ಸರ್ಕಾರಿ ಬಸ್​​ಗಳ ಮೇಲೆ ಕಲ್ಲುತೂರಾಟ ನಡೆಸಿ ಪರಾರಿಯಾದ ರಮೇಶ್​ ಜಾರಕಿಹೊಳಿ ಬೆಂಬಲಿಗರು

Ramesh Jarkiholi CD Controversy: ರಮೇಶ್​ ಜಾರಕಿಹೊಳಿ ರಾಜೀನಾಮೆಯನ್ನು ಖಂಡಿಸಿ ಇಂದು ಬೆಳಗ್ಗೆಯಿಂದಲೂ ಗೋಕಾಕದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬೆಂಬಲಿಗರು, ಇದೀಗ ಸರ್ಕಾರಿ ಬಸ್​ಗಳ ಮೇಲೆ ಕಲ್ಲುತೂರಾಟ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದ್ಧಾರೆ.

ಸರ್ಕಾರಿ ಬಸ್​​ಗಳ ಮೇಲೆ ಕಲ್ಲುತೂರಾಟ ನಡೆಸಿ ಪರಾರಿಯಾದ ರಮೇಶ್​ ಜಾರಕಿಹೊಳಿ ಬೆಂಬಲಿಗರು
ಕಲ್ಲುತೂರಾಟದಿಂದ ಹಾನಿಗೊಳಗಾದ ಬಸ್​ಗಳು
Follow us
Skanda
|

Updated on:Mar 03, 2021 | 5:39 PM

ಬೆಳಗಾವಿ: ಅಶ್ಲೀಲ ವಿಡಿಯೋ ಕಾರಣದಿಂದ ಸಚಿವ ಸ್ಥಾನಕ್ಕೆ ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡಿದ ಬೆನ್ನಲ್ಲೇ, ಅವರ ಬೆಂಬಲಿಗರ ಪುಂಡಾಟ ಹೆಚ್ಚಾಗಿದೆ. ರಮೇಶ್​ ಜಾರಕಿಹೊಳಿ ರಾಜೀನಾಮೆಯನ್ನು ಖಂಡಿಸಿ ಇಂದು ಬೆಳಗ್ಗೆಯಿಂದಲೂ ಗೋಕಾಕದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬೆಂಬಲಿಗರು, ಇದೀಗ ಸರ್ಕಾರಿ ಬಸ್​ಗಳ ಮೇಲೆ ಕಲ್ಲುತೂರಾಟ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡಿದ್ಧಾರೆ. ಬೆಳಗಾವಿ ಜಿಲ್ಲೆ ಗೋಕಾಕ್​ನಲ್ಲಿ ಬಸ್​ಗಳ ಮೇಲೆ ಕಲ್ಲು ಎಸೆಯಲಾಗಿದ್ದು, ನಿಲ್ದಾಣದಲ್ಲಿ ನಿಂತಿದ್ದ 2 ಬಸ್​​ಗಳ ಹಿಂಬದಿ ಗಾಜು ಪುಡಿಗೊಳಿಸಿದ ಪುಡಾರಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ರಾಜೀನಾಮೆ ಬೆನ್ನಲ್ಲೇ ರಮೇಶ್​ ಜಾರಕಿಹೊಳಿ ಸ್ವಕ್ಷೇತ್ರದಲ್ಲಿ ಬೆಂಬಲಿಗರ ಪ್ರತಿಭಟನೆ ಜೋರಾಗುತ್ತಿದ್ದು, ದಿನೇಶ್​ ಕಲ್ಲಹಳ್ಳಿ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕುತ್ತಿದ್ದಾರೆ. ತಮ್ಮ ನಾಯಕನಿಂದ ರಾಜೀನಾಮೆ ಪಡೆದಿದ್ದಕ್ಕೆ ಸಿಟ್ಟಾಗಿರುವ ಬೆಂಬಲಿಗರು ನಗರದ ಹಲವೆಡೆ ಗಲಾಟೆ ನಡೆಸಿದ್ದಾರೆ. ಇಂದು ಬೆಳಗ್ಗೆ ರಮೇಶ್​ ರಾಜೀನಾಮೆ ಸಲ್ಲಿಸುವ ನಿರ್ಧಾರಕ್ಕೆ ಬಂದಾಗಲಿಂದಲೂ ಅಭಿಮಾನಿಗಳು ರಸ್ತೆಗಿಳಿದಿದ್ದು, ಅವರ ರಾಜೀನಾಮೆ ಅಂಗೀಕರಿಸಿದರೆ ಬೆಳಗಾವಿ ಬಂದ್​ ಮಾಡುವ ಎಚ್ಚರಿಕೆಯನ್ನೂ ನೀಡಿದ್ದರು. ದುಷ್ಕರ್ಮಿಗಳು ಇದುವರೆಗೆ 8 ಬಸ್​ಗಳ ಮೇಲೆ ಕಲ್ಲು ತೂರಿರುವ ಮಾಹಿತಿ ಇದ್ದು, ಈ ರೀತಿಯ ಪುಂಡಾಟಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ರಾಜೀನಾಮೆ ಅಂಗೀಕಾರ ಖಂಡಿಸಿ ಕಾರ್ಮಿಕರು ಸಹ ಪ್ರತಿಭಟನೆ ನಡೆಸುತ್ತಿದ್ದು, ಬೆಳಗಾವಿ ಜಿಲ್ಲೆ ಗೋಕಾಕ್ ಮಿಲ್​​ನ ಕಾರ್ಮಿಕರು ಧರಣಿಗೆ ಕುಳಿತಿದ್ದಾರೆ. ಗೋಕಾಕ್-ಬೆಳಗಾವಿ ರಸ್ತೆ ತಡೆದು 500ಕ್ಕೂ ಹೆಚ್ಚು ಕಾರ್ಮಿಕರು ರಸ್ತೆಯಲ್ಲೇ ಕುಳಿತು ಧರಣಿ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಮೇಶ್​ ಜಾರಕಿಹೊಳಿ ಸಿಡಿ ಬಿಡುಗಡೆ ಮಾಡಿದ ದಿನೇಶ್​ ಕಲ್ಲಹಳ್ಳಿ ವಿರುದ್ಧ ಕಬ್ಬನ್​ ಪಾರ್ಕ್​ ಠಾಣೆಯಲ್ಲಿ ದೂರು ದಾಖಲು

ಡಾ. ಬಸವರಾಜ ಗುರೂಜಿಯಿಂದ ರಮೇಶ್ ಜಾರಕಿಹೊಳಿ ಜಾತಕ ವಿಶ್ಲೇಷಣೆ: ಸದ್ಯಕ್ಕೆ ಸಂಕಷ್ಟ, ಏಪ್ರಿಲ್ ನಂತರ ಗುರು ಬಲ

Published On - 5:26 pm, Wed, 3 March 21