ಎಲ್ರೂ ದಿಲ್ಲಿ ವಿಮಾನವೇರಿದ್ದರೆ, ಆನಂದ್ ಸಿಂಗ್ ಮಾತ್ರ ಯಾಕೆ ಇನ್ನೂ ಇಲ್ಲೇ..!?

ಬೆಂಗಳೂರು: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್‌ ನೀಡಲಿರುವ ಅತ್ಯಂತ ಮಹತ್ವದ ಆದೇಶದ ಬಗ್ಗೆಇಡೀ ದೇಶವೇ ಎದುರು ನೋಡುತ್ತಿದೆ. ಇದಕ್ಕೆ ಕಾರಣೀಭೂತರಾದ ಶಾಸಕರೂ ಅದಾಗಲೇ ದಿಲ್ಲಿ ಫ್ಲೈಟ್​ ಹತ್ತಿದ್ದಾರೆ. ಆದ್ರೆ ಆವೊಬ್ಬ ಶಾಸಕರು ಮಾತ್ರ ಇನ್ನೂ ಬೆಂಗಳೂರಿನಲ್ಲಿಯೇ ಇದ್ದಾರೆ. ಹೌದು ವಿಜಯನಗರ ಶಾಸಕ ಆನಂದ್ ಸಿಂಗ್ ಸದ್ಯಕ್ಕೆ ಬೆಂಗಳೂರಿನಲ್ಲೇ ಇರುವ ಅನರ್ಹ ಶಾಸಕ. ವಸಂತ ನಗರದ ತಮ್ಮ ಫ್ಲ್ಯಾಟ್ ನಲ್ಲಿರುವ ಆನಂದ್ ಸಿಂಗ್, ಮಗನ ಮದುವೆ ಸಿದ್ಧತೆಯಲ್ಲಿ ಬ್ಯುಸಿ ಆಗಿದ್ದಾರೆ. ಹಾಗಾಗಿ, ದಿಲ್ಲಿ ಬಗ್ಗೆ ಹೆಚ್ಚು ಗಮನಹರಿಸಲಾಗಿಲ್ಲ ಅವ್ರಿಗೆ. […]

ಎಲ್ರೂ ದಿಲ್ಲಿ ವಿಮಾನವೇರಿದ್ದರೆ, ಆನಂದ್ ಸಿಂಗ್ ಮಾತ್ರ ಯಾಕೆ ಇನ್ನೂ ಇಲ್ಲೇ..!?
ಸಾಧು ಶ್ರೀನಾಥ್​

Updated on: Nov 28, 2019 | 10:46 AM

ಬೆಂಗಳೂರು: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್‌ ನೀಡಲಿರುವ ಅತ್ಯಂತ ಮಹತ್ವದ ಆದೇಶದ ಬಗ್ಗೆಇಡೀ ದೇಶವೇ ಎದುರು ನೋಡುತ್ತಿದೆ. ಇದಕ್ಕೆ ಕಾರಣೀಭೂತರಾದ ಶಾಸಕರೂ ಅದಾಗಲೇ ದಿಲ್ಲಿ ಫ್ಲೈಟ್​ ಹತ್ತಿದ್ದಾರೆ. ಆದ್ರೆ ಆವೊಬ್ಬ ಶಾಸಕರು ಮಾತ್ರ ಇನ್ನೂ ಬೆಂಗಳೂರಿನಲ್ಲಿಯೇ ಇದ್ದಾರೆ.

ಹೌದು ವಿಜಯನಗರ ಶಾಸಕ ಆನಂದ್ ಸಿಂಗ್ ಸದ್ಯಕ್ಕೆ ಬೆಂಗಳೂರಿನಲ್ಲೇ ಇರುವ ಅನರ್ಹ ಶಾಸಕ. ವಸಂತ ನಗರದ ತಮ್ಮ ಫ್ಲ್ಯಾಟ್ ನಲ್ಲಿರುವ ಆನಂದ್ ಸಿಂಗ್, ಮಗನ ಮದುವೆ ಸಿದ್ಧತೆಯಲ್ಲಿ ಬ್ಯುಸಿ ಆಗಿದ್ದಾರೆ. ಹಾಗಾಗಿ, ದಿಲ್ಲಿ ಬಗ್ಗೆ ಹೆಚ್ಚು ಗಮನಹರಿಸಲಾಗಿಲ್ಲ ಅವ್ರಿಗೆ. ಇಂದು ಅವರು ಹೈದರಾಬಾದ್‌ಗೆ ತೆರಳುವ ಸಾಧ್ಯತೆಯಿದೆ. ಮದುವೆ ಪತ್ರ ಹಂಚುವ ನಿಮಿತ್ತ ಆನಂದ್ ಸಿಂಗ್ ಹೈದ್ರಾಬಾದ್ ಗೆ ಹೊರಡಲಿದ್ದಾರೆ ಎಂದು ತಿಳಿದುಬಂದಿದೆ.

ಆನಂದ್ ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್ ಅವರು ಸಂಜನಾ ಸಿಂಗ್​ ಅವರನ್ನು ಡಿಸೆಂಬರ್ 1 ರಂದು ವರಿಸಲಿದ್ದಾರೆ.

Published On - 9:07 am, Wed, 13 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us