ಅನರ್ಹರ ಜೊತೆ ಇಂದೇ ಮೀಟಿಂಗ್, 15 ಕ್ಷೇತ್ರವನ್ನೂ ಗೆಲ್ತೇವೆ: ಯಡಿಯೂರಪ್ಪ
ಬೆಂಗಳೂರು: ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಜತೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಬಳಿಕ ಅನರ್ಹ ಶಾಸಕರು ದೆಹಲಿಯಿಂದ ಬೆಂಗಳೂರಿಗೆ ಬಂದ ನಂತರ ಅವರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಸಿಎಂ ಬಿಎಸ್‌ವೈ ನಿರಾಳ: ಸುಪ್ರೀಂಕೋರ್ಟ್ನಿಂದ ತೀರ್ಪು ಹೊರಬೀಳುತ್ತಿದ್ದಂತೆ ಸಿಎಂ ಯಡಿಯೂರಪ್ಪ ನಿರಾಳರಾಗಿದ್ದಾರೆ. ಸುಪ್ರೀಂ ತೀರ್ಪಿಗೆ ಸಂತಸ ವ್ಯಕ್ತಪಡಿಸಿ, ನಗುಮುಖದಲ್ಲೆ ಜೊತೆ ಇದ್ದವರ ಬಳಿ ಬಿ.ಎಸ್.ಯಡಿಯೂರಪ್ಪ […]
ಬೆಂಗಳೂರು: ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ಸ್ಪರ್ಧೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಜತೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.
ಇಂದು ಮಧ್ಯಾಹ್ನ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಬಳಿಕ ಅನರ್ಹ ಶಾಸಕರು ದೆಹಲಿಯಿಂದ ಬೆಂಗಳೂರಿಗೆ ಬಂದ ನಂತರ ಅವರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.
ಸಿಎಂ ಬಿಎಸ್‌ವೈ ನಿರಾಳ: ಸುಪ್ರೀಂಕೋರ್ಟ್ನಿಂದ ತೀರ್ಪು ಹೊರಬೀಳುತ್ತಿದ್ದಂತೆ ಸಿಎಂ ಯಡಿಯೂರಪ್ಪ ನಿರಾಳರಾಗಿದ್ದಾರೆ. ಸುಪ್ರೀಂ ತೀರ್ಪಿಗೆ ಸಂತಸ ವ್ಯಕ್ತಪಡಿಸಿ, ನಗುಮುಖದಲ್ಲೆ ಜೊತೆ ಇದ್ದವರ ಬಳಿ ಬಿ.ಎಸ್.ಯಡಿಯೂರಪ್ಪ ಮಾತುಕತೆ ನಡೆಸಿದ್ದಾರೆ.
15ಕ್ಕೆ 15 ಕ್ಷೇತ್ರವನ್ನೂ ನಾವು ಗೆಲ್ತೇವೆ ಇಡೀ ದೇಶ ಸುಪ್ರೀಂಕೋರ್ಟ್ ತೀರ್ಪಿಗೆ ಕಾಯ್ತಿತ್ತು. ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಸಿದ್ದರಾಮಯ್ಯ ಸೇರಿಕೊಂಡು ಕುತಂತ್ರ, ಷಡ್ಯಂತ್ರ ಮಾಡಿದ್ರು. ಆದ್ರೀಗ 15 ಜನ ಸ್ಪರ್ಧೆ ಮಾಡಬಹುದು ಅಂತಾ ಹೇಳಿದೆ. ಸುಪ್ರೀಂಕೋರ್ಟ್ ಅದೇಶವನ್ನ ಸ್ವಾಗತಿಸುತ್ತೇವೆ. 15ಕ್ಕೆ 15 ಕ್ಷೇತ್ರವನ್ನೂ ನಾವು ಗೆಲ್ತೇವೆ. ನಾಳೆಯಿಂದಲೇ ಎಲ್ಲಾ ಸಚಿವರು, ಮುಖಂಡರು ಜವಾಬ್ದಾರಿ ತಗೊಂಡು ಗೆಲ್ಲಿಸಿಕೊಳ್ಳೋಕೆ ಕೆಲಸ ಮಾಡ್ತೇವೆ ಎಂದು ಡಾಲರ್ಸ್ ಕಾಲೋನಿಯಲ್ಲಿ ಸಿಎಂ ಬಿಎಸ್‌ವೈ ಹೇಳಿದ್ದಾರೆ.
Published On - 11:37 am, Wed, 13 November 19