ವಿಜಯಪುರವನ್ನು ಟೂರಿಸಂ ಹಬ್ ಆಗಿ ಮಾಡಲು ಜಿಲ್ಲಾಡಳಿತ ನಿರ್ಧಾರ

|

Updated on: Mar 11, 2021 | 11:49 AM

ನಗರದ ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಹಾಗೂ ಪ್ರವಾಸಿಗರ ಆಕರ್ಷಣೆಗಾಗಿ ಗಗನ್ ಮಹಲ್ ಪ್ರದೇಶವನ್ನು ಟೂರಿಸಂ ಹಬ್ವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಈ ದಿಸೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಸೇರಿದಂತೆ ಇತರೆ ಆಧಿಕಾರಿಗಳು ನಗರದ ವಿವಿಧ ಭಾಗದಲ್ಲಿರುವ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ನಡೆಸಿದರು.

ವಿಜಯಪುರವನ್ನು ಟೂರಿಸಂ ಹಬ್ ಆಗಿ ಮಾಡಲು ಜಿಲ್ಲಾಡಳಿತ ನಿರ್ಧಾರ
ಗೋಲಗುಮ್ಮಟ (ಸಾಂದರ್ಭಿಕ ಚಿತ್ರ)
Follow us on

ವಿಜಯಪುರ: ವಿಶ್ವವಿಖ್ಯಾತ ಗೋಲಗುಮ್ಮಟ, ತಾಜ್ ಮಹಲ್ ನಿರ್ಮಾಣಕ್ಕೆ ಪ್ರೇರಣೆಯಾದ ಇಬ್ರಾಹಿಂ ರೋಜಾ, ಬಾರಾಕಮಾನ, ಉಪ್ಪಲಿ ಬುರ್ಜ, ಬೇಸಿಗೆ ಅರಮನೆ ಹೀಗೆ ಸಾಲು ಸಾಲು ಐತಿಹಾಸಿಕ ಸ್ಮಾರಕಗಳು ಜಿಲ್ಲೆಯಲ್ಲಿವೆ. ಇಷ್ಟೆಲ್ಲಾ ಸ್ಮಾರಕಗಳಿದ್ದರೂ ಪ್ರವಾಸೋದ್ಯಮ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲಾ. ಸರ್ಕಾರದ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಸಾರ್ವಜನಿಕರ ಮನಸ್ಥಿತಿ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಅದರೆ ಇದೀಗ ಜಿಲ್ಲೆಯನ್ನು ಟೂರಿಸಂ ಹಬ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ.

ನಗರದ ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಹಾಗೂ ಪ್ರವಾಸಿಗರ ಆಕರ್ಷಣೆಗಾಗಿ ಗಗನ್ ಮಹಲ್ ಪ್ರದೇಶವನ್ನು ಟೂರಿಸಂ ಹಬ್ವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಈ ದಿಸೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಸೇರಿದಂತೆ ಇತರೆ ಆಧಿಕಾರಿಗಳು ನಗರದ ವಿವಿಧ ಭಾಗದಲ್ಲಿರುವ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ನಡೆಸಿದರು. ನಗರದ ಮಧ್ಯಭಾಗದಲ್ಲಿರುವ ಆದಿಲ್ ಶಾಹಿ ಕಾಲದ ಐತಿಹಾಸಿಕ ತಾಣಗಳ ಸ್ವಚ್ಛತೆ, ಸಂರಕ್ಷಣೆ ಮತ್ತು ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಪರಿಶೀಲಿಸಲು ಹೆರಿಟೇಜ್ ವಾಕ್ ನಡೆಸಿದದರು. ಆದಿಲ್ ಶಾಹಿ ಕಾಲದ ಮಹತ್ವದ ತಾಣಗಳಾದ ಖ್ವಾಜಾ ಜಹಾನ್ ಮಸೀದಿ- ಹಳೇ ಮಸೀದಿ ನಂಬರ್ 294, ಗಗನ್ ಮಹಲ್, ಆನಂದ ಮಹಲ್, ಸಿಎಸ್ಐ ಚರ್ಚ್, ಮೆಕ್ಕಾ ಮಸೀದಿ, ಚಿಂಚದೀದಿ ಮಸೀದಿ ಹಾಗೂ ಪಸರಿ ಕಮಾನ್ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ವಿಶೇಷ ಒತ್ತು
ಐತಿಹಾಸಿಕವಾಗಿ ಅತ್ಯಂತ ಮಹತ್ವ ಪಡೆದಿರುವ ತಾಣಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ, ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ವಿಶೇಷ ಒತ್ತನ್ನು ನೀಡಿ ಟೂರಿಸ್ಂಕ ಹಬ್ ಆಗಿ ರೂಪಿಸುವ ಉದ್ದೇಶವಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಸ್ಪಷ್ಟಪಡಿಸಿದ್ದಾರೆ.

ನಗರದ ಐತಿಹಾಸಿಕ ತಾಣಗಳಲ್ಲಿ ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ ಹಾಗೂ ಇತರ ಅಧಿಕಾರಿಗಳೊಂದಿಗೆ ಹೆರಿಟೇಜ್ ವಾಕ್ ನಡೆಸಿದ ಜಿಲ್ಲಾಧಿಕಾರಿ ಖ್ವಾಜಾ ಜಹಾನ್ ಮಸೀದಿ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕೆಂದು ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಗಗನ್ ಮಹಲ್ಗೆ ಭೇಟಿ ನೀಡಿ ಸ್ವಚ್ಛತೆಗಾಗಿ ಕ್ರಮ ಕೈಗೊಳ್ಳಲು ಕಸ ಸಂಗ್ರಹಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಆನಂದ ಮಹಲ್ಗೆ ಭೇಟಿ ನೀಡಿ ಪ್ರವಾಸಿಗರಿಗೆ ಐತಿಹಾಸಿಕ ಸ್ಮಾರಕಗಳು, ಇತಿಹಾಸದ ಬಗ್ಗೆ ತಿಳಿಯಲು ಮೊದಲು ಮಾಹಿತಿ ಕೇಂದ್ರ ಸ್ಥಾಪನೆ, ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿ ಫುಡ್ ಕೋರ್ಟ್ ಇರುವುದು ಅತ್ಯಂತ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಆಧಿಕಾರಿಗಳಿಗೆ ಸೂಚಿಸಿದರು.

ಉದ್ಯಾನವನ ಹಾಗೂ ಪಾರ್ಕಿಂಗ್ಗೆ ಒತ್ತು
ಪ್ರವಾಸಸೋಧ್ಯಮ ಬೆಳೆಯಲು ಉದ್ಯಾನವನ ಹಾಗೂ ಪಾರ್ಕಿಂಗ್ ಅವಶ್ಯಕವಾಗಿದೆ. ಈ ಕಾರಣದಿಂದ ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳ ಸುತ್ತಮುತ್ತ ಉತ್ತಮ ಉದ್ಯಾನವನ ನಿರ್ಮಾಣ ಹಾಗೂ ವಾಹನ ಪಾರ್ಕಿಂಗ್ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಸದ್ಯ ಮೆಕ್ಕಾ ಮದೀನಾ ಮಸೀದಿ ಹಿಂದಿನ ಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಹಾಗೂ ಮಸೀದಿ ಮುಂಭಾಗ ಉದ್ಯಾನವನ ನಿರ್ಮಿಸಿ ಬೆಳಿಗ್ಗೆ ವಾಕ್ ಮಾಡುವವರಿಗೆ ಅನುವು ಮಾಡಿಕೊಳ್ಳಲು ಜಿಲ್ಲಾಡಳಿತ ತೀರ್ಮಾನಿಸಿದ್ದು, ಪುಟ್ಟ ಮಕ್ಕಳು ಆಟವಾಡಲು ಸಾಧನ-ಸಲಕರಣೆಗಳು ಪ್ರವಾಸಿ ತಾಣಗಳಲ್ಲಿ ಒದಗಿಸುವಂತೆ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ.

ಅಕ್ರಮ ತೆರವು
ಈಗಾಗಲೇ ನಗರದಲ್ಲಿರುವ ಅಪರೂಪದ ಹಾಗೂ ಮಹಿಳೆಯಷ್ಟೇ ಪ್ರಾರ್ಥನೆ ಮಾಡುವ ಮೆಕ್ಕಾ ಮಸೀದಿ ಸುತ್ತಲೂ ಅತಿಕ್ರಮಣವಾಗಿತ್ತು. ಮಹಾನಗರ ಪಾಲಿಕೆಯ ನೇತೃತ್ವದಲ್ಲಿ ಅತಿಕ್ರಮಣ ತೆರವು ಮಾಡಲಾಗಿದೆ. ತೆರವು ಮಾಡಿದ ಸ್ಥಳದಲ್ಲಿ ವಾಕಿಂಗ್ ಟ್ರ್ಯಾಕ್, ಪಾರ್ಕ್ ನಿರ್ಮಾಣ ಮಾಡಲು ಮಹಾನಗರ ಪಾಲಿಕೆ ಮುಂದಾಗಿದೆ. ಇದರ ಜೊತೆಗೆ ಐತಿಹಾಸಿಕ ತಾಣಗಳಿಗೆ ನೀರು ಪೂರೈಸುವ ಯೋಜನೆಯ ಖರ್ಚುವೆಚ್ಚ ವರದಿ ಸಿದ್ಧಪಡಿಸಲಾಗುತ್ತಿದ್ದು, ಗೋಲಗುಮ್ಮಟದ ವರೆಗೆ ನೀರು ಸರಬರಾಜು ಮಾಡುವ ಕುರಿತು ಧಾರವಾಡ ಪುರಾತತ್ವ ಸರ್ವೇಕ್ಷಣ ಇಲಾಖೆ ಕಚೇರಿಯೊಂದಿಗೆ ಪತ್ರ ವ್ಯವಹಾರ ನಡೆಸಿ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕೆಂದು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ಹೆರಿಟೇಜ್ ವಾಕ್ನಲ್ಲಿ ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಭಜಂತ್ರಿ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಪುರಾತತ್ವ ಇಲಾಖೆಯ ಹಿರಿಯ ಸಂರಕ್ಷಣಾಧಿಕಾರಿ ಪ್ರಮೋದ್, ಕಿರಿಯ ಸಂರಕ್ಷಣಾಧಿಕಾರಿ ರಾಕೇಶ ಹಾಗೂ ಕ್ರೀಡಾಧಿಕಾರಿ ಎಸ್.ಜಿ ಲೋಣಿ ಸೇರಿದಂತೆ ಇತರರು ಡಿಸಿ ಪಿ.ಸುನೀಲಕುಮಾರ್​ಗೆ ಸಾಥ್ ನೀಡಿದರು.

ಇದನ್ನೂ ಓದಿ

ಮೈಸೂರು ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜವಂಶಸ್ಥರಿಂದ ಸಲಹೆ ಪಡೆದ ಸಚಿವ ಸಿ.ಪಿ.ಯೋಗೇಶ್ವರ್

ಬಾ.. ಬಾ.. ನಾ ರೆಡಿ ಅಂದ ರಾಬರ್ಟ್.. ಚಿತ್ರಮಂದಿರಗಳ ಗ್ಲಾಸ್ ಪುಡಿ ಪುಡಿ, ದರ್ಶನ್ ಅಭಿಮಾನಿಗಳ ಮೇಲೆ ಲಾಠಿ ಚಾರ್ಜ್

Published On - 11:44 am, Thu, 11 March 21