ಒಂದು ರಾಜ್ಯ, ಹಲವು ಭಾಷೆ; ಕರುನಾಡಿನ ಕನ್ನಡ ನುಡಿಗಳಿವು

|

Updated on: May 25, 2024 | 12:07 PM

2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 66% ಜನರು ಮಾತ್ರ ಕನ್ನಡವನ್ನು ಮಾತೃಭಾಷೆಯಾಗಿ ಬಳಸುತ್ತಾರೆ. ಉಳಿದ ಜನರು ಯಾವ ಭಾಷೆ ಮಾತನಾಡುತ್ತಾರೆ? ಕರ್ನಾಟಕದಲ್ಲಿ ಜನರು ಮಾತನಾಡುವ ಉಪಭಾಷೆಗಳು ಯಾವುವು? ವಿವಿಧ ಪ್ರದೇಶಗಳಲ್ಲಿನ ಕನ್ನಡ ಒಂದಕ್ಕೊಂದು ಯಾವ ರೀತಿ ಭಿನ್ನವಾಗಿದೆ. ಕರ್ನಾಟಕ ರಾಜ್ಯದ ಭಾಷಾ ವೈವಿಧ್ಯತೆ ಬಗ್ಗೆ ಬೆಳಕು ಚೆಲ್ಲುವ ಲೇಖನ ಇಲ್ಲಿದೆ. ಓದಿ

ಒಂದು ರಾಜ್ಯ, ಹಲವು ಭಾಷೆ; ಕರುನಾಡಿನ ಕನ್ನಡ ನುಡಿಗಳಿವು
ಕನ್ನಡ ಭಾಷೆ
Follow us on

ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು! ಕಾಮನ ಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈಮರೆಯುವುದು. ಕನ್ನಡಾ! ಕನ್ನಡ, ಹಾ, ಸವಿಗನ್ನಡ- ಎಂದು ಹೇಳುತ್ತಾರೆ ಕುವೆಂಪು. ಕರ್ನಾಟಕವೆಂದರೆ ಒಂದು ರಾಜ್ಯ, ಹಲವು ಜಗತ್ತು. ಇದು ಪ್ರವಾಸೋದ್ಯಮ ತಾಣ, ವಾಸ್ತುಶಿಲ್ಪ ಜತೆಗೇ ಶತಮಾನಗಳ ಹಿಂದಿನ ಇತಿಹಾಸಸವಿರುವ ಈ ನಾಡು, ನುಡಿಸಂಸ್ಕೃತಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಆದಾಗ್ಯೂ, ಕರುನಾಡು ಹಲವು ಭಾಷೆಗಳ ಸಂಪತ್ತನ್ನು ಹೊಂದಿದೆ. 1956 ರಲ್ಲಿ ರಾಜ್ಯಗಳ ಮರುಸಂಘಟನೆ ಕಾಯಿದೆಯನ್ನು ರಚಿಸಿದ್ದು, ರಾಜ್ಯ ಗಡಿಗಳನ್ನು ಭಾಷಾವಾರು ಆಧಾರದ ಮೇಲೆ ಮರುಹೊಂದಿಸಲಾಯಿತು. ಈ ಪುನರ್ವಿನ್ಯಾಸವು ಭಾರತದ ಅತಿದೊಡ್ಡ ಆಡಳಿತ-ಆಧಾರಿತ ಮರುಸಂಘಟನೆಗಳಲ್ಲಿ ಒಂದಾಗಿದೆ. ಮೈಸೂರು ರಾಜ್ಯವಾಗಿ ರಚಿಸಲ್ಪಟ್ಟ ಇದನ್ನು 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಕನ್ನಡ ಇಲ್ಲಿ ಅಧಿಕೃತ ಭಾಷೆಯಾಯಿತು. ಅಂದಹಾಗೆ ಕರ್ನಾಟಕದಲ್ಲಿ ಕನ್ನಡ ಹೊರತಾಗಿ ಹಲವಾರು ಭಾಷೆಗಳನ್ನು ಮಾತನಾಡುವ ಜನರು ಇದ್ದಾರೆ. ಕರ್ನಾಟಕ ರಾಜ್ಯದಲ್ಲಿನ  ಭಾಷಾ ವೈವಿಧ್ಯತೆ ಬಗ್ಗೆ ಬೆಳಕು ಚೆಲ್ಲುವ ಲೇಖನ ಇಲ್ಲಿದೆ. ಕರ್ನಾಟಕ ರಾಜ್ಯದಾದ್ಯಂತ ಪ್ರಯಾಣಿಸಿದರೆ, ತುಳು (ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ), ಕೊಡವ (ಕೊಡಗು), ಬ್ಯಾರಿ (ದಕ್ಷಿಣ ಕನ್ನಡದ ಮುಸ್ಲಿಮರು,ಕೇರಳದ ಗಡಿಗಳು ಮತ್ತು ಉಡುಪಿಗೆ ಹತ್ತಿರ ಪ್ರದೇಶ), ದಖನಿ ಉರ್ದು ( ಉತ್ತರ ಕರ್ನಾಟಕದ ಬಿಜಾಪುರ ಮತ್ತು ಗುಲ್ಬರ್ಗದ ಸುತ್ತಮುತ್ತ) ಕೊರಗ (ದಕ್ಷಿಣ ಕನ್ನಡದ ಕೊರಗ ಬುಡಕಟ್ಟು ಜನರ ಭಾಷೆ), ಸಂಕೇತಿ (ತಮಿಳುನಾಡಿನ ಮೂಲದ ಸಂಕೇತಿ ಜನರ ಭಾಷೆ), ನವಯತಿ (ಭಟ್ಕಳ) ಸೇರಿದಂತೆ ಕೊಂಕಣಿ, ಹಕ್ಕಿಪಿಕ್ಕಿ ಮೊದಲಾದ ಭಾಷೆಗಳನ್ನು ಇಲ್ಲಿನ ಜನರು ಮಾತನಾಡುತ್ತಾರೆ. 2011ರ ಜನಗಣತಿಯ ಪ್ರಕಾರ ಇಲ್ಲಿನ 66% ಜನರು ಮಾತ್ರ ಕನ್ನಡವನ್ನು...

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ