ಎಲ್ರೂ ದಿಲ್ಲಿ ವಿಮಾನವೇರಿದ್ದರೆ, ಆನಂದ್ ಸಿಂಗ್ ಮಾತ್ರ ಯಾಕೆ ಇನ್ನೂ ಇಲ್ಲೇ..!?
ಬೆಂಗಳೂರು: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ನೀಡಲಿರುವ ಅತ್ಯಂತ ಮಹತ್ವದ ಆದೇಶದ ಬಗ್ಗೆಇಡೀ ದೇಶವೇ ಎದುರು ನೋಡುತ್ತಿದೆ. ಇದಕ್ಕೆ ಕಾರಣೀಭೂತರಾದ ಶಾಸಕರೂ ಅದಾಗಲೇ ದಿಲ್ಲಿ ಫ್ಲೈಟ್ ಹತ್ತಿದ್ದಾರೆ. ಆದ್ರೆ ಆವೊಬ್ಬ ಶಾಸಕರು ಮಾತ್ರ ಇನ್ನೂ ಬೆಂಗಳೂರಿನಲ್ಲಿಯೇ ಇದ್ದಾರೆ. ಹೌದು ವಿಜಯನಗರ ಶಾಸಕ ಆನಂದ್ ಸಿಂಗ್ ಸದ್ಯಕ್ಕೆ ಬೆಂಗಳೂರಿನಲ್ಲೇ ಇರುವ ಅನರ್ಹ ಶಾಸಕ. ವಸಂತ ನಗರದ ತಮ್ಮ ಫ್ಲ್ಯಾಟ್ ನಲ್ಲಿರುವ ಆನಂದ್ ಸಿಂಗ್, ಮಗನ ಮದುವೆ ಸಿದ್ಧತೆಯಲ್ಲಿ ಬ್ಯುಸಿ ಆಗಿದ್ದಾರೆ. ಹಾಗಾಗಿ, ದಿಲ್ಲಿ ಬಗ್ಗೆ ಹೆಚ್ಚು ಗಮನಹರಿಸಲಾಗಿಲ್ಲ ಅವ್ರಿಗೆ. […]
ಬೆಂಗಳೂರು: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ನೀಡಲಿರುವ ಅತ್ಯಂತ ಮಹತ್ವದ ಆದೇಶದ ಬಗ್ಗೆಇಡೀ ದೇಶವೇ ಎದುರು ನೋಡುತ್ತಿದೆ. ಇದಕ್ಕೆ ಕಾರಣೀಭೂತರಾದ ಶಾಸಕರೂ ಅದಾಗಲೇ ದಿಲ್ಲಿ ಫ್ಲೈಟ್ ಹತ್ತಿದ್ದಾರೆ. ಆದ್ರೆ ಆವೊಬ್ಬ ಶಾಸಕರು ಮಾತ್ರ ಇನ್ನೂ ಬೆಂಗಳೂರಿನಲ್ಲಿಯೇ ಇದ್ದಾರೆ.
ಹೌದು ವಿಜಯನಗರ ಶಾಸಕ ಆನಂದ್ ಸಿಂಗ್ ಸದ್ಯಕ್ಕೆ ಬೆಂಗಳೂರಿನಲ್ಲೇ ಇರುವ ಅನರ್ಹ ಶಾಸಕ. ವಸಂತ ನಗರದ ತಮ್ಮ ಫ್ಲ್ಯಾಟ್ ನಲ್ಲಿರುವ ಆನಂದ್ ಸಿಂಗ್, ಮಗನ ಮದುವೆ ಸಿದ್ಧತೆಯಲ್ಲಿ ಬ್ಯುಸಿ ಆಗಿದ್ದಾರೆ. ಹಾಗಾಗಿ, ದಿಲ್ಲಿ ಬಗ್ಗೆ ಹೆಚ್ಚು ಗಮನಹರಿಸಲಾಗಿಲ್ಲ ಅವ್ರಿಗೆ. ಇಂದು ಅವರು ಹೈದರಾಬಾದ್‌ಗೆ ತೆರಳುವ ಸಾಧ್ಯತೆಯಿದೆ. ಮದುವೆ ಪತ್ರ ಹಂಚುವ ನಿಮಿತ್ತ ಆನಂದ್ ಸಿಂಗ್ ಹೈದ್ರಾಬಾದ್ ಗೆ ಹೊರಡಲಿದ್ದಾರೆ ಎಂದು ತಿಳಿದುಬಂದಿದೆ.
ಆನಂದ್ ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್ ಅವರು ಸಂಜನಾ ಸಿಂಗ್ ಅವರನ್ನು ಡಿಸೆಂಬರ್ 1 ರಂದು ವರಿಸಲಿದ್ದಾರೆ.
Published On - 9:07 am, Wed, 13 November 19