ದರ್ಶನ್ ನೋಡಲು ಕೇಂದ್ರ ಕಾರಾಗೃಹಕ್ಕೆ ಬಂದ ಯುವನಟ ಮನೋಜ್ ವಿಹಾನ್ ಗೆ ನಿರಾಶೆ
ಸ್ಟಾರ್ ಗಳಾಗುವ ಮೊದಲು ಎಲ್ಲರೂ ವಿನಯಶೀಲತೆ, ನಮ್ರತೆ ಪ್ರದರ್ಶಿಸುತ್ತಾರೆ, ಒಂದರೆಡು ಸಿನಿಮಾಗಳು ಹಿಟ್ ಆದ ಮೇಲೆ ಅವರಿಗೆ ಕೋಡು ಬರುತ್ತವೆ ಅಂತ ಜನ ಮಾತಾಡಬಹುದು. ಅದರೆ ಸದಕ್ಕಂತೂ ಯುವನಟ ಮನೋಜ್ ವಿಹಾನ್ ವಿನಮ್ರನಾಗಿ ವರ್ತಿಸಿದ್ದನ್ನು ನಾವು ನೋಡಿದ್ದೇವೆ, ಮುಂದೆ ಹೇಗೋ ಗೊತ್ತಿಲ್ಲ.
ಆನೇಕಲ್ (ಬೆಂಗಳೂರು): ‘ವಿದ್ಯಾರ್ಥಿ ವಿದ್ಯಾರ್ಥಿನಿಯರು’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿರುವ ಮನೋಜ್ ವಿಹಾನ್ ಇಂದು ಸೆಂಟ್ರಲ್ ಜೈಲಿನಲ್ಲಿ ಕಳೆದ ಒಂದೂವರೆ ತಿಂಗಳಿಂದ ಇರುವ ಖ್ಯಾತನಟ ದರ್ಶನ್ ರನ್ನು ಕಂಡು ಮಾತಾಡಿಸಲು ಬಂದಿದ್ದರು. ಅದರೆ ದುರದೃಷ್ಟವಶಾತ್ ಅವರಿಗೆ ಚೆಕ್ ಪೋಸ್ಟ್ ನಲ್ಲಿದ್ದ ಪೊಲೀಸರು ಅವಕಾಶ ನೀಡಲಿಲ್ಲ. ಕೇವಲ ಕುಟುಂಬದವರನ್ನು ಮಾತ್ರ ಭೇಟಿಯಾಗಲು ದರ್ಶನ್ ಹೇಳಿದ್ದಾರೋ ಅಥವಾ ಜೈಲು ಅಧಿಕಾರಿಗಳೇ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಭೇಟಿಯಾಗುವ ಕಲ್ಪಿಸುತ್ತಿಲ್ಲವೋ ಗೊತ್ತಾಗಲಿಲ್ಲ. ಯುವನಟ ಪೊಲೀಸರು ಹೇಳುವುದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ. ಭೇಟಿಯಾಗಲೇ ಬೇಕು ಅಂತ ಪೊಲೀಸರ ಮೇಲೆ ಒತ್ತೆ ಹೇರುವ ಪ್ರಯತ್ನ ಮಾಡಲ್ಲ. ಅವಕಾಶವಿಲ್ಲ ಅಂದಾಕ್ಷಣ ನಿರಾಶರಾದರೂ ತೋರ್ಪಡಿಸದೆ ಅಲ್ಲಿಂದ ಹೊರಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Vijayalakshmi Darshan: ವಿಜಯಲಕ್ಷ್ಮಿ ದರ್ಶನ್ ಭೇಟಿ ಬಳಿಕ ಡಿಕೆ ಶಿವಕುಮಾರ್ ಹೇಳಿದ್ದೇನು?
Latest Videos