದ್ಖಾನ್ ನಿನ್ನೆ (ಫೆಬ್ರವರಿ 13) ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಿಜಾಬ್ ಅಂದರೆ ಮುಸಲ್ಮಾನರಲ್ಲಿ ಗೋಶಾಪರದ ಅಂತ ಹೇಳ್ತೇವೆ. ಅವರ ಮನೆಯಲ್ಲಿ ಹೆಣ್ಣುಮಕ್ಕಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದಿದ್ದರೆ ಗೊತ್ತಾಗುತ್ತಿತ್ತು. ಹೆಣ್ಣುಮಕ್ಕಳು ತಮ್ಮ ರಕ್ಷಣೆಗಾಗಿ ಹಿಜಾಬ್ ಧರಿಸುತ್ತಾರೆ. ಹೆಣ್ಣುಮಕ್ಕಳು ದೊಡ್ಡವರಾದ ಮೇಲೆ ದೇಹ ರಚನೆ ಕಾಣಿಸಬಾರದು. ದೇಹ ರಚನೆ ಹೊರಗೆ ಕಾಣಿಸಬಾರದು ಎಂದು ಹಿಜಾಬ್ ಬಳಸ್ತಾರೆ. ಅತ್ಯಾಚಾರ ಪ್ರಕರಣ ಹೆಚ್ಚಾಗಿರುವುದು ಭಾರತದಲ್ಲಿ. ಹಿಜಾಬ್ ಹಾಕದಿರುವ ಕಾರಣದಿಂದ ಇಂತಹ ಘಟನೆ ನಡೆದಿದೆ ಎಂದು ಜಮೀರ್ ಅಹ್ಮದ್ ಹೇಳಿದ್ದರು.
ಸೇಫ್ಟಿಗಾಗಿ ಫುಲ್ ಹೆಲ್ಮೆಟ್ ಹಾಕುವಂತೆ ನಿಯಮವಿದೆ. ಅದೇ ರೀತಿ ಸೇಫ್ಟಿ ಇರಲಿ ಎಂದು ಹಿಜಾಬ್ ಮಾಡಿದ್ದಾರೆ. ರಕ್ಷಣೆ, ಅಂದ ಕಾಪಾಡಿಕೊಳ್ಳಲು ಹಿಜಾಬ್ ಧರಿಸುತ್ತಾರೆ. ನೂರಾರು ವರ್ಷಗಳಿಂದ ಹಿಜಾಬ್ ಧರಿಸುತ್ತಿದ್ದಾರೆ. ರಾಜ್ಯದಲ್ಲಿ ಮಕ್ಕಳಿಗೆ ಕೇಸರಿ ಶಾಲು ಹಾಕಿಸುತ್ತಿದ್ದಾರೆ. ರಾಜಕೀಯ ಲಾಭಕ್ಕಾಗಿ ಮಕ್ಕಳಿಂದ ಹೀಗೆಲ್ಲಾ ಮಾಡಿಸ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದೆ ಎಂದು ಹೀಗೆ ಮಾಡುತ್ತಿದ್ದಾರೆ. ಬಿಜೆಪಿಯವರು ಹಿಂದೂ, ಮುಸ್ಲಿಂ ವಿಚಾರ ಬಳಸಿಕೊಳ್ತಿದ್ದಾರೆ. ರಾಜ್ಯದ ಜನರೆ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಅಂತ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದದಲ್ಲಿ ಜಮೀರ್ ಹೇಳಿದ್ದಾರೆ.
ರಾಜ್ಯದ ಜನರಿಗೆ ಸೇವೆ ಮಾಡಲು ಕ್ಷೇತ್ರ ಬಿಟ್ಟುಕೊಡ್ತಿದ್ದೇನೆ. ಸಿದ್ದರಾಮಯ್ಯಗೆ ನನ್ನ ಕ್ಷೇತ್ರವನ್ನು ಬಿಟ್ಟುಕೊಡುತ್ತಿದ್ದೇನೆ. ನನಗೆ ರಾಜ್ಯವೇ ಮುಖ್ಯ, ಈ ರಾಜ್ಯಕ್ಕಾಗಿ ಕ್ಷೇತ್ರ ತ್ಯಾಗ ಮಾಡಿದ್ದೇನೆ. ರಾಜ್ಯಕ್ಕೆ ಮತ್ತು ಸಿದ್ದರಾಮಯ್ಯಗೆ ಒಳ್ಳೆಯದಾದರೆ ಸಾಕು ಅಂತ ಜಮೀರ್ ಅಹ್ಮದ್ ಹೇಳಿದರು.
ಇದನ್ನೂ ಓದಿ
ಹಿಜಾಬ್-ಕೇಸರಿ ಕಿತ್ತೆಸೆದು ಪರಸ್ಪರ ಆಲಿಂಗಿಸಿ, ಹಸ್ತಲಾಘವ ಮಾಡಿಕೊಂಡ ಹಿಂದೂ-ಮುಸ್ಲಿಂ ವಿದ್ಯಾರ್ಥಿನಿಯರು!
ಅನುಭವ ಮಂಟಪ ಕಾಮಗಾರಿಗೆ ಭೂಮಿ ಪೂಜೆ ಮಾಡಿ ವರ್ಷ ಉರುಳಿದರು ಆರಂಭವಾಗದ ಕಾಮಗಾರಿ; ಸ್ಥಳೀಯರ ಆಕ್ರೋಶ
Published On - 12:28 pm, Mon, 14 February 22