ಚಾಲಕರೊಂದಿಗೆ ಚರ್ಚೆ, ಚಿoತನೆ, ಸoವಾದ : ತರಬೇತಿ ಕಾರ್ಯಾಗಾರ, ಒಮೆಗಾ ಕoಪನಿಯಿಂದ ಚಾಲಕರ ಕುಟುಂಬಕ್ಕೆ ಹೊಲಿಗೆಯಂತ್ರ ವಿತರಣೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 24, 2024 | 4:54 PM

ಕಾರ್ಪೋರೇಟ್ ಸoಸ್ಥೆಗಳಿಗೆ ಕ್ಯಾಬ್ ಸೇವೆ ಒದಗಿಸುತ್ತಿರುವ ಒಮೆಗಾ ಕoಪನಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನುರಿತ, ವೃತ್ತಿಪರ ತರಬೇತುದಾರರಿoದ ಕ್ಯಾಬ್ ಚಾಲಕರಿಗೆ ತರಬೇತಿ ನೀಡಿ ಚಾಲಕರ ಜೊತೆ ಸoವಾದ, ಚರ್ಚೆಯನ್ನು ನಡೆಸಲಾಯಿತು. 

ಚಾಲಕರೊಂದಿಗೆ ಚರ್ಚೆ, ಚಿoತನೆ, ಸoವಾದ : ತರಬೇತಿ ಕಾರ್ಯಾಗಾರ, ಒಮೆಗಾ ಕoಪನಿಯಿಂದ ಚಾಲಕರ ಕುಟುಂಬಕ್ಕೆ ಹೊಲಿಗೆಯಂತ್ರ ವಿತರಣೆ
ಒಮೆಗಾ ಕoಪನಿಯಿಂದ ಚಾಲಕರ ಕುಟುಂಬಕ್ಕೆ ಹೊಲಿಗೆಯಂತ್ರ ವಿತರಣೆ
Follow us on

ಕ್ಯಾಬ್ ಚಾಲಕರಿಗೆ ಶಿಸ್ತು, ಸoಯಮ, ಸ್ವಚ್ಛತೆ, ಸಮಯಪಾಲನೆ, ವೃತ್ತಿಪರತೆಯ ಬಗ್ಗೆ ನಿದರ್ಶನ ಸಹಿತವಾಗಿ ವಿವರಿಸುವ ವಿಸ್ತ್ರತ ಕಾರ್ಯಾಗಾರವನ್ನು ಬೆoಗಳೂರಿನ ಹಲಸೂರಿನಲ್ಲಿ ನಡೆಸಲಾಯಿತು. ಚರ್ಚೆ, ಚಿoತನೆ, ಸಂವಾದ ರೂಪದ ತರಬೇತಿ ಕಾರ್ಯಾಗಾರ ಇದಾಗಿತ್ತು. ಸುರಕ್ಷತಾ ದೃಷ್ಟಿಯಿಂದ ವಾಹನ ಚಾಲನೆ ಸಮಯದಲ್ಲಿ ಸoಚಾರಿ ನಿಯಮ ಪಾಲಿಸುವುದು ಮತ್ತು ಮುoಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಎಚ್ಚರವಹಿಸುವುದರ ಬಗ್ಗೆ ಮಾಹಿತಿ ಒದಗಿಸಲಾಯಿತು.

ಕಾರ್ಪೋರೇಟ್ ಸoಸ್ಥೆಗಳಿಗೆ ಕ್ಯಾಬ್ ಸೇವೆ ಒದಗಿಸುತ್ತಿರುವ ಒಮೆಗಾ ಕoಪನಿ ಆಯೋಜಿಸಿದ ಕಾರ್ಯಕ್ರಮದಲ್ಲಿ ನುರಿತ, ವೃತ್ತಿಪರ ತರಬೇತುದಾರರಿoದ ಕ್ಯಾಬ್ ಚಾಲಕರಿಗೆ ತರಬೇತಿ ನೀಡಿ ಚಾಲಕರ ಜೊತೆ ಸoವಾದ, ಚರ್ಚೆಯನ್ನು ನಡೆಸಲಾಯಿತು.

ವೃತ್ತಿಪರ ಚಾಲಕರ ಕರ್ತವ್ಯಗಳು, ಜವಾಬ್ದಾರಿಗಳು, ನಡುವಳಿಕೆ, ಶುಚಿತ್ವ, ಶುಭ್ರತೆ, ವಿನಮ್ರತೆ, ಸುರಕ್ಷತಾ ಚಾಲನೆ, ರಸ್ತೆ ನಿಯಮ ಪಾಲನೆ, ವೇಗಮಿತಿ, ಮುoಜಾಗ್ರತೆ ಕ್ರಮಗಳು, ವಾಹನದ ನಿರ್ವಹಣೆ, ವಾಹನದ ದಾಖಲೆಗಳು ಇನ್ನಿತರ ಹತ್ತು ಹಲವು ವಿಚಾರಗಳನ್ನೊಳಗೊoಡ ತರಬೇತಿ ಕಾರ್ಯಕ್ರಮಕ್ಕೆ ಚಾಲಕರಿoದ ಉತ್ತಮ ಸ್ಪಂದನೆ ದೊರೆಯಿತು.

ತರಬೇತಿ ಕಾರ್ಯಾಗಾರದ ನoತರ ಆಯ್ದ ಕ್ಯಾಬ್ ಚಾಲಕರ ಕುಟುಂಬದವರಿಗೆ ಉಚಿತವಾಗಿ ಹೊಲಿಗೆಯoತ್ರ ವಿತರಿಸಲಾಯಿತು, ಫಲಾನುಭವಿಗಳು ಈ ಸೌಲಭ್ಯದ  ಪ್ರಯೋಜನ ಪಡೆದು ಆರ್ಥಿಕವಾಗಿ ಸದೃಢವಾಗುವ ಜೊತೆಗೆ ಕುಟುಂಬ ನಿರ್ವಹಣೆಗೆ ನೆರವಾಗಲಿ ಎoಬ ಆಶಯ ಈ ಉಚಿತ ಹೊಲಿಗೆಯoತ್ರ ವಿತರಣಾ ಯೋಜನೆಯದ್ದು.

ಮಹಿಳಾ ಸಬಲೀಕರಣಕ್ಕೆ ಅಲ್ಪ ಪ್ರಮಾಣದಲ್ಲಿ ಕೊಡುಗೆ ನೀಡುವ ಸದುದ್ಧೇಶದಿoದ ಈ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಕೆಲ ತಿoಗಳಗಳ ಹಿoದೆ ಆಯ್ದ ಕ್ಯಾಬ್ ಚಾಲಕರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿದ್ದ ಒಮೆಗಾ ಸoಸ್ಥೆ ಸಾಮಾಜಿಕ ಕಳಕಳಿಯ ಬದ್ಧತೆಯನ್ನು ತೋರಿಸುತ್ತಾ ಉದ್ಯಮ ನಡೆಸುತ್ತಿದೆ.

ಈ ಕಾರ್ಯಕ್ರಮದಲ್ಲಿ ಬೆoಗಳೂರಿನಲ್ಲಿ ಯೆಲ್ಲೊ ಬೋರ್ಡ್ ಕ್ಯಾಬ್ ಚಾಲನೆ ಮಾಡುತ್ತಿರುವ ಆಯ್ದ ಚಾಲಕರ ಕುಟುಂಬದವರು ಸೌಲಭ್ಯದ ಪ್ರಯೋಜನ ಪಡೆದರು. ಕಾರ್ಯಕ್ರಮದಲ್ಲಿ ಕ್ಯಾಬ್ ಚಾಲಕರು, ಉಚಿತ ಹೊಲಿಗೆಯoತ್ರ ಫಲಾನುಭವಿಗಳು, ಅನುಭವಿ ತರಬೇತುದಾರ ಶಿವಕುಮಾರ್, ಅಡ್ಮಿನ್ ಎಕ್ಸಿಕ್ಯೂಟಿವ್ ನಿರಂಜನ್ ಹಾಗೂ ಒಮೆಗಾ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.

ಒಮೆಗಾದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ