ಅನರ್ಹ ಶಾಸಕರಿಗೆ ಸ್ವಲ್ಪ ಸಿಹಿ, ಸ್ಪಲ್ಪ ಕಹಿ: ಸುಪ್ರೀಂಕೋರ್ಟ್ ಹೇಳಿದ್ದೇನು?
ಬೆಂಗಳೂರು: ಹಲವು ದಿನಗಳಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಅನರ್ಹ ಶಾಸಕರ ಪ್ರಕರಣಕ್ಕೆ ಕೊನೆಗೂ ತೆರೆಬಿದ್ದಿದೆ. ಅನರ್ಹ ಶಾಸಕರಿಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಎಂಬಂತೆ ಇಂದು ಸುಪ್ರೀಂಕೋರ್ಟ್ನಿಂದ ತೀರ್ಪು ಬಂದಿದೆ. ಸುಪ್ರೀಂ ತೀರ್ಪಿನ ಪ್ರಮುಖ ಅಂಶಗಳು ಹೀಗಿವೆ: * ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಮತ್ತು ವಿಪಕ್ಷಗಳಿಗೆ ತನ್ನದೇ ಆದ ಹೊಣೆಗಾರಿಕೆಗಳಿವೆ * ಸಂಸದೀಯ ವ್ಯವಸ್ಥೆಯಲ್ಲಿ ನೈತಿಕತೆ ಮುಖ್ಯವಿರೋಧ ಪಕ್ಷ, ಆಡಳಿತ ಪಕ್ಷ ಎರಡರಲ್ಲೂ ನೈತಿಕತೆ ಇರಬೇಕು * ಅನರ್ಹ ಶಾಸಕರು ಮೊದಲು ಹೈಕೋರ್ಟ್ಗೆ ಅರ್ಜಿ […]
ಬೆಂಗಳೂರು: ಹಲವು ದಿನಗಳಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಅನರ್ಹ ಶಾಸಕರ ಪ್ರಕರಣಕ್ಕೆ ಕೊನೆಗೂ ತೆರೆಬಿದ್ದಿದೆ. ಅನರ್ಹ ಶಾಸಕರಿಗೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಎಂಬಂತೆ ಇಂದು ಸುಪ್ರೀಂಕೋರ್ಟ್ನಿಂದ ತೀರ್ಪು ಬಂದಿದೆ.
ಸುಪ್ರೀಂ ತೀರ್ಪಿನ ಪ್ರಮುಖ ಅಂಶಗಳು ಹೀಗಿವೆ: * ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸರ್ಕಾರ ಮತ್ತು ವಿಪಕ್ಷಗಳಿಗೆ ತನ್ನದೇ ಆದ ಹೊಣೆಗಾರಿಕೆಗಳಿವೆ * ಸಂಸದೀಯ ವ್ಯವಸ್ಥೆಯಲ್ಲಿ ನೈತಿಕತೆ ಮುಖ್ಯವಿರೋಧ ಪಕ್ಷ, ಆಡಳಿತ ಪಕ್ಷ ಎರಡರಲ್ಲೂ ನೈತಿಕತೆ ಇರಬೇಕು * ಅನರ್ಹ ಶಾಸಕರು ಮೊದಲು ಹೈಕೋರ್ಟ್ಗೆ ಅರ್ಜಿ ಸಲ್ಲಿಸಬೇಕಿತ್ತು * ಅನರ್ಹ ಶಾಸಕರು ನೇರವಾಗಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಬಾರದಿತ್ತು * ಎರಡೆರಡು ವಿಚಾರಣೆ ಬೇಡ ಅಂತಾ ನಾವೇ ವಿಚಾರಣೆ ಮಾಡಿದ್ದೇವೆ * ಅನರ್ಹರು ನೇರವಾಗಿ ಸುಪ್ರೀಂಕೋರ್ಟ್ಗೆ ಬಂದ ನಡೆಯನ್ನ ನಾವು ಸ್ವಾಗತಿಸಲ್ಲ * ಸ್ಪೀಕರ್ ಆದೇಶ ಮತ್ತು ನಡೆಯನ್ನ ನಾವು ಪರಿಶೀಲಿಸಿದ್ದೇವೆ * ಸ್ಪೀಕರ್ ಆದೇಶವನ್ನ ಭಾಗಶಃ ಎತ್ತಿ ಹಿಡಿಯುತ್ತಿದ್ದೇವೆ * 17 ಮಂದಿಯ ಅನರ್ಹತೆ ಮುಂದುವರಿಯಲಿದೆ * ಅನರ್ಹರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಇದೆ * ಅನರ್ಹರು ಉಪಚುನಾವಣೆಗೆ ಸ್ಪರ್ಧಿಸಬಹುದು * ವಿಧಾನಸಭೆ ಅವಧಿ ಮುಗಿಯುವವರೆಗೂ ಅನರ್ಹರಲ್ಲ * ಸ್ಪೀಕರ್ ಅನರ್ಹತೆಗೆ ವಿಧಿಸಿದ್ದ ಕಾಲಾವಧಿ ಸರಿ ಇಲ್ಲ * ಸ್ಪೀಕರ್ ಅನರ್ಹತೆಗೆ ಕಾಲಾವಧಿ ನಿರ್ಧರಿಸುವಂತಿಲ್ಲ * ಅನರ್ಹ ಶಾಸಕರು ಸದ್ಯಕ್ಕೆ ಮಂತ್ರಿಯಾಗುವಂತಿಲ್ಲ * ಚುನಾವಣೆಯಲ್ಲಿ ಗೆದ್ದು ಬರೋವರೆಗೆ ಮಂತ್ರಿಯಾಗುವಂತಿಲ್ಲ * ಸರ್ಕಾರದ ಯಾವುದೇ ಹುದ್ದೆಯನ್ನ ಅನರ್ಹರು ಅಲಂಕರಿಸುವಂತಿಲ್ಲ * ಕುದುರೆ ವ್ಯಾಪಾರ ನಡೆಯಬಾರದು, ಪ್ರಜಾಪ್ರಭುತ್ವಕ್ಕೆ ಮಾರಕ * ಶಾಸಕರು ರಾಜೀನಾಮೆ ನೀಡಿದ ಬಳಿಕ ಸ್ಪೀಕರ್ ರಾಜೀನಾಮೆ ಅಂಗೀಕರಿಸಬೇಕು * ಸ್ಪೀಕರ್ಗೆ ರಾಜೀನಾಮೆ ಅಂಗೀಕರಿಸುವುದು ಬಿಟ್ಟು ಬೇರೆ ಆಯ್ಕೆ ಇಲ್ಲ * ಅನರ್ಹತೆಗೂ ರಾಜೀನಾಮೆ ಸ್ವೀಕಾರಕ್ಕೂ ಯಾವುದೇ ಸಂಬಂಧವಿಲ್ಲ * ಸ್ಪೀಕರ್ಗಿರುವ ಅನರ್ಹತೆಗೊಳಿಸುವ ಹಕ್ಕು ಹಾಗೆಯೇ ಇರುತ್ತದೆ * ಸ್ಪೀಕರ್ ರಾಜೀನಾಮೆ ಸ್ವಇಚ್ಛೆಯಿಂದ ನೀಡಿದ್ದಾರೆಯೇ ಇಲ್ಲವೇ ಎಂದು ಪರಿಶೀಲಿಸಬೇಕು * ಸ್ವಇಚ್ಛೆಯಿಂದ ನೀಡಿದಾಗ ಸ್ಪೀಕರ್ ರಾಜೀನಾಮೆ ಅಂಗೀಕರಿಸಬೇಕು * ಶೆಡ್ಯೂಲ್ 10ರ ಪ್ರಕಾರ ರಾಜೀನಾಮೆ ಅಥವಾ ಅನರ್ಹತೆ ಎರಡರಿಂದಲೂ ಶಾಸಕ ಸ್ಥಾನ ಖಾಲಿಯಾಗುತ್ತದೆ * ಸ್ಪೀಕರ್ಗೆ ಸದನದ ಅವಧಿ ಮುಗಿಯುವವರೆಗೆ ಅನರ್ಹತೆಗೊಳಿಸುವ ಅಧಿಕಾರವಿಲ್ಲ * ಸ್ಪೀಕರ್ಗಳು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ನಿದರ್ಶನಗಳು ಹೆಚ್ಚಾಗುತ್ತಿವೆ