ಅಮ್ಮಂದಿರಿಗೆ ಹೆಣ್ಣುಮಕ್ಕಳು ಸೀರೆ ಖರೀದಿಸಿ ಕೊಡಬೇಕು.. ಬಳ್ಳಾರಿಯಲ್ಲಿ ಹರಡಿದೆ ಸಖತ್​ ವದಂತಿ

ಗಣಿ ನಾಡು ಬಳ್ಳಾರಿಯ ಸೀರೆ ಅಂಗಡಿಗಳಲ್ಲಿ ಈಗ ಎಲ್ಲಿ ನೋಡಿದರೂ ಮಹಿಳೆಯರು ಸೀರೆ ಖರೀದಿಗೆ ಮುಗಿ ಬಿದ್ದಿರುವುದೇ ಕಾಣುತ್ತಿದೆ. ತಾಯಿಗೆ ಸೀರೆ ಕೊಡಿಸದಿದ್ದರೆ ಕೆಟ್ಟದಾಗುತ್ತದೆ ಎನ್ನುವ ವದಂತಿ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಜೊತೆಗೆ ಇಂತಹ ವದಂತಿ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬಿದ್ದೆ ತಡ ಮಹಿಳೆಯರು ತಮ್ಮ ತಾಯಿಗೆ ಸೀರೆ ಕೊಡಿಸಲು ಮುಂದಾಗಿದ್ದಾರೆ.

ಅಮ್ಮಂದಿರಿಗೆ ಹೆಣ್ಣುಮಕ್ಕಳು ಸೀರೆ ಖರೀದಿಸಿ ಕೊಡಬೇಕು.. ಬಳ್ಳಾರಿಯಲ್ಲಿ ಹರಡಿದೆ ಸಖತ್​ ವದಂತಿ
ತಾಯಿಗೆ ಆರತಿ ಬೆಳಗಿ ಸೀರೆ ಕೊಡುತ್ತಿರುವ ಮಗಳು
Follow us
sandhya thejappa
| Updated By: ಸಾಧು ಶ್ರೀನಾಥ್​

Updated on: Mar 03, 2021 | 1:34 PM

ಬಳ್ಳಾರಿ: ಜನ ಮರಳೋ ಜಾತ್ರೆ ಮರಳೋ ಗೊತ್ತಿಲ್ಲ. ನಾವೆಲ್ಲಾ ಎಷ್ಟೇ ಆಧುನಿಕವಾಗಿ ಮುಂದುವರೆದಿದ್ದರೂ ನಮ್ಮ ಜನರು ಮಾತ್ರ ವದಂತಿಗಳಿಗೆ ಬೇಗ ಮಾರು ಹೋಗುತ್ತಾರೆ. ಈಗ ತಾಯಿಗೆ ಮಗಳು ಹೊಸ ಸೀರೆ ಕೊಡಿಸಬೇಕು ಎನ್ನುವ ವದಂತಿ ಈಗ ಗಣಿ ನಾಡಿನಲ್ಲಿ ಹಬ್ಬಿದೆ. ಸೀರೆ ಕೊಡದಿದ್ದರೆ ಕೇಡಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಮಹಿಳೆಯರು ತಾಯಿಗೆ ಸೀರೆ ಕೊಡಲು ಬಟ್ಟೆ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.

ಗಣಿ ನಾಡು ಬಳ್ಳಾರಿಯ ಸೀರೆ ಅಂಗಡಿಗಳಲ್ಲಿ ಈಗ ಎಲ್ಲಿ ನೋಡಿದರೂ ಮಹಿಳೆಯರು ಸೀರೆ ಖರೀದಿಗೆ ಮುಗಿ ಬಿದ್ದಿರುವುದೇ ಕಾಣುತ್ತಿದೆ. ತಾಯಿಗೆ ಸೀರೆ ಕೊಡಿಸದಿದ್ದರೆ ಕೆಟ್ಟದಾಗುತ್ತದೆ ಎನ್ನುವ ವದಂತಿ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಜೊತೆಗೆ ಇಂತಹ ವದಂತಿ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬಿದ್ದೇ ತಡ.. ಮಹಿಳೆಯರು ತಮ್ಮ ತಾಯಿಗೆ ಸೀರೆ ಕೊಡಿಸಲು ಮುಂದಾಗಿದ್ದಾರೆ. ಕೆಲವರು ಸೀರೆ ಕೊಡಿಸದಿದ್ದರೆ ಏನಾದರೂ ಕೇಡಾಗಬಹುದು ಎನ್ನುವ ಭಯದಿಂದಲೂ ಸೀರೆ ಕೊಡಿಸಲು ಬಟ್ಟೆ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.

ಬೆಳ್ಳಿ ಕಡಗ ವದಂತಿ ಈ ಹಿಂದೆಯೂ ಜನರು ಒಬ್ಬನೇ ಮಗನಿದ್ದರೆ ಅವರಿಗೆ ಬೆಳ್ಳಿ ಕಡಗ ಕೊಡಬೇಕು ಎನ್ನುವ ವದಂತಿ ಹಬ್ಬಿದಾಗ ಕೂಡ ಬೆಳ್ಳಿ ಕಡಗ ನೀಡಿದ್ದರು. ಈಗ ಮಗಳು ತಾಯಿಗೆ ಸೀರೆ ಕೊಡಬೇಕು ಎನ್ನುವ ವದಂತಿ ಹಬ್ಬಿದೆ. ಹೀಗಾಗಿ ಗಂಡನ ಮನೆಯಲ್ಲಿದ್ದರೂ ತವರು ಮನೆಗೆ ಹೋಗಿ ಮಹಿಳೆಯರು ತಾಯಿಗೆ ಸೀರೆ ಕೊಟ್ಟು ಬರುತ್ತಿದ್ದಾರೆ..

ಸೀರೆಯನ್ನು ಖರೀದಿಸುತ್ತಿರುವ ಮಹಿಳೆಯರು

ಸೀರೆಯನ್ನು ನೋಡುತ್ತಿರುವ ಮಹಿಳೆಯರು

ತಾಯಿ ಹಣೆಗೆ ಕುಂಕುಮ ಇಡುತ್ತಿರುವ ಮಗಳು

ದೂರದ ಊರು, ಬೇರೆ ಜಿಲ್ಲೆಯಲ್ಲಿ ತಾಯಿ ಇದ್ದರೂ ಅಲ್ಲಿಗೆ ಹೋಗಿ ಸೀರೆ ಕೊಟ್ಟು ಬರುತ್ತಿದ್ದಾರೆ. ಈ ಕಾರಣಕ್ಕಾಗಿ ನಗರದ ಬಟ್ಟೆ ಅಂಗಡಿಗಳಲ್ಲಿ ಕಳೆದ ಒಂದು ವಾರದಿಂದಲೂ ಸೀರೆ ಖರೀದಿ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ಕೊರೊನಾ ಹಾಗೂ ಲಾಕ್ಡೌನ್ ನಂತರ ಬಟ್ಟೆ ಅಂಗಡಿಗಳು ವ್ಯಾಪಾರ ಇಲ್ಲದೇ ಸಂಕಷ್ಟದ ಸ್ಥಿತಿಯಲ್ಲಿದ್ದವು. ಆದರೆ ಈಗ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿರುವ ಸೀರೆ ಕೊಡುವ ವದಂತಿಯಿಂದಾಗಿ ಭರ್ಜರಿಯಾಗಿ ಸೀರೆ ವ್ಯಾಪಾರ ನಡೆಯುತ್ತಿದೆ.

ವಿವಿಧ ಬಗೆಯ ಸೀರೆಗಳು

ಇದನ್ನೂ ಓದಿ

ನೋಟ್ ಬ್ಯಾನ್ ವದಂತಿಗೆ RBI ಸ್ಪಷ್ಟನೆೆ.. ದೇಶದಲ್ಲಿ ಸದ್ಯಕ್ಕೆ ಯಾವುದೇ ನೋಟ್​ ಬ್ಯಾನ್​ ಖಂಡಿತ ಆಗಲ್ಲ!

ಆಸ್ತಿ ವಿವಾದ, ಸಾಲಬಾಧೆ: ಬೆಂಗಳೂರಿನ ತಾಯಿ-ಮಗಳು ನರಸಾಪುರ ಕೆರೆಗೆ ಜಿಗಿದು ಆತ್ಮಹತ್ಯೆ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ