ಜಯಲಲಿತಾಗೆ ಸೇರಿದ್ದ 27 ಕೆಜಿ ತೂಕದ ಚಿನ್ನಾಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಒಪ್ಪಿಸಲಾಗಿದೆ: ಕಿರಣ್, ಎಸ್​ಪಿಪಿ

ಅರುಣ್​ ಕುಮಾರ್​ ಬೆಳ್ಳಿ

Updated on: Feb 15, 2025 | 7:51 PM

ಚೆನೈ, ಕಾಂಚಿಪುರ, ತೂತ್ತೂಕುಡಿ, ಚೆಂಗಲ್​ಪೇಟ್, ತಂಜಾವೂರು, ತಿರುವಲ್ಲ, ತಿರುವಾಯೂರು ಮೊದಲಾದ ಕಡೆಗಳಲ್ಲಿ ಜಯಲಲಿತಾ ಅವರಿಗೆ ಸೇರಿದ 1526 ಎಕರೆ ಜಮೀನನ್ನು ತಮಿಳುನಾಡು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡಿದೆ ಎಂದು ಕಿರಣ್ ಹೇಳಿದರು. ಇದಲ್ಲದೆ ಅವರಿಗೆ ಸೇರಿದ ಒಂದು ಬಸ್ಸನ್ನೂ ಬಹಳ ಹಿಂದೆಯೇ ಸೀಜ್ ಮಾಡಲಾಗುತ್ತು ಮತ್ತು ಅದನ್ನು ಮಾರಿ ಬಂದ ಹಣವನ್ನು ತಮಿಳುನಾಡು ಸರ್ಕಾರಕ್ಕೆ ಒಪ್ಪಿಸಿ ಅಂತ ಕೋರ್ಟ್ ಆದೇಶಿಸಿದೆ ಎಂದು ಕಿರಣ್ ಹೇಳಿದರು.

ಬೆಂಗಳೂರು: ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ ಜಯಲಲಿತಾ ಅವರು ಬದುಕಿದ್ದ ಸಮಯದಲ್ಲಿ ಒಬ್ಬ ರಾಣಿಯ ಹಾಗೆ ಜೀವನ ನಡೆಸಿದ ಬಗ್ಗೆ ಎರಡು ಮಾತಿಲ್ಲ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಅವರಿಗೆ ಸೇರಿದ ಹಲವಾರು ಲಾಕರ್ ಗಳನ್ನು ತೆರೆದು ಅದರಲ್ಲಿದ್ದ ವಜ್ರಖಚಿತ, ರತ್ನ ಖಚಿತ ಚಿನ್ನದ ಆಭರಣಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ. ನಗರದಲ್ಲಿ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾಹಿತಿ ನೀಡಿದ ಎಸ್​ಪಿಪಿ ಕಿರಣ್, ಆಭರಣಗಳ ಒಟ್ಟು ತೂಕ 27 ಕೆಜಿ, ವಶಕ್ಕೆ ಒಪ್ಪಿಸಲಾದ ವಸ್ತುಗಳನ್ನು ತಮಿಳುನಾಡು ಸರ್ಕಾರ ಆರ್ ಬಿಐಗೆ ಹಸ್ತಾಂತರಿಸಬಹದು ಇಲ್ಲವೇ ಹರಾಜು ಮಾಡಬಹುದು ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜಯಲಲಿತಾ ಬಳಿ ಇದ್ದ ಸಾವಿರಾರು ಕೋಟಿ ರೂ. ಚಿನ್ನ-ವಜ್ರಾಭರಣಗಳ ಫೋಟೋಗಳನ್ನ ನೋಡಿ  

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.