ಅಣ್ಣನ ರಾಜೀನಾಮೆ ಅಂಗೀಕರಿಸಿದ್ರೆ ನಿಮ್ಮ(ಯಡಿಯೂರಪ್ಪ) ಸಿ.ಡಿ. ರಿಲೀಸ್ ಮಾಡ್ತೀನಿ ಅಂತಿದ್ದಾನಂತೆ: ಇಂಥಾ ಮಾನಗೆಟ್ಟ ಸರ್ಕಾರ ಬೇಕಾ? -ಸಿದ್ದರಾಮಯ್ಯ

Ramesh Jarkiholi CD Controversy: ಆ ಸಚಿವ ರಾಜೀನಾಮೆ ಕೊಟ್ಟಿದ್ದಾನಂತೆ. ಅದರೆ, ಆತನ ಸಹೋದರ ಮುಖ್ಯಮಂತ್ರಿಗಳ ಬಳಿ ನಮ್ಮ ಅಣ್ಣನ ರಾಜೀನಾಮೆ ಪಡೆದುಕೊಂಡ್ರೆ ನಿಮ್ಮ ಸಿಡಿ ರಿಲೀಸ್ ಮಾಡ್ತೀನಿ ಎಂದು ಹೇಳ್ತಾನಂತೆ. ಇಂತಹ ಮಾನಗೆಟ್ಟ ಸರ್ಕಾರ ಬೇಕಾ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಅಣ್ಣನ ರಾಜೀನಾಮೆ ಅಂಗೀಕರಿಸಿದ್ರೆ ನಿಮ್ಮ(ಯಡಿಯೂರಪ್ಪ) ಸಿ.ಡಿ. ರಿಲೀಸ್ ಮಾಡ್ತೀನಿ ಅಂತಿದ್ದಾನಂತೆ: ಇಂಥಾ ಮಾನಗೆಟ್ಟ ಸರ್ಕಾರ ಬೇಕಾ? -ಸಿದ್ದರಾಮಯ್ಯ
ರಮೇಶ್​ ಜಾರಕಿಹೊಳಿ, ಸಿದ್ದರಾಮಯ್ಯ
Follow us
Skanda
|

Updated on:Mar 03, 2021 | 3:33 PM

ದೇವನಹಳ್ಳಿ: ಅಶ್ಲೀಲ ಸಿ.ಡಿ. ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ರಾಜೀನಾಮೆ ಅಂಗೀಕಾರವಾಗಿದೆ. ಇದೇ ಸಂದರ್ಭದಲ್ಲಿ ದೇವನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಮಾತನಾಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಅದನ್ನು (ಸಿ.ಡಿ. ) ನನಗೆ ನೋಡುವುದಕ್ಕೆ ಅಸಹ್ಯವಾಗುತ್ತೆ, ಹೇಳುವುದಕ್ಕೂ ನಾಚಿಕೆಯಾಗುತ್ತೆ. ಈಗ ಆ ಸಚಿವ ರಾಜೀನಾಮೆ ಕೊಟ್ಟಿದ್ದಾನಂತೆ. ಅದರೆ, ಆತನ ಸಹೋದರ ಮುಖ್ಯಮಂತ್ರಿಗಳ ಬಳಿ ನಮ್ಮ ಅಣ್ಣನ ರಾಜೀನಾಮೆ ಪಡೆದುಕೊಂಡ್ರೆ ನಿಮ್ಮ ಸಿ.ಡಿ ರಿಲೀಸ್ ಮಾಡ್ತೀನಿ ಎಂದು ಹೇಳ್ತಾನಂತೆ. ಇಂತಹ ಮಾನಗೆಟ್ಟ ಸರ್ಕಾರ ಬೇಕಾ? ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದೇ ವೇಳೆ ಆಡಳಿತ ಪಕ್ಷ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಬಿಜೆಪಿಗೆ ಬಡವರ ಬಗ್ಗೆ ಕಾಳಜಿಯಿಲ್ಲ, ಅದು ಬಡವರಿಂದ ಸುಲಿಗೆ ಮಾಡುತ್ತೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಬ್ಬರಿಗೂ 10 ಕೆಜಿ ಕೊಡ್ತೀವಿ. ಕಾಂಗ್ರೆಸ್ ಯಾವತ್ತಿಗೂ ಬಡವರ ಪರವಾದ ಪಕ್ಷ. ಆದರೆ, ಬಿಜೆಪಿಯವರಿಗೆ ಲೂಟಿ ಹೊಡೆಯುವುದು ಮಾತ್ರ ಮುಖ್ಯ ಎಂದು ಹರಿಹಾಯ್ದಿದ್ದಾರೆ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇಬ್ಬರು ಮುಖ್ಯಮಂತ್ರಿಗಳನ್ನಿಟ್ಟುಕೊಂಡು ಸರ್ಕಾರ ನಡೆಸಲಾಗುತ್ತಿದೆ. ಒಬ್ಬ ಯಡಿಯೂರಪ್ಪ, ಮತ್ತೊಬ್ಬ ವಿಜಯೇಂದ್ರ ಎಂದು ಕುಹಕವಾಡಿದ್ದಾರೆ.

ಮೋದಿ, ಅಮಿತ್ ಶಾ ಸರ್ಕಾರವಿರೋದು ಅಂಬಾನಿ, ಅದಾನಿಗೋಸ್ಕರ. ನಾವು ಇವರನ್ನ ಕಿತ್ತೊಗೆಯಲು ಈ ಜಾಥ ಮಾಡುತ್ತಿದ್ದೇವೆ. ಈ ಸರ್ಕಾರ ಇಂದು ರೈತ ವಿರೋಧಿ ಕಾಯ್ದೆಗಳನ್ನು ತಂದಿದೆ. ರೈತರು ವಯ್ಯಸ್ಸಾದ ಹಸು, ಎತ್ತು, ಎಮ್ಮೆಗಳನ್ನಿಟ್ಟುಕೊಂಡು ಏನು ಮಾಡಬೇಕು? ಉಳುಮೆ ಮಾಡಲು ಆಗದವನ್ನ ಕಟ್ಟಿಹಾಕಿಕೊಂಡು ಸಾಕಬೇಕಾ? ಜನರ ಸಮಸ್ಯೆಗಳನ್ನ ಬಗೆಹರಿಸಲು ಜನರಗೋಸ್ಕರ ನಾಡು, ದೇಶ ಉಳಿಸಲು ಕಾಂಗ್ರೆಸ್​ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಮೇಶ್​ ಜಾರಕಿಹೊಳಿ ರಾಜೀನಾಮೆ; ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪಗೆ ಪತ್ರ ರವಾನೆ

ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ ರಮೇಶ್​ ಜಾರಕಿಹೊಳಿ ರಾಜೀನಾಮೆ ಪಡೆಯಲಿ, ನಾವು ಮೇಟಿಯಿಂದ ರಾಜೀನಾಮೆ ಕೊಡಿಸಿರಲಿಲ್ವಾ? – ಸಿದ್ದರಾಮಯ್ಯ

Published On - 3:14 pm, Wed, 3 March 21

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು