Hijab Row: ಹಿಜಾಬ್-ಕೇಸರಿ ಕಿತ್ತೆಸೆದು ಪರಸ್ಪರ ಆಲಿಂಗಿಸಿಕೊಂಡು, ಹಸ್ತಲಾಘವ ಮಾಡಿದ ಹಿಂದೂ-ಮುಸ್ಲಿಂ ವಿದ್ಯಾರ್ಥಿನಿಯರು!

ನಾವು ಒಂದೇ ತಾಯಿ ಮಕ್ಕಳು. ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ. ಹಿಜಾಬ್ ನಮ್ಮ ರಕ್ಷಣೆಗಾಗಿ ಹಾಕಿಕೊಂಡಿದ್ದು. ಶಾಲಾ ತರಗತಿಯಲ್ಲಿ ನಾವು ಹಿಜಾಬ್-ಕೇಸರಿ ಹಾಕಲ್ಲಾ ಎಂದು ಹಿಜಾಬ್-ಕೇಸರಿ ಕಿತ್ತೆಸೆದು ಪರಸ್ಪರ ಆಲಿಂಗಸಿ, ವಿಜಯಪುರ ನಗರದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ವಿದ್ಯಾರ್ಥಿನಿಯರು ಒಡಕು ಇಲ್ಲದ ದನಿಯಲ್ಲಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು.

Hijab Row: ಹಿಜಾಬ್-ಕೇಸರಿ ಕಿತ್ತೆಸೆದು ಪರಸ್ಪರ ಆಲಿಂಗಿಸಿಕೊಂಡು, ಹಸ್ತಲಾಘವ ಮಾಡಿದ ಹಿಂದೂ-ಮುಸ್ಲಿಂ ವಿದ್ಯಾರ್ಥಿನಿಯರು!
ಹಿಜಾಬ್-ಕೇಸರಿ ಕಿತ್ತೆಸೆದು ಪರಸ್ಪರ ಆಲಿಂಗಿಸಿಕೊಂಡು, ಹಸ್ತಲಾಘವ ಮಾಡಿದ ಹಿಂದೂ-ಮುಸ್ಲಿಂ ವಿದ್ಯಾರ್ಥಿನಿಯರು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 14, 2022 | 1:15 PM

ವಿಜಯಪುರ: ರಾಜ್ಯದಲ್ಲಿ ಹಿಜಾಬ್ ಕೇಸರಿ ಶಾಲು ವಿವಾದದ ರಾತಕಕ್ಕೆ ಏರಿರುವಾಗ ವಿಜಯಪುರ ನಗರದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ (Vijayapura government high school girls) ಎರಡೂ ಸಮುದಾಯಗಳ ವಿದ್ಯಾರ್ಥಿನಿಯರು ಅಪ್ಪಟ ಭಾವೈಕ್ಯತೆ ಮೆರೆದಿದ್ದಾರೆ. ಹಿಜಾಬ್-ಕೇಸರಿ ಕಿತ್ತೆಸೆದು ಪರಸ್ಪರ ಆಲಿಂಗಸಿ, ಹಸ್ತಲಾಘವ ಮಾಡಿಕೊಂಡಿದ್ದಾರೆ ಶಾಲೆಯ ಹಿಂದೂ-ಮುಸ್ಲಿಂ ವಿದ್ಯಾರ್ಥಿನಿಯರು! ಶಾಲಾ ಪ್ರವೇಶಕ್ಕೂ ಮುನ್ನ ಭಾವೈಕ್ಯತೆ ಮೆರೆದ ವಿದ್ಯಾರ್ಥಿನಿಯರು ನಮಗೆ ಹಿಜಾಬ್‌ ಕೇಸರಿ ಶಾಲಿಗಿಂತ ಶಾಲೆಗಳು‌ ಕಾಲೇಜುಗಳು ಆರಂಭವಾಗಬೇಕೆಂದು ಹೇಳಿದರು.

ಹಿಜಾಬ್-ಕೇಸರಿ ಶಾಲಿನಿಂದ ನಮ್ಮಲ್ಲಿ ಒಡಕಾಗಬಾರದು. ನಾವೆಲ್ಲಾ ಭಾರತಾಂಬೆಯ ಮಕ್ಕಳು. ನಮಗೆ ಹಿಜಾಬ್-ಕೇಸರಿ ಶಾಲು ಬೇಡಾ. ನಾವೆಲ್ಲಾ ಒಂದೇ, ನಾವು ಬೇರೆ ಬೇರೆಯಾಗಿದ್ದರೆ ಎಂದೋ ಬೇರೆ ದೂರವಾಗುತ್ತಿದ್ದೆವು. ನಾವು ಒಂದೇ ತಾಯಿ ಮಕ್ಕಳು. ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದೇವೆ. ಹಿಜಾಬ್ ನಮ್ಮ ರಕ್ಷಣೆಗಾಗಿ ಹಾಕಿಕೊಂಡಿದ್ದು, ಅದು ನಮ್ಮ ಧಾರ್ಮಿಕ ಹಕ್ಕು. ಶಾಲಾ ತರಗತಿಯಲ್ಲಿ ನಾವು ಹಿಜಾಬ್ ಹಾಕಲ್ಲಾ ಎಂದು ವಿದ್ಯಾರ್ಥಿನಿಯರು ಒಡಕು ಇಲ್ಲದ ದನಿಯಲ್ಲಿ ಸ್ಪಷ್ಟ ಮಾತುಗಳಲ್ಲಿ ಹೇಳಿದರು. ಹಿಂದೂ ಮತ್ತು ಮುಸ್ಲಿಂ ಬೇರೆಬೇರೆಯಲ್ಲಾ. ನಾವೆಲ್ಲಾ ಒಂದೇ. ಕೆಲವರಿಂದ ಮಾತ್ರ ಹೀಗಾಗಿದೆ ಎಂದು ವಿದ್ಯಾರ್ಥಿನಿಯರು ಬೇಸರದ ದನಿಯಲ್ಲಿ ಹೇಳಿದರು. ತನ್ಮೂಲಕ Hijab Row what next? ಅನ್ನುವವರ ಮುಂದೆ ಹೆಮ್ಮೆಯಿಂದ ತಲೆಯೆತ್ತಿ ನಡೆದರು (Hijab Row).

ಹೈಕೋರ್ಟ್​ನಲ್ಲಿಂದು ಸಮವಸ್ತ್ರ ಸಂಘರ್ಷ ವಿಚಾರಣೆ ಮುಂದುವರಿಕೆ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಹಕ್ಕಿನ ವಿವಾದ ಮುಗಿಯುವ ಹಂತಕ್ಕೆ ಬಂದಿದೆ. ಇವತ್ತು 2.30 ಕ್ಕೆ ಹೈಕೋರ್ಟ್ ಪೂರ್ಣ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಿದೆ. ಅದು ಕೂಡ 6 ರಿಟ್ ಅರ್ಜಿ, ಕೆಲ ಮಧ್ಯಂತರ ಅರ್ಜಿಗಳ ವಿಚಾರಣೆ ಆಗಲಿದೆ. ಇವತ್ತು ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡೋ ಸಾಧ್ಯತೆ ಇದೆ. ಅದು ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಹೈಕೋರ್ಟ್ ಪ್ರಶ್ನೆ ಮಾಡುವ ಸಾಧ್ಯತೆ ಇದೆ. ಒಂದು ವೇಳೆ ಹೈಕೋರ್ಟ್ ಪ್ರಶ್ನೆ ಕೇಳಿದ್ರೆ ಸರ್ಕಾರ ಕೈಗೊಂಡ ಕ್ರಮದ‌ ಬಗ್ಗೆ ಎಜಿ ವಿವರಣೆ ಕೊಡಲಿದ್ದಾರೆ.

ಅಂತಿಮ ತೀರ್ಪಿಗಾಗಿ ವಾದ ಮಂಡನೆ? ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ, ದೇವದತ್ ಕಾಮತ್ ಇವತ್ತು ವಾದ ಮುಂದುವರಿಸಲಿದ್ದಾರೆ. ಅಲ್ದೆ, ತರಗತಿಯೊಳಗೆ ಹಿಜಾಬ್ ಧರಿಸುವುದು ಧಾರ್ಮಿಕ ಅಗತ್ಯತೆಯೇ? ಧಾರ್ಮಿಕ ಆಚರಣೆಯ ಮೂಲ ಅಂಶ ಎಂದು ಮನವರಿಕೆಗೆ ಯತ್ನಿಸಲು ಮುಂದಾಗೋ ಸಾಧ್ಯತೆ ಇದೆ. ಇನ್ನು, ಎರಡೂ ಕಡೆಯಿಂದ್ಲೂ ಶಿರೂರು ಮಠ ಕೇಸ್ ಉಲ್ಲೇಖ ಮಾಡಬಹುದು. ಅಲ್ದೆ, ಯಾವುದು ಅತ್ಯಗತ್ಯ ಆಚರಣೆ. ಯಾವುದು ಅಲ್ಲ ಎಂದು ವಿಶ್ಲೇಷಣೆ ಮಾಡಬಹುದು. ಜೊತೆಗೆ ಖುರಾನ್ನಲ್ಲಿ ಯಾವುದು ಕಡ್ಡಾಯ ಆಚರಣೆ, ಯಾವುದಲ್ಲ ಅಂತಾ ಎಜಿ ವಾದ ಮಂಡಿಸುವ ಸಾಧ್ಯತೆ ಇದೆ. ಸದ್ಯ ಈಗಾಗಲೇ ರಾಜ್ಯ ಸರ್ಕಾರ ವಿವರವಾದ ಆಕ್ಷೇಪಣೆ ಸಲ್ಲಿಸಿದೆ.

ಇವತ್ತೇ ವಾದ ಮಂಡನೆ ಪೂರ್ಣವಾಗೋದು ಡೌಟ್ ಇನ್ನು, ಇವತ್ತೇ ವಾದಮಂಡನೆ ಪೂರ್ಣ ವಾಗುವ ಸಾಧ್ಯತೆ ಇಲ್ಲ. ಯಾಕಂದ್ರೆ, ಹಲವು ಅರ್ಜಿಗಳಿರುವುದರಿಂದ‌ ವಾದಮಂಡನೆ ಪೂರ್ಣಗೊಳಿಸಲು ಕೆಲ ದಿನ ಬೇಕು. ಅದ್ರಲ್ಲೂ ಎಲ್ಲರ ವಾದ ಕೇಳಿದ‌ ನಂತರವೇ ಅಂತಿಮ ತೀರ್ಪು ನೀಡುವ ಸಾಧ್ಯತೆ ಇದೆ. ಒಟ್ಟಾರೆ, ಒಂದ್ಕಡೆ ಶಾಲೆ ಓಪನ್ ಆಗಿದ್ದು ಮತ್ತೊಂದ್ಕಡೆ ಸದನ ಕದನ ಇದೆ. ಈ ನಡುವೆ ಹೈಕೋರ್ಟ್ನಲ್ಲಿ ವಿಚಾರಣೆ ಇದೆ. ಹೀಗಾಗಿ ಇಡೀ ರಾಜ್ಯದ ಜನತೆಯ ಚಿತ್ತ ಹೈಕೋರ್ಟ್ನತ್ತ ನೆಟ್ಟಿದೆ.

ಇದನ್ನೂ ಓದಿ: ಸಮವಸ್ತ್ರ ಸಂಘರ್ಷ: ಹೈಕೋರ್ಟ್​ನಲ್ಲಿ ಇಂದು ವಿಚಾರಣೆ ಮುಂದುವರಿಕೆ; ಏನಾಗಲಿದೆ ತೀರ್ಪು, ಜನತೆ ಚಿತ್ತ ಹೈಕೋರ್ಟ್​ನತ್ತ

ಇದನ್ನೂ ಓದಿ: Honesty at KIAL: ಏರ್‌ಪೋರ್ಟ್ನಲ್ಲಿ ಪ್ರಯಾಣಿಕ ಮರೆತುಹೋಗಿದ್ದ ಹಣದ ಬ್ಯಾಗನ್ನು ವಾಪಸ್ ನೀಡಿ, ಪ್ರಾಮಾಣಿಕತೆ ತೋರಿದ ಸಿಬ್ಬಂದಿ

Published On - 12:19 pm, Mon, 14 February 22