Evening Digest | ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ, ಬೆಳವಣಿಗೆಗಳಿವು
Kannada News Today: ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
ಇಂದು ನೀವು ಮಿಸ್ ಮಾಡಿಕೊಳ್ಳದೇ ಗಮನಿಸಬೇಕಾದ 9 ಪ್ರಮುಖ ಸುದ್ದಿ / ಬೆಳವಣಿಗೆಗಳ ಮಾಹಿತಿ ಇಲ್ಲಿದೆ. ದೇಶ-ವಿದೇಶಗಳಿಂದ ನಾಲ್ಕು ದಿಕ್ಕಿನಿಂದ ಸಾವಿರಾರು ಸುದ್ದಿ ಹರಿದಾಡುತ್ತಿರುತ್ತವೆ. ಕ್ಷಣಾರ್ಧದಲ್ಲಿ ಬಹುತೇಕ ಸುದ್ದಿಗಳನ್ನು ನಿಮಗೆ ತಲುಪಿಸುವ ಕಾರ್ಯ ಟಿವಿ9 ವೆಬ್ಸೈಟ್ ಮಾಡುತ್ತಿದೆ. ದಿನವಿಡೀ ಹರಿದುಬರುವ ಸುದ್ದಿ ಪ್ರವಾಹದಲ್ಲಿ ಅತಿಮುಖ್ಯ ಸುದ್ದಿ / ಬೆಳವಣಿಗೆ ನಿಮ್ಮ ಕಣ್ತಪ್ಪಬಾರದು. ಹೀಗಾಗಿಯೇ 9 ಪ್ರಮುಖ ಸುದ್ದಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಟಿವಿ9 ಡಿಜಿಟಲ್ ತಂಡ ಮಾಡಿದೆ.
1) ಕೊವಿಡ್-19 ಲಸಿಕೆ ಪಡೆಯಲು ಹೆಸರು ನೋಂದಣಿ ಹೇಗೆ? ಕೊರೊನಾ ತಡೆ ಲಸಿಕೆ ಪಡೆಯಲು ಕೋವಿಡ್ ಪೋರ್ಟಲ್ ಅಥವಾ ಆ್ಯಪ್ನಲ್ಲಿ ಹೆಸರು ನೋಂದಾಯಿಸಿಕೊಳ್ಳುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. Link: ನೋಂದಣಿ ಪ್ರಕ್ರಿಯೆಯ ಸಂಪೂರ್ಣ ವಿವರ ಇಲ್ಲಿದೆ
2) ರಾಜಕೀಯ ವಿಶ್ಲೇಷಣೆ | ರಮೇಶ್ ಜಾರಕಿಹೊಳಿ ಮುಂದಿರುವ ಮೂರು ಆಯ್ಕೆಗಳು ಈ ಆಯ್ಕೆ ಮಾಡುವಾಗ ಕೂಡ ರಮೇಶ ಜಾರಕಿಹೊಳಿ ತಮ್ಮ ವೈಯಕ್ತಿಕ ಲಾಭ ಬಿಟ್ಟು ಪಕ್ಷ ಉಳಿಸುವ ಕುರಿತು ವಿಚಾರ ಮಾಡಲಿಕ್ಕಿಲ್ಲ. Link: ‘ಸಾಹುಕಾರ’ನ ಎದುರು ಮೂರು ಆಯ್ಕೆಗಳು
3) ಮನೆಯಲ್ಲಿ ಕೆಲಸ, ಮನದಲ್ಲಿ ದುಗುಡ: ವರ್ಕ್ ಫ್ರಮ್ ಹೋಮ್ಗೆ ಒಂದು ವರ್ಷ ಮನೆಯಲ್ಲಿ ಆಫೀಸ್ ಕೆಲಸ ಮಾಡುವವರ ಕಷ್ಟಸುಖಗಳನ್ನು ವಿವರಿಸಿರುವ ಆಪ್ತಬರಹ ಇದು. Link: ಮನೇಲೇ ಆಫೀಸು, ಸಾಕಾ? ಬೇಕಾ?
4) ಅಪ್ಪನಾಗುವುದೆಂದರೆ: ನಿನಗೆ ಇನ್ನೂ ಬೇರೆ ಜವಾಬ್ದಾರಿಗಳಿವೆ ಎಂದು ಹೇಳಿಹೋದ ಮಗಳು ಕನ್ಯಾದಾನ ಮಾಡಬೇಕಿದ್ದ ಕೈಗಳಿಂದ ಅಗ್ನಿಸ್ಪರ್ಶ ಮಾಡುವ ಸಂದರ್ಭ ನಿಜಕ್ಕೂ ಕಠೋರವಾದುದು. ಒಪ್ಪಿಕೊಳ್ಳದೆ ವಿಧಿಯಿಲ್ಲ. Link: ಮಗಳಿಲ್ಲದ ಜೀವನ ಮರುರೂಪಿಸಿಕೊಂಡ ಬಗೆ
6. ಕರ್ನಾಟಕ ಬಜೆಟ್ನಲ್ಲಿ ಕೃಷಿ ಕ್ಷೇತ್ರದ ನಿರೀಕ್ಷೆ ಬಗ್ಗೆ ಪ್ರಕಾಶ್ ಕಮ್ಮರಡಿ ಅಭಿಪ್ರಾಯ ರಾಜ್ಯದಲ್ಲಿ 21 ಲಕ್ಷ ಹೆಕ್ಟೇರ್ ಭೂಮಿ ಬೀಳು ಬಿದ್ದಿದೆ. ಅದರ ಸದ್ಬಳಕೆ ಆಗಬೇಕು. ಸಹಕಾರ ತತ್ವದಡಿ ಕೃಷಿ ಬಗ್ಗೆ ಯೋಚಿಸಬೇಕು. Link: ಸಹಕಾರ ಕೃಷಿ ಬಗ್ಗೆ ಯೋಚಿಸೋಣ
7. ರಮೇಶ್ ಜಾರಕಿಹೊಳಿ ರಾಜೀನಾಮೆ ನಿನ್ನೆ ಸಂಜೆ ರಮೇಶ್ ಜಾರಕಿಹೊಳಿ ವಿರುದ್ಧ ಸೆಕ್ಸ್ ಬಾಂಬ್ ಬ್ಲಾಸ್ಟ್ ಆಗಿತ್ತು. ರಾಜ್ಯದ ಜನರ ಮುಂದೆ ಮಿನಿಸ್ಟರ್ ಬೆತ್ತಲಾಗಿದ್ರು. ಸದ್ಯ ಸರ್ಕಾರಕ್ಕೆ ಮುಜುಗರ ತಪ್ಪಿಸಲು ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಸಿಎಂ ಬಿ.ಎಸ್.ಯಡಿಯೂರಪ್ಪಗೆ ರವಾನೆ ಮಾಡಿದ್ದು ತಮ್ಮ ನಿಲುವನ್ನು ತಿಳಿಸಿದ್ದಾರೆ. Link: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ರಮೇಶ್ ಜಾರಕಿಹೊಳಿ ರಾಜೀನಾಮೆ ರವಾನೆ
7. ಅಂತಿಮ ಪಂದ್ಯಕ್ಕೆ ಸಜ್ಜಾದ ಇಂಗ್ಲೆಂಡ್ ನಾಯಕ, ತಂಡದ ಬಲಾಬಲ ಹೀಗಿದೆ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಗುರುವಾರ ಈ ಪಂದ್ಯ ಆರಂಭವಾಗಲಿದ್ದು ಭಾರತ ಈ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ಅಂತಿಮ ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಂಡರೂ ಟೀಂ ಇಂಡಿಯಾ ಸರಣಿಯನ್ನು ಗೆಲ್ಲಲಿದೆ. Link: ಸರಣಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ ಅದು ನನ್ನ ಶ್ರೇಷ್ಠ ಸಾಧನೆ: ಇಂಗ್ಲೆಂಡ್ ನಾಯಕ
8. ಗಣಿನಾಡಿನಲೊಂದು ವದಂತಿ.. ಸೀರೆ ಖರೀದಿಗೆ ನೂಕುನುಗ್ಗಲು ಗಣಿ ನಾಡು ಬಳ್ಳಾರಿಯ ಸೀರೆ ಅಂಗಡಿಗಳಲ್ಲಿ ಈಗ ಎಲ್ಲಿ ನೋಡಿದರೂ ಮಹಿಳೆಯರು ಸೀರೆ ಖರೀದಿಗೆ ಮುಗಿ ಬಿದ್ದಿರುವುದೇ ಕಾಣುತ್ತೆ. ಏಕೆಂದರೆ ಇಲ್ಲಿ ಹಬ್ಬಿರುವ ವದಂತಿಯೊಂದು ಮಹಿಳೆಯರನ್ನು ಸೀರೆ ಅಂಗಡಿಗಳ ಮುಂದೆ ನಿಲ್ಲುವಂತೆ ಮಾಡಿದೆ. Link: ಬಳ್ಳಾರಿಯಲ್ಲಿ ಹರಡಿದೆ ವದಂತಿ
9. ಕರ್ತವ್ಯ ಲೋಪವೆಸಗಿದ ವೈದ್ಯರು ಅಮಾನತು ಹೆರಿಗೆ ನೋವಿನಿಂದ ಸಮುದಾಯ ಆರೋಗ್ಯ ಕೇಂದ್ರದ ಬಾಗಿಲಿಗೆ ಬಂದಿದ್ದ ಗರ್ಭಿಣಿಗೆ ಚಿಕಿತ್ಸೆ ಕೊಡದೆ ಬಾಗಿಲು ಮುಚ್ಚಿದ್ದು ಆಸ್ಪತ್ರೆ ಮುಂಭಾಗವೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದರು. Link: ಆಸ್ಪತ್ರೆ ಬಾಗಿಲನ್ನು ತೆರೆಯದೆ ಅಸಡ್ಡೆ; ಕರ್ತವ್ಯ ಲೋಪಕ್ಕೆ ವೈದ್ಯ ಅಮಾನತು
ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.tv9kannada.com ನೋಡುತ್ತಿರಿ.