ರಮೇಶ್​ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ ದಿನೇಶ್​ ಕಲ್ಲಹಳ್ಳಿ ವಿರುದ್ಧ ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ದೂರು ದಾಖಲು

|

Updated on: Mar 03, 2021 | 4:38 PM

Ramesh Jarkiholi CD Controversy: ದಿನೇಶ್ ಕಲ್ಲಹಳ್ಳಿಗೂ ರಾಸಲೀಲೆ ಪ್ರಕರಣಕ್ಕೂ ಸಂಬಂಧವಿಲ್ಲ. ಯುವತಿಗೆ ಅನ್ಯಾಯವಾಗಿದ್ದರೆ ಅವರೇ ಏಕೆ ದೂರು ನೀಡಿಲ್ಲ? ಇದೊಂದು ಬ್ಲ್ಯಾಕ್​ಮೇಲ್​ ರಾಜಕಾರಣ ಎಂದು ಆರೋಪಿಸಿ ಕರ್ನಾಟಕ ಕನ್ನಡ ಪರ ಒಕ್ಕೂಟದ ಅಧ್ಯಕ್ಷ ಪುಟ್ಟೇಗೌಡ ದೂರು ನೀಡಿದ್ದಾರೆ.

ರಮೇಶ್​ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ ದಿನೇಶ್​ ಕಲ್ಲಹಳ್ಳಿ ವಿರುದ್ಧ ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ದೂರು ದಾಖಲು
ದಿನೇಶ್ ಕಲ್ಲಹಳ್ಳಿ
Follow us on

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿ, ರಮೇಶ್​ ಜಾರಕಿಹೊಳಿ ರಾಜಿನಾಮೆಗೂ ಕಾರಣವಾದ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ವಿರುದ್ಧ ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಕನ್ನಡ ಪರ ಒಕ್ಕೂಟದಿಂದ ದಿನೇಶ್​ ಕಲ್ಲಹಳ್ಳಿ ವಿರುದ್ಧ ದೂರು ದಾಖಲಿಸಲಾಗಿದ್ದು, ರಾಜಕೀಯ ಷಡ್ಯಂತ್ರದಿಂದ ಸಚಿವರ ತೇಜೋವಧೆ ಮಾಡಲಾಗಿದೆ ಎಂದು ಆರೋಪ ಹೊರಿಸಲಾಗಿದೆ. ದಿನೇಶ್ ಕಲ್ಲಹಳ್ಳಿಗೂ ರಾಸಲೀಲೆ ಪ್ರಕರಣಕ್ಕೂ ಸಂಬಂಧವಿಲ್ಲ. ಯುವತಿಗೆ ಅನ್ಯಾಯವಾಗಿದ್ದರೆ ಅವರೇ ಏಕೆ ದೂರು ನೀಡಿಲ್ಲ? ಇದೊಂದು ಬ್ಲ್ಯಾಕ್​ಮೇಲ್​ ರಾಜಕಾರಣ ಎಂದು ಆರೋಪಿಸಿ ಕರ್ನಾಟಕ ಕನ್ನಡ ಪರ ಒಕ್ಕೂಟದ ಅಧ್ಯಕ್ಷ ಪುಟ್ಟೇಗೌಡ ದೂರು ನೀಡಿದ್ದಾರೆ.

ಆ ವಿಡಿಯೋವನ್ನು ಸಂಪೂರ್ಣ ಎಡಿಟ್​ ಮಾಡಿಸಲಾಗಿದೆ. ರಾಸಲೀಲೆ ದೃಶ್ಯ ಚಿತ್ರೀಕರಿಸಿದ್ದು, ಎಡಿಟ್​ ಮಾಡಿದ್ದು ಯಾರು? ಇಷ್ಟಕ್ಕೂ ಆ ದೃಶ್ಯವನ್ನು ನೋಡಿದರೆ ಸಮ್ಮತಿ ಲೈಂಗಿಕ ಕ್ರಿಯೆ​ ಥರ ಕಾಣುತ್ತಿದೆ. ಆದರೆ, ಇದನ್ನ ಬಳಸಿಕೊಂಡು ಸಚಿವರ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ. ಈ ಬ್ಲ್ಯಾಕ್​ಮೇಲ್ ರಾಜಕಾರಣಕ್ಕೆ ಸಂಬಂಧಿಸಿದಂತೆ ದಿನೇಶ್ ಕಲ್ಲಹಳ್ಳಿಯನ್ನ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಸಂತ್ರಸ್ತೆ ಕುಟುಂಬದವರು ಭಯದಲ್ಲಿ ಬದುಕುತ್ತಿದ್ದಾರೆ
ಈ ಬಗ್ಗೆ ನಿನ್ನೆ ಮಾತನಾಡಿದ್ದ ದಿನೇಶ್​ ಕಲ್ಲಹಳ್ಳಿ, ಸಂತ್ರಸ್ತೆ ಕುಟುಂಬ ಬಹಳ ಭಯದಲ್ಲಿ ಬದುಕುತ್ತಿದ್ದಾರೆ. ಸಂತ್ರಸ್ತೆ ಕುಟುಂಬದ ಸದಸ್ಯರೊಬ್ಬರು ಸಂಪರ್ಕಿಸಿದ್ದರು. ನಿನ್ನೆ ನನ್ನನ್ನು ಸಂಪರ್ಕಿಸಿದ್ದ ಸಂತ್ರಸ್ತೆ ಕುಟುಂಬ ಸದಸ್ಯರು ಹಾಗೂ ವಕೀಲರ ಜೊತೆ ಚರ್ಚಿಸಿ ಪೊಲೀಸರಿಗೆ ದೂರು ನೀಡಿದ್ದೇನೆ. ಇದೊಂದು ಬಹಳ ಸೂಕ್ಷ್ಮ ಪ್ರಕರಣವಾಗಿರುವುದರಿಂದ ಸಂತ್ರಸ್ತೆ, ಕುಟುಂಬದ ಬಗ್ಗೆ ವಿವರಣೆ ನೀಡಲಾಗುವುದಿಲ್ಲ ಎಂದು ಹೇಳಿದ್ದರು. ಅಂತೆಯೇ, ನಾನು ನೀಡಿರುವ ದೂರಿನ ಬಗ್ಗೆ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ದೂರನ್ನು ಸ್ವೀಕರಿಸಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಸೆಕ್ಸ್​​ ವಿಡಿಯೋ ಬಗ್ಗೆ ಕಬ್ಬನ್​ಪಾರ್ಕ್​ ಠಾಣೆ ಸಮೀಪ ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಪ್ರತಿಕ್ರಿಯೆ ನೀಡಿದ್ದರು. ಇದು ಅಧಿವೇಶನದ ಸಂದರ್ಭವೆಂದು ನಾನು ದೂರು ನೀಡಿಲ್ಲ. ಅಧಿವೇಶನ ಯಾವಾಗ ಇದೆ ಎಂಬುದೇ ನನಗೆ ಗೊತ್ತಿಲ್ಲ. ಸಂತ್ರಸ್ತೆ ಕುಟುಂಬಸ್ಥರ ಮಾಹಿತಿ ಮೇರೆಗೆ ದೂರು ನೀಡಿದ್ದೇನೆ ಅಷ್ಟೇ ಎಂದು ತಿಳಿಸಿದ್ದರು.

ಇದನ್ನೂ ಓದಿ: 
‘ಸಂತ್ರಸ್ತೆ ಕುಟುಂಬ ಬಹಳ ಭಯದಲ್ಲಿ ಬದುಕುತ್ತಿದ್ದಾರೆ; ಅಧಿವೇಶನದ ಸಂದರ್ಭವೆಂದು ನಾನು ದೂರು ನೀಡಿಲ್ಲ’

ಅಣ್ಣನ ರಾಜೀನಾಮೆ ಅಂಗೀಕರಿಸಿದ್ರೆ ನಿಮ್ಮ(ಯಡಿಯೂರಪ್ಪ) ಸಿ.ಡಿ. ರಿಲೀಸ್ ಮಾಡ್ತೀನಿ ಅಂತಿದ್ದಾನಂತೆ: ಇಂಥಾ ಮಾನಗೆಟ್ಟ ಸರ್ಕಾರ ಬೇಕಾ? -ಸಿದ್ದರಾಮಯ್ಯ

Published On - 4:29 pm, Wed, 3 March 21