ಟಾಸ್ ಗೆದ್ದಿದ್ದೇವೆ, ಮ್ಯಾಚ್ ಗೆಲ್ಸಿಕೊಡಿ! ಏನಿದು ಟಾಸು-ಮ್ಯಾಚಿನ ರಹಸ್ಯ ಸಂದೇಶ?

|

Updated on: Nov 13, 2019 | 2:15 PM

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಕ್ಷಣ ತಮ್ಮನ್ನು ಸ್ಪೀಕರ್​ ಅನರ್ಹಗೊಳಿಸಿಬಿಟ್ಟಿದ್ದಾರೆ. ಅದನ್ನು ಅನೂರ್ಜಿತಗೊಳಿಸಬೇಕು ಮತ್ತು ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ತಮಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸುಪ್ರೀಂಕೋರ್ಟ್​ ಮೊರೆಹೋಗಿದ್ದ ಕಾಂಗ್ರೆಸ್​ ಮತ್ತು ಜೆಡಿಎಸ್​ ಶಾಸಕರಿಗೆ ಇಂದು ಕೋರ್ಟ್ ತೀರ್ಪು ಸಮಾಧಾನ ತಂದಿದೆ. ಈ ಕುರಿತು ಅನರ್ಹತೆಗೊಳಗಾಗಿದ್ದ ಶಾಸಕರು ಮನಸೋಇಚ್ಛೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆದ್ರೆ ಎಲ್ಲರೂ ಡಿಸೆಂಬರ್​ 5ಕ್ಕೆ ನಿಗದಿಯಾಗಿರುವ ಉಪ ಚುನಾವಣೆ ಮೇಲೆಯೇ ಕಣ್ಣಿಟ್ಟಿದ್ದಾರೆ. ಮತದಾರರನ್ನು ಹೇಗೆ ತಮ್ಮತ್ತ ಸೆಳೆಯಬೇಕು ಎಂಬುದೇ ಎಲ್ಲರ ಗುರಿಯಾಗಿದೆ. ಅತ್ತ ಸುಪ್ರೀಂ ತೀರ್ಪು […]

ಟಾಸ್ ಗೆದ್ದಿದ್ದೇವೆ, ಮ್ಯಾಚ್ ಗೆಲ್ಸಿಕೊಡಿ! ಏನಿದು ಟಾಸು-ಮ್ಯಾಚಿನ ರಹಸ್ಯ ಸಂದೇಶ?
Follow us on

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದಾಕ್ಷಣ ತಮ್ಮನ್ನು ಸ್ಪೀಕರ್​ ಅನರ್ಹಗೊಳಿಸಿಬಿಟ್ಟಿದ್ದಾರೆ. ಅದನ್ನು ಅನೂರ್ಜಿತಗೊಳಿಸಬೇಕು ಮತ್ತು ಮುಂದಿನ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ತಮಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸುಪ್ರೀಂಕೋರ್ಟ್​ ಮೊರೆಹೋಗಿದ್ದ ಕಾಂಗ್ರೆಸ್​ ಮತ್ತು ಜೆಡಿಎಸ್​ ಶಾಸಕರಿಗೆ ಇಂದು ಕೋರ್ಟ್ ತೀರ್ಪು ಸಮಾಧಾನ ತಂದಿದೆ.

ಈ ಕುರಿತು ಅನರ್ಹತೆಗೊಳಗಾಗಿದ್ದ ಶಾಸಕರು ಮನಸೋಇಚ್ಛೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆದ್ರೆ ಎಲ್ಲರೂ ಡಿಸೆಂಬರ್​ 5ಕ್ಕೆ ನಿಗದಿಯಾಗಿರುವ ಉಪ ಚುನಾವಣೆ ಮೇಲೆಯೇ ಕಣ್ಣಿಟ್ಟಿದ್ದಾರೆ. ಮತದಾರರನ್ನು ಹೇಗೆ ತಮ್ಮತ್ತ ಸೆಳೆಯಬೇಕು ಎಂಬುದೇ ಎಲ್ಲರ ಗುರಿಯಾಗಿದೆ.

ಅತ್ತ ಸುಪ್ರೀಂ ತೀರ್ಪು ಹೊರಬೀಳುತ್ತಿದ್ದಂತೆ ಇತ್ತ ಮಹಾಲಕ್ಷ್ಮಿ ಲೇ ಔಟ್​ ವಿಧಾನಸಭಾ ಕ್ಷೇತ್ರದಲ್ಲಿ ದಿಢೀರನೆ ಭಿತ್ತಿ ಪತ್ರಗಳು, ಬ್ಯಾನರ್​​ಗಳು ರಾರಾಜಿಸಲಾರಂಭಿಸಿವೆ. ಅದರಲ್ಲೊಂದು ಮತದಾರರ ಗಮನಸೆಳೆಯುತ್ತಿದೆ.

ದೇವರ ಅನುಗ್ರಹದಿಂದ ಟಾಸ್ ಗೆದ್ದಿದ್ದೇವೆ. ಕ್ಷೇತ್ರದ ಮತದಾರರು ಒಗ್ಗಟ್ಟಿನಿಂದ ಕೈ ಹಿಡಿದು ಮ್ಯಾಚ್ ಗೆಲ್ಲಿಸಿಕೊಡಿ ಎಂದು ಕ್ಷೇತ್ರದ ಮತದಾರರಲ್ಲಿ ಅನರ್ಹ ಶಾಸಕರ ಮನವಿ ಮಾಡಿಕೊಂಡಿದ್ದಾರೆ.

Published On - 2:13 pm, Wed, 13 November 19