ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಭಾರೀ ಚಚರ್ಚೆ ಮತ್ತು ವಿವಾದಕ್ಕೆ ಆಸ್ಪದವಾಗಿರುವ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ನಿನ್ನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ನಾವೇ ಸುಟ್ಟುಹೋಗುತ್ತೇವೆ ಎಂದು ಘೋಷಿಸುವ ಮೂಲಕ ತಾವು ಯಡಿಯೂರಪ್ಪ ಪರ ಎಂಬುದನ್ನು ಘೋಷಿಸಿದ್ದರು.
ಈ ಮಧ್ಯೆ, ದಿಢೀರನೆ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡು ಅಲ್ಲಿಂದ ನಿನ್ನೆ ರಾತ್ರಿ ವಾಪಸಾದವರೆ ಇಂದು ಸೀದಾ ವಿಧಾನಸೌಧಕ್ಕೆ ತೆರಳಿ, ತಮ್ಮ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ತೋರತೊಡಗಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ ಭೇಟಿ ಬಳಿಕ ಸಚಿವ ಸಿಪಿ ಯೋಗೇಶ್ವರ್ ತಮ್ಮ ಖಾತೆಯ ಬಗ್ಗೆ ಹೆಚ್ಚು ಕೆಲಸ ಪ್ರಾರಂಭಿಸಿರುವುದು ಎದ್ದುಕಾಣುತ್ತಿದೆ.
ಕಳೆದ ವಾರ ಸುದ್ದಿಗೋಷ್ಠಿ ಹಮ್ಮಿಕೊಂಡು ಪ್ರವಾಸೋದ್ಯಮ ಇಲಾಖೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಗೂ ತೆರಳಿ, ಇಲಾಖಾ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬರೀ ಭಿನ್ನಮತೀಯ ಚಟುವಟಿಕೆ ಮಾತ್ರ ಮಾಡುತ್ತಿಲ್ಲವೆಂದು ಸಾಬೀತುಪಡಿಸಿಕೊಂಡು, ತನ್ನ ಇಲಾಖೆಯ ಕೆಲಸದಲ್ಲೂ ನಾನು ಸೈ ಎಂದು ತೋರಿಸಿಕೊಳ್ಳುವ ತುರ್ತು ಅನಿವಾರ್ಯತೆಯಲ್ಲಿದ್ದಾರೆ ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್.
ಇಂದು ವಿಧಾನಸೌಧದಲ್ಲೂ ಇಲಾಖೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿರುವ ಪ್ರವಾಸೋದ್ಯಮ ಸಚಿವ ಯೋಗೇಶ್ವರ್, ವೃಷಭಾವತಿ ಕಣಿವೆಯ ಮಾಲಿನ್ಯ ತಪಾಸಣೆಗೆ 4 ತುರ್ತು ಸ್ಪಂದನೆ ವಾಹನಗಳನ್ನು ಲೋಕಾರ್ಪಣೆಗೊಳಿಸಿದರು. ಇಂದು ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಚಿವ ಯೋಗೇಶ್ವರ್ ಆ ಮೂಲಕ ಕೇವಲ ಭಿನ್ನಮತೀಯ ಚಟುವಟಿಕೆಯಲ್ಲಿ ಮಾತ್ರ ತೊಡಗಿಸಿಕೊಂಡಿಲ್ಲ ಎನ್ನುವುದನ್ನು ಸಾಬೀತು ಪಡಿಸುವ ಪ್ರಯತ್ನದಲ್ಲಿದ್ದಾರೆ. (ರಾಮನಗರ) ಜಿಲ್ಲಾ ಉಸ್ತುವಾರಿ ಸಚಿವ ಹಂಚಿಕೆ ಸಂದರ್ಭದಲ್ಲಿ ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳಲು ಯೋಗೇಶ್ವರ್ ಯತ್ನಿಸುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
(disgruntled tourism minister cp yogeshwar fully indulge in his department works)
ಕೊವಿಡ್ ನಿಯಮ ಉಲ್ಲಂಘಿಸಿದ ಸಚಿವ ಸಿ.ಪಿ.ಯೋಗೇಶ್ವರ್; ದೇವಸ್ಥಾನದಲ್ಲಿ ಕೇಕ್ ಕತ್ತರಿಸಿ ಪತ್ನಿ ಹುಟ್ಟುಹಬ್ಬ ಆಚರಣೆ
Published On - 10:28 am, Thu, 1 July 21