ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸರ್ಜನೊಬ್ಬ ಬಡರೋಗಿಯಿಂದ ಲಂಚ ಪೀಕಿದ ವಿಡಿಯೋ ವೈರಲ್!

ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸರ್ಜನೊಬ್ಬ ಬಡರೋಗಿಯಿಂದ ಲಂಚ ಪೀಕಿದ ವಿಡಿಯೋ ವೈರಲ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 24, 2024 | 4:25 PM

ಭಾರೀ ಮೊತ್ತದ ಸಂಬಳ, ಫ್ರೀ ಕ್ವಾರ್ಟರ್ಸ್ ಮತ್ತು ಇತರ ಸೌಲಭ್ಯಗಳನ್ನು ಸರ್ಕಾರದಿಂದ ಪಡೆಯುವ ಡಾಕ್ಟರ್ ಗಳಿಗೆ ಬಡರೋಗಿಗಳ ಹಣದ ಮೇಲೂ ಆಸೆ ಇರೋದು ಹೇವರಿಕೆ ಮೂಡಿಸುತ್ತದೆ. ಬಹಳಷ್ಟು ಸರ್ಕಾರೀ ವೈದ್ಯರು ಸಾಯಂಕಾಲ ತಮ್ಮ ಕ್ಲಿನಿಕ್ ಗಳಲ್ಲಿ ಪ್ರೈವೇಟ್ ಪ್ರ್ಯಾಕ್ಟೀಸ್ ಕೂಡ ಮಾಡುತ್ತಾರೆ. ಹಣದ ವ್ಯಾಮೋಹ ಇಷ್ಟೊಂದಿರಬಾರದು.

ಚಿತ್ರದುರ್ಗ: ಇದು ಮಾನ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಗಮನಕ್ಕೆ. ವಿಷಯವೇನೆಂದರೆ ಸರ್ಕಾರೀ ಆಸ್ಪತ್ರೆಗಳಲ್ಲಿ ವೈದ್ಯರು, ಶಸ್ತ್ರಚಿಕಿತ್ಸಕರು ಮತ್ತು ಉಳಿದವರು ಬಡರೋಗಿಗಳಿಂದ ಹಣ ಪೀಕುವುದು ನಿಮಗೂ ಗೊತ್ತಿದೆ. ಹಿಂದೆಯೂ ವಿಷಯವನ್ನು ನಿಮ್ಮ ಗಮನಕ್ಕೆ ತರಲಾಗಿತ್ತು. ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ಪ್ರಾಯಶಃ ಡಿಸ್ಟ್ರಿಕ್ಟ್ ಸರ್ಜನ್ ಇರಬಹುದು ಅನಿಸುತ್ತೆ, ಈ ಸರ್ಜನ್ ಮಹಾಶಯನ ಹೆಸರು ಡಾ ಸಾಲಿ ಮಂಜಪ್ಪ. ಅಸಲಿಗೆ ಸಾಲಿ ಮಂಜಪ್ಪ ಬದಲು ವಸೂಲಿ ಮಂಜಪ್ಪ ಅಂದರೂ ಆದೀತು! ಇವರು ಒಬ್ಬ ಬಡ ರೋಗಿಯ ತಂದೆಯಿಂದ ಸರ್ಜರಿಗಾಗಿ ₹5,000 ಡಿಮ್ಯಾಂಡ್ ಮಾಡಿ ₹4,000 ಗಳಿಗೆ ಸರ್ಜರಿ ಮಾಡುವ ವ್ಯವಹಾರವನ್ನು ಕುದುರಿಸಿಕೊಳ್ಳುವ ವಿಡಿಯೋ ವೈರಲ್ ಆಗಿದೆ. ನಾಳೆ ಗುರುವಾರ ಅಂದರೆ ಜುಲೈ 25 ರಂದು ಮಹಾನಾಯಕ ದಲಿತ ಸೇನೆಯು ಸರ್ಜನ್ ವಿರುದ್ಧ ಕ್ರಮ ಆಗ್ರಹಿಸಿ ಚಿತ್ರದುರ್ಗ ನಗರದಲ್ಲಿ ಜಿಲ್ಲಾಸ್ಪತ್ರೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಜಿಲ್ಲಾಧಿಕಾರಿ ನಿಮಗೆ ಪತ್ರ ಬರೆಯವ ಮುನ್ನ ಸಚಿವರಾಗಿರುವ ನೀವು ಕ್ರಮ ತೆಗೆದುಕೊಂಡರೆ ಕನ್ನಡಿಗರು ನಿಮ್ಮನ್ನು ಮೆಚ್ಚಿಯಾರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೊಪ್ಪಳದಲ್ಲಿ ಲೋಕಾಯಕ್ತ ದಾಳಿ: ಲೇಔಟ್​ಗೆ ಪರವಾನಗಿ ನೀಡಲು ಲಂಚ ಕೇಳಿದ್ದ ಅಧಿಕಾರಿ ಬಲೆಗೆ