AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದನದ ಕಾರ್ಯಕಲಾಪದ ನಂತರ ನೇರವಾಗಿ ರಾಜಭವನಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಸದನದ ಕಾರ್ಯಕಲಾಪದ ನಂತರ ನೇರವಾಗಿ ರಾಜಭವನಕ್ಕೆ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 24, 2024 | 7:53 PM

Share

ಇದನ್ನು ನಾವು ಯಾವಾಗಲೂ ಹೇಳುತ್ತಿರುತ್ತೇವೆ ಮತ್ತು ಇವತ್ತು ಸಹ ಹೇಳುತ್ತೇವೆ, ಮುಖ್ಯಮಂತ್ರಿ ಹೋದೆಡೆಯೆಲ್ಲ 10-12 ವಾಹನಗಳ ಕಾನ್ವಾಯ್ ಹಿಂಬಾಲಿಸುವ ಅಗತ್ಯವಿರುತ್ತದೆಯೇ? ಕನ್ನಡಿಗರ ತೆರಿಗೆ ಹಣದಿಂದ ಅಷ್ಟೂ ವಾಹನಗಳಿಗೆ ಇಂಧನ ತುಂಬಿಸಲಾಗುತ್ತದೆ, ಅದನ್ನು ಸಂಬಂಧಪಟ್ಟವರೆಲ್ಲ ಯೋಚಿಸಬೇಕು.

ಬೆಂಗಳೂರು: ವಿಧಾನಸಭೆಯಲ್ಲಿಂದು ಕೆಲವು ವಿಧೇಯಕಗಳನ್ನು ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿನದ ಕಾರ್ಯಕಲಾಪಗಳು ಮುಗಿದ ನಂತರ ನೇರವಾಗಿ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾದರು. ಸುಮಾರು ಅರ್ಧಗಂಟೆ ಕಾಲ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಸಿದ್ದರಾಮಯ್ಯ ಅಲ್ಲಿಂದ ನಿರ್ಗಮಿಸಿದರು. ಟಿವಿ9ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಸದನದ್ಲಲಿ ಅಂಗೀಕಾರವಾದ ಮೂರು ವಿಧೇಯಕಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಕೈಗೊಂಡಿರುವ ಮೂರು ನಿರ್ಣಯಗಳನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದಾರೆ. ಸದನದಲ್ಲಿ ನಡೆಯುತ್ತಿರುವ ಕಾರ್ಯಕಲಾಪದ ವಿವರ ಮತ್ತು ಬೆಳವಣಿಗೆಗಳನ್ನು ಸಹ ಅವರು ರಾಜ್ಯಪಾಲರಿಗೆ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಅಮಾನತಿನಲ್ಲಿದ್ದ ಅಧಿಕಾರಿಯಿಂದ ಇಡಿ ವಿರುದ್ಧ ದೂರು ಕೊಡಿಸಿ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಇನ್ನಿಲ್ಲದ ಸಾಹಸ: ಬಿಜೆಪಿ