ಕೊಲೆ ಕೇಸ್ನಲ್ಲಿ 11 ವರ್ಷ ಜೈಲು ಶಿಕ್ಷೆ ಹಾಗೂ ದರ್ಶನ್ ಭೇಟಿ ಬಗ್ಗೆ ಖೈದಿ ಹೇಳಿದ್ದೇನು?
ಕೊಲೆ ಪ್ರಕರಣದಲ್ಲಿ ತುರುವನೂರು ಸಿದ್ದಾರೂಢ ಅವರು ಜೈಲು ಸೇರಿದ್ದರು. ಅವರಿಗೆ 11 ವರ್ಷ ಜೈಲು ಶಿಕ್ಷೆ ಆಗಿತ್ತು. ದರ್ಶನ್ ಅವರ ಅಭಿಮಾನಿ ಆಗಿರುವ ಸಿದ್ದಾರೂಢಾ ಅವರು ಜೈಲಿನ ದಿನಗಳ ಬಗ್ಗೆ ಕೆಲವು ಮಾಹಿತಿ ತೆರೆದಿಟ್ಟಿದ್ದಾರೆ. ದರ್ಶನ್ ಅವರನ್ನು ಭೇಟಿ ಮಾಡಬೇಕು ಎಂಬುದು ಅವರ ಆಸೆ ಆಗಿತ್ತು. ಈಗ ತುರುವನೂರು ಸಿದ್ದಾರೂಢ ಬಿಡುಗಡೆ ಆಗಿ ಬಂದಿದ್ದಾರೆ.
ಪ್ರಸಿದ್ಧ ನಟ ದರ್ಶನ್ ಅವರು ರೇಣುಕಾಸ್ವಾಮಿಯ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದು, ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರನ್ನು ಇನ್ನೋರ್ವ ಖೈದಿ ಭೇಟಿ ಮಾಡಿದ್ದಾರೆ. ಹೌದು, ಕೊಲೆ ಕೇಸ್ನಲ್ಲಿ 11 ವರ್ಷ ಜೈಲು ವಾಸ ಅನುಭವಿಸಿ ಬಂದಿರುವ ತುರುವನೂರು ಸಿದ್ದಾರೂಢ ಅವರು ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದಾರೆ. ಆ ಘಟನೆಯ ಬಗ್ಗೆ ಅವರು ಮಾತನಾಡಿದ್ದಾರೆ. ‘ಟಿವಿ9 ಕನ್ನಡ’ ಜೊತೆ ಅವರು ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ‘ಕರಿಯ’ ಸಿನಿಮಾದ ಶೂಟಿಂಗ್ ನೋಡಿದ್ದ ಅವರು ಆ ಬಳಿಕ ಜೈಲಿಗೆ ಹೋಗಿದ್ದರು. ಜೈಲು ಶಿಕ್ಷೆ ಮುಗಿಸಿ ಹೊರಗೆ ಬರುವುದಕ್ಕೂ ಮುನ್ನ ಜೈಲಿನಲ್ಲಿ ದರ್ಶನ್ ಅವರನ್ನು ನೋಡಿದ್ದರ ಕುರಿತು ಅನುಭವವನ್ನು ತುರುವನೂರು ಸಿದ್ದಾರೂಢ ಹಂಚಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್ ಅಶೋಕ್
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ

