17 ಕೋಟಿ ಹಣ ನಿಮ್ಮ ತೋಟದ ರಾಜಕಾಲುವೆಗೆ ಹಾಕಿಕೊಂಡ್ರಿ; ಅಶೋಕ್ ವಿರುದ್ಧ ಮಾಜಿ MLA ಮಂಜುನಾಥ್ ಕಿಡಿ
ಸದನದಲ್ಲಿ ಕಾಂಗ್ರೆಸ್ ಮೇಲೆ ಅಭಿವೃದ್ಧಿ ತಡೆ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್(R Ashoka)ಗೆ ದಾಸರಹಳ್ಳಿ ಮಾಜಿ MLA ಮಂಜುನಾಥ್(Manjunath) ತಿರುಗೇಟು ಕೊಟ್ಟಿದ್ದಾರೆ. ‘2018-19ರಲ್ಲಿ ನಾನು ಶಾಸಕನಾಗಿದ್ದಾಗ ಕುಮಾರಣ್ಣ ಕೊಟ್ಟಿದ್ದ 600 ಕೋಟಿ ಹಣವನ್ನು ನಿಮ್ಮ ಸರ್ಕಾರ ಬಂದ ಮೂರೇ ದಿನಕ್ಕೆ ನಿಲ್ಲಿಸಿದ್ರಿ ಎಂದು ವಾಗ್ದಾಳಿ ನಡೆಸಿದರು.
ಬೆಂಗಳೂರು, ಜು.24: ಸದನದಲ್ಲಿ ಕಾಂಗ್ರೆಸ್ ಮೇಲೆ ಅಭಿವೃದ್ಧಿ ತಡೆ ಬಗ್ಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್(R Ashoka)ಗೆ ದಾಸರಹಳ್ಳಿ ಮಾಜಿ MLA ಮಂಜುನಾಥ್(Manjunath) ತಿರುಗೇಟು ಕೊಟ್ಟಿದ್ದಾರೆ. ‘ನನ್ನ ಕ್ಷೇತ್ರಕ್ಕೆ ಬಂದಿದ್ದ ಅನುದಾನ ನೀವು ಕಿತ್ಕೊಂಡ್ ಹೋದ್ರಿ, 17 ಕೋಟಿ ಹಣ ನಿಮ್ಮ ತೋಟದ ಬಳಿಯ ರಾಜಕಾಲುವೆಗೆ ಹಾಕಿಕೊಂಡಿದ್ದೀರಿ. ನನ್ನ ಬಳಿ ದಾಖಲೆ ಇವೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ಕೊಡುತ್ತೇನೆ. ಜೊತೆಗೆ ಸಿಎಂ, ಡಿಸಿಎಂ ಗಮನಕ್ಕೂ ಈ ವಿಚಾರವನ್ನೂ ತರ್ತೀನಿ ಎಂದು ವಾಗ್ದಾಳಿ ನಡೆಸಿದರು.
‘2018-19ರಲ್ಲಿ ನಾನು ಶಾಸಕನಾಗಿದ್ದಾಗ ಕುಮಾರಣ್ಣ ಕೊಟ್ಟಿದ್ದ 600 ಕೋಟಿ ಹಣವನ್ನು ನಿಮ್ಮ ಸರ್ಕಾರ ಬಂದ ಮೂರೇ ದಿನಕ್ಕೆ ನಿಲ್ಲಿಸಿದ್ರಿ. ದಾಸರಹಳ್ಳಿಗೆ ರಿಲೀಸ್ ಆದ ಹಣ ನಿಮ್ಮ ಕ್ಷೇತ್ರಕ್ಕೆ ಹಾಕಿಕೊಳ್ಳಲಿಲ್ವಾ?, ವಿಧಾನಸಭೆಯಲ್ಲಿ ಹೋರಾಟ ಮಾಡಿ ಹೈಕೋರ್ಟ್‌ಗೆ PIL ಹಾಕಿದ್ದೆ, ಹೈಕೋರ್ಟ್ ಆದೇಶದ ಮೂಲಕ 110 ಕೋಟಿ ರಿಲೀಸ್ ಮಾಡಿಸಿಕೊಂಡೆ. ಆದರೂ ದಾಸರಹಳ್ಳಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಬಿಡಲಿಲ್ಲ. ಮಿಸ್ಟರ್ ಅಶೋಕ್, ‘ದಾಸರಹಳ್ಳಿ ಅನುದಾನ ವಿಚಾರದಲ್ಲಿ ನಾಟಕ ಆಡ್ತಿದ್ದೀರಾ?. ಬಿಜೆಪಿ ಶಾಸಕರಿಗೆ ಅನುದಾನ ರಿಲೀಸ್ ಮಾಡ್ತಿಲ್ಲಾ ಎಂದು ಸುಳ್ಳು ಹೇಳುತ್ತಿದ್ದೀರಾ?.
ಡಿಸಿಎಂ ಡಿಕೆ ಶಿವಕುಮಾರ್ ಅವರು ದಾಸರಹಳ್ಳಿ ಕ್ಷೇತ್ರಕ್ಕೆ ಹಣ ರಿಲೀಸ್ ಮಾಡಿದ್ದಾರೆ. 50 ಕೋಟಿ ರೂ. ವೆಚ್ಚದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದ ರಸ್ತೆ ಅಭಿವೃದ್ಧಿ ಆಗುತ್ತಿದೆ. ಚಿಕ್ಕಬಾಣಾವರ ಕೆರೆ ಅಭಿವೃದ್ಧಿಗೆ 12.60 ಕೋಟಿ ರಿಲೀಸ್ ಮಾಡಿಸಿದ್ದೇನೆ,
25 ಕೋಟಿ ವೆಚ್ಚದಲ್ಲಿ 110 ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿ ಆಗ್ತಿದೆ. ಅನುದಾನ ಕೊಡ್ತಿಲ್ಲ ಅಂತೀರಲ್ಲಾ..ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ಆರ್.ಅಶೋಕ್ ವಿರುದ್ಧ ದಾಸರಹಳ್ಳಿ ಮಾಜಿ ಶಾಸಕ ಮಂಜುನಾಥ್ ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ