ಆಸ್ಪತ್ರೆಯಲ್ಲಿ ಸಾಯುವ ಸ್ಥಿತಿಯಲ್ಲಿದ್ದ ಅಜ್ಜನ ಕೈ ಹಿಡಿದ ಆನೆ; ಎಮೋಷನಲ್ ವಿಡಿಯೋ ಇಲ್ಲಿದೆ
ಕೆಲವು ಪ್ರಾಣಿಗಳು ಮನುಷ್ಯರನ್ನು ಬಹಳ ಪ್ರೀತಿಸುತ್ತವೆ ಮತ್ತು ನಂಬುತ್ತವೆ. ಆಹಾರ ನೀಡುವ ಮತ್ತು ತಮ್ಮನ್ನು ರಕ್ಷಿಸುವ ಜನರಿಗೆ ತನ್ನದೇ ರೀತಿಯಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತವೆ. ನಾಯಿ, ಬೆಕ್ಕು, ಕುದುರೆ, ಹಸು ಹೀಗೆ ಸಾಕುಪ್ರಾಣಿಗಳು ತನ್ನ ಮಾಲೀಕರ ಜೊತೆ ಅನ್ಯೋನ್ಯ ಸಂಬಂಧ ಹೊಂದುವುದು ವಿಚಿತ್ರವೇನಲ್ಲ. ಆದರೆ, ಆನೆ ಕೂಡ ತನ್ನ ಕೇರ್ ಟೇಕರ್ ಜೊತೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತವೆ. ಅದನ್ನು ವ್ಯಕ್ತಪಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಯಿಗಳು, ಬೆಕ್ಕುಗಳು, ಕುದುರೆ, ಹಸುಗಳಂತೆ ಆನೆಗಳು ಕೂಡ ಮನುಷ್ಯರೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತವೆ ಎಂಬುದು ನಿಮಗೆ ಗೊತ್ತಾ? ಆನೆಗಳು ತಮ್ಮ ಪ್ರೀತಿಪಾತ್ರರಿಗೆ ಏನಾದರೂ ಸಂಭವಿಸಿದರೆ ಅದನ್ನು ಸಹಿಸುವುದಿಲ್ಲ. ಸದ್ಯ ವೈರಲ್ ಆಗುತ್ತಿರುವ ವೀಡಿಯೋ ನಿಮಗೆ ಅದನ್ನು ಅರ್ಥ ಮಾಡಿಸುತ್ತದೆ. ಜೀವಮಾನವಿಡೀ ತನ್ನ ಜವಾಬ್ದಾರಿಯನ್ನು ನಿಭಾಯಿಸಿದ ವ್ಯಕ್ತಿ ಸಾಯುವ ಹಂತದಲ್ಲಿ ಆಸ್ಪತ್ರೆಯ ಬೆಡ್‌ನಲ್ಲಿದ್ದಾಗ ಆನೆ ತೋರಿದ ಪ್ರೀತಿ ನಿಮ್ಮನ್ನು ಭಾವುಕರನ್ನಾಗಿಸದೇ ಇರದು.
ಈ ವೈರಲ್ ವಿಡಿಯೋದಲ್ಲಿ ಆನೆಯೊಂದು ಆಸ್ಪತ್ರೆಯ ಕೋಣೆಯ ಹೊರಗೆ ಕುಳಿತಿದೆ. ನಂತರ ಆನೆ ಕೋಣೆಯೊಳಗೆ ತೆವಳಿಕೊಂಡು ಹೋಗುತ್ತದೆ. ಬೆಟ್ ಮೇಲೆ ಮಲಗಿದ್ದ ತನ್ನ ಕೇರ್ ಟೇಕರ್ ಅಜ್ಜನ ಬಳಿಗೆ ಬಂದ ಆನೆ ತನ್ನ ಸೊಂಡಿಲಿನಿಂದ ಅವರ ಕೈಯನ್ನು ಹಿಡಿಯಲು ಪ್ರಯತ್ನಿಸಿತು. ಆದರೆ, ಆ ಮುದುಕನಿಗೆ ಕೈ ಎತ್ತಲಾಗಲಿಲ್ಲ. ಪಕ್ಕದಲ್ಲಿದ್ದ ಮಹಿಳೆ ಆ ವ್ಯಕ್ತಿಯ ಕೈ ಹಿಡಿದು ಆನೆಗೆ ಕೊಟ್ಟಳು. ನಂತರ ಅವರನ್ನು ಮುಟ್ಟಿದ ಆನೆ ಆಸ್ಪತ್ರೆಯ ನೆಲದ ಮೇಲೆ ಆ ಅಜ್ಜನ ಬೆಟ್ ಪಕ್ಕದಲ್ಲಿ ಕುಳಿತುಕೊಂಡಿದೆ.
ಈ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಇದುವರೆಗೆ 47 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 90 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ