ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ಲುಪುಡಿ ಘಟಕ-ಕಲ್ಲು ಗಣಿಗಾರಿಕೆ ಮೇಲೆ ತೀವ್ರ ನಿಗಾ: ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸ್ಪಷ್ಟನೆ

ಕಲ್ಲುಪುಡಿ ಘಟಕ, ಕಲ್ಲು ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆಯಲ್ಲಿ ಘಟಕಗಳಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾದದ್ದು ಕಂಡುಬಂದಲ್ಲಿ ಲೈಸನ್ಸ್ ರದ್ಧತಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ದಿಸಿ ಪಿ. ಸುನಿಲ ಕುಮಾರ್ ಹೇಳಿದರು.

ವಿಜಯಪುರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಲ್ಲುಪುಡಿ ಘಟಕ-ಕಲ್ಲು ಗಣಿಗಾರಿಕೆ ಮೇಲೆ ತೀವ್ರ ನಿಗಾ: ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸ್ಪಷ್ಟನೆ
ಗಣಿಗಾರಿಕೆ ಬಗ್ಗೆ ಸಭೆಯಲ್ಲಿ ಸ್ಪಷ್ಟಪಡಿಸಿದ ಪಿ. ಸುನಿಲ ಕುಮಾರ್
Follow us
preethi shettigar
| Updated By: Lakshmi Hegde

Updated on:Feb 06, 2021 | 5:58 PM

ವಿಜಯಪುರ: ಗಣಿಗಾರಿಕೆಗೆ ಬಳಕೆ  ಮಾಡುವ ಸ್ಪೋಟಕ ಸ್ಟೋಟವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ದುರಂತದ ಬಳಿಕ ವಿಜಯಪುರ ಜಿಲ್ಲೆಯಲ್ಲಿಯೂ ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಕೂಲಂಕಷವಾಗಿ ಮಾಹಿತಿ ಕಲೆ ಹಾಕಲಾಯಿತು.

ಜಿಲ್ಲಾ ಟಾಸ್ಕ್ ಫೋರ್ಸ್, ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಲ್ಲುಪುಡಿ ಘಟಕ, ಕಲ್ಲು ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆಯಲ್ಲಿ ಬಳಸುತ್ತಿರುವ ಸ್ಪೋಟಕಗಳ ಸುರಕ್ಷತಾ ವಿಧಾನಗಳ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಯಿತು. ಕಲ್ಲುಪುಡಿ ಘಟಕ, ಕಲ್ಲು ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆಯಲ್ಲಿ ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾದದ್ದು ಕಂಡುಬಂದಲ್ಲಿ ಲೈಸನ್ಸ್ ರದ್ಧತಿಗೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಕಾನೂನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಘಟಕಗಳ ಬಗ್ಗೆ ಮಾಹಿತಿ ಕಲೆಹಾಕಿ ಅಂತಹ ಪ್ರಕರಣಗಳಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚಿಸಿದರು.

ಒಡಂಬಡಿಕೆ ಪತ್ರ ಕಡ್ಡಾಯ ಜಿಲ್ಲೆಯ ಕಲ್ಲುಪುಡಿ ಘಟಕಗಳಿಗೆ ಅವಶ್ಯವಿರುವ ಕಚ್ಚಾ ವಸ್ತುವನ್ನು ಎಲ್ಲಿಂದ ಪೂರೈಸಲಾಗುತ್ತಿದೆ ಹಾಗೂ ಕಾನೂನುಬದ್ಧವಾಗಿ ಬಳಸಲಾಗುತ್ತಿದೆಯೇ ಎಂಬುದರ ಬಗ್ಗೆ ಪರಿಶೀಲಿಸಬೇಕು. ಕಚ್ಚಾ ವಸ್ತುವನ್ನು ಸ್ವಂತ ಘಟಕದಿಂದ ಬಳಸಲಾಗುತ್ತಿದೆಯೇ ಅಥವಾ ಬೇರೆ ಅಧಿಕೃತ ಕಲ್ಲುಗಣಿಗಾರಿಕೆ ಘಟಕದಿಂದ ಪಡೆಯಲಾಗುತ್ತಿದೆಯೇ ಎಂಬ ಬಗ್ಗೆ ಒಡಂಬಡಿಕೆ ಪ್ರಮಾಣಪತ್ರ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸ್ವಂತವಾಗಿದ್ದರೆ ಪರವಾನಿಗೆ ಪತ್ರ ಕಡ್ಡಾಯವಾಗಿರಬೇಕು. ಬೇರೆ ಅಧಿಕೃತ ಕಲ್ಲುಗಣಿಗಾರಿಕೆ ಘಟಕದಿಂದ ಕಚ್ಚಾ ವಸ್ತುಗಳನ್ನು ಬಳಕೆ ಮಾಡುತ್ತಿದ್ದರೆ ಒಡಬಂಡಿಕೆ ಪತ್ರ ಕಡ್ಡಾಯವಾಗಿರಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಹೇಳಿದರು.

ಅಕ್ರಮ ಸಕ್ರಮಗಳ ಮೇಲೆ ನಿಗಾ: ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ಒಟ್ಟು 3 ಕಲ್ಲುಪುಡಿ ಘಟಕಗಳು ಇದ್ದು ಈ ಪೈಕಿ 2 ಕಲ್ಲುಪುಡಿ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು. ಇನ್ನುಳಿದ 1 ಕಲ್ಲುಪುಡಿ ಘಟಕವು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವಿಧಿಸಿದ ನಿಬಂಧನೆಗಳನ್ನು ಉಲ್ಲಂಘಿಸಿದ ಕಾರಣ ಈ ಘಟಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ಗಣಿ ಮತ್ತು ಭೂಗರ್ಭಶಾಸ್ತ್ರಜ್ಞ ನಾಗಭೂಷಣ್ ಸಭೆಗೆ ತಿಳಿಸಿದರು.

mining vijayapura

ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಲ್ಲುಪುಡಿ ಘಟಕಗಳು ನಿಯಮಾನುಸಾರ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ ಇವರೊಂದಿಗೆ ಜಂಟಿಯಾಗಿ ಸ್ಥಳ ತನಿಖೆ ಮಾಡಿ ನಿಯಮಾನುಸಾರ ಸೂಕ್ತ ದಾಖಲೆಗಳೊಂದಿಗೆ ವರದಿಯನ್ನು ಸಲ್ಲಿಸಲು ಹಾಗೂ ಅದೇ ರೀತಿ ವಿಜಯಪುರ ತಾಲೂಕಿನ ಐನಾಪೂರ ಗ್ರಾಮದ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಘಟಕಗಳ ಬಗ್ಗೆ ಪರಿಶೀಲಿಸಿ ಸದ್ಯದ ನಿಯಮಗಳನ್ವಯ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಆಧಿಕಾರಿಗಳಿಗೆ ಸೂಚಿಸಿದರು.

ಡ್ರೋನ್ ಮೂಲಕ ಸರ್ವೇ  ಪ್ರತಿ ತಾಲೂಕುವಾರು ಈವರೆಗೆ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಘಟಕಗಳಿಗೆ ಸಂಬಂಧಿಸಿದಂತೆ ಅನುಮತಿ ನೀಡಲಾದ ಕ್ಷೇತ್ರ ವ್ಯಾಪ್ತಿಯನ್ನು ಮೀರಿ ಹೆಚ್ಚಿನ ಕ್ಷೇತ್ರದಲ್ಲಿ ಗಣಿಗಾರಿಕೆ ಕೈಗೊಂಡವರಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ನಿಖರವಾಗಿ ತಿಳಿಯಲು ಕಲ್ಲು ಗಣಿಗಾರಿಕೆ ಕುರಿತು ಡ್ರೋನ್ ಸರ್ವೇ ಮೂಲಕ ಸಮೀಕ್ಷೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಡ್ರೋನ್ ಸರ್ವೆ ಸಂಬಂಧ ಶೀಘ್ರವೇ ಟೆಂಡರ್ ಪ್ರಕ್ರಿಯೆ ಚುರುಕುಗೊಳಿಸಲು 2ದಿವಸದೊಳಗೆ ಕ್ರಮವಹಿಸಲು ನಿರ್ಣಯ ಮಾಡಲಾಗಿದೆ.

ಕಲ್ಲು ಪುಡಿ ಘಟಕಗಳ ಮಾಹಿತಿ: ಜಿಲ್ಲೆಯಲ್ಲಿ ಕಲ್ಲುಪುಡಿ ಘಟಕ, ಕಲ್ಲುಗಣಿ ಹಾಗೂ ಕಲ್ಲುಗಣಿಗಾರಿಕೆಯಲ್ಲಿ ಬಳಸುತ್ತಿರುವ ಸ್ಫೋಟಕಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಲ್ಲುಪುಡಿ ಘಟಕ (ಕ್ರಷರ್)ಗಳು-87, ಈ 87 ರ ಪೈಕಿ ಅವಧಿ ಮುಕ್ತಾಯಗೊಂಡು ಪ್ರಭಾವಿತ ವಿಸ್ತರಣೆಯಾಗಬೇಕಾಗಿರುವ (ಡೀಮ್ಡ್) ಕಲ್ಲುಪುಡಿ ಘಟಕಗಳು – 30, ಅವಧಿ ಚಾಲ್ತಿಯಲ್ಲಿದ್ದು ನವೀಕರಣ/ಪರಿಭಾವಿತ ವಿಸ್ತರಣೆಗಾಗಿ (ಡೀಮ್ಡ್ ಎಕ್ಸ್‍ಟೇನಶನ್) ಸ್ವೀಕೃತವಾದ ಅರ್ಜಿಗಳು-53, ಹೊಸ ನಿಯಮಗಳ-2020 ರ ಪ್ರಕಾರ 20 ವರ್ಷದ ಅವಧಿಗೆ ಮಂಜೂರು ಮಾಡಲಾದ ಕಲ್ಲುಪುಡಿ ಘಟಕಗಳು -4, ಹೊಸದಾಗಿ ಕಲ್ಲುಪುಡಿ ಘಟಕ ಸ್ಥಾಪನೆಗೆ ಸ್ವೀಕೃತಿಯಾದ ಅರ್ಜಿಗಳ ಸಂಖ್ಯೆ-4 ಆಗಿರುತ್ತವೆ ಎಂದು ಹಿರಿಯ ಭೂವಿಜ್ಞಾನಿ ನಾಗಭೂಷಣ್​ ತಿಳಿಸಿದರು.

ಕಲ್ಲು ಗಣಿಗಾರಿಕೆಗಳ ಮಾಹಿತಿ : ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕಲ್ಲುಗಣಿಗಾರಿಕೆಗಳು -89, ಅವಧಿ ಮುಗಿದಿದ್ದು ನವೀಕರಣ, ಪರಿಭಾವಿತ (ಡೀಮ್ಡ್ ಎಕ್ಸ್‍ಟೇನಶನ್) ವಿಸ್ತರಣೆಗಾಗಿ ಸ್ವೀಕೃತವಾದ ಅರ್ಜಿಗಳು- 7, ಹೊಸದಾಗಿ ಕಲ್ಲುಗಣಿ ಗುತ್ತಿಗೆ ಕೋರಿ ಸ್ವೀಕೃತವಾದ ಒಟ್ಟು ಅರ್ಜಿಗಳು-84 (ಇವುಗಳಿಗೆ ಗಣಿಗುತ್ತಿಗೆ ನೀಡುವ ಪ್ರಕ್ರಿಯೆಯು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತದೆ)

ಮೇಲಿನ 7 ರ ಪೈಕಿ ಎರಡು ಕಲ್ಲುಗಣಿ ಗುತ್ತಿಗೆ ಅವಧಿಯು ಪರಿಭಾವಿತ ವಿಸ್ತರಣೆ (ಡೀಮ್ಡ್ ಎಕ್ಸ್‍ಟೇನಶನ್) ಮಾಡಲಾಗಿರುತ್ತದೆ. ಒಂದು ಕಲ್ಲುಗಣಿ ಗುತ್ತಿಗೆ ಪ್ರಕರಣವು ಮಾನ್ಯ ಉಚ್ಚ ನ್ಯಾಯಾಲಯ ಬೆಂಗಳೂರಿನಲ್ಲಿ ವಿಚಾರಣೆ ಹಂತದಲ್ಲಿ ಇದೆ ಮತ್ತು ನಾಲ್ಕು ಕಲ್ಲುಗಣಿ ಗುತ್ತಿಗೆಗಳಿಗೆ ಪರಿಭಾವಿತ (ಡೀಮ್ಡ್ ಎಕ್ಸ್‍ಟೇನಶನ್) ವಿಸ್ತರಣೆ ಪ್ರಕ್ರಿಯೆಯ ಹಂತದಲ್ಲಿ ಇರುತ್ತದೆ ಎಂಬ ಮಾಹಿತಿಯನ್ನು ಸಭೆಯಲ್ಲಿ ತಿಳಿಸಲಾಯಿತು.

ನಾಮಫಲಕ ಕಡ್ಡಾಯ : ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಅನುಮತಿ ನೀಡಲಾದ ಕಲ್ಲುಪುಡಿ ಘಟಕ (ಕ್ರಷರ್) ಹಾಗೂ ಕಲ್ಲುಗಣಿಗಾರಿಕೆ ಪ್ರದೇಶದ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಎದ್ದು ಕಾಣುವ ಹಾಗೇ ಎಲ್ಲ ಮಾಹಿತಿಗಳನ್ನು ಆಯಾ ಮಾಲೀಕರು ಕಡ್ಡಾಯವಾಗಿ ಕ್ರಷರ್ ಹಾಗೂ ಗಣಿ ಗುತ್ತಿಗೆಯ ವಿವರಗಳನ್ನು ಘಟಕದ ಸೂಕ್ತ ಜಾಗದಲ್ಲಿ ಅಳವಡಿಸಬೇಕು. ಈ ನಿಟ್ಟಿನಲ್ಲಿ ಯಾವ ಯಾವ ಮಾಹಿತಿಯನ್ನು ಅವರು ಹಾಕಬೇಕು ಎನ್ನುವ ಬಗ್ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅವರಿಗೆ ನೋಟಿಸ್ ಮೂಲಕ ತಿಳಿಸಬೇಕು. ಅದೇ ರೀತಿ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಈ ಬಗ್ಗೆ ನಿಗಾವಹಿಸಿ ಕ್ರಮವಹಿಸತಕ್ಕದ್ದು ಎಂದು ಡಿಸಿ ಎಲ್ಲರ ಗಮನಕ್ಕೆ ತಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನೀಡಿದ ಅಂಕಿ-ಅಂಶಗಳ ಮಾಹಿತಿಯನ್ನು ಆಧರಿಸಿ, ಕಲ್ಲುಪುಡಿ ಘಟಕ ಹಾಗೂ ಕಲ್ಲು ಗಣಿಗಾರಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಿಲಾಗಿದೆ. ಈ ಬಗ್ಗೆ ಏನಾದರೂ ತಪ್ಪುಗಳು ಕಂಡುಬಂದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ವಹಿಸಲಾಗುವುದು ಎಂದು ಅವರು ಡಿಸಿ ಪಿ. ಸುನಿಲ್ ಕುಮಾರ್ ಖಡಕ್ ಆಗಿ ಹೇಳಿದ್ದಾರೆ.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಎಸ್ಪಿ ಅನುಪಮ ಅಗ್ರವಾಲ್, ಉಪ ವಿಭಾಗಾಧಿಕಾರಿ ರಾಹುಲ್ ಸಿಂಧೆ, ಸೇರಿದಂತೆ ಇತರ ಆಧಿಕಾರಿಗಳು ಹಾಜರಿದ್ದರು.

ಇನ್ಮೇಲೆ ಅಕ್ರಮ ಗಣಿಗಾರಿಕೆಗೆ ಅವಕಾಶ ಇಲ್ಲ, ಲೈಸೆನ್ಸ್ ಇದ್ರೆ ಮಾತ್ರ ಗಣಿಗಾರಿಕೆ ಮಾಡಬೇಕು: ಮುಖ್ಯಮಂತ್ರಿ ಯಡಿಯೂರಪ್ಪ

Published On - 5:57 pm, Sat, 6 February 21

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಹೇಗಿದೆ ಧರ್ಮಸ್ಥಳ ಸುಸಜ್ಜಿತ ಕ್ಯೂ ಕಾಂಪ್ಲೆಕ್ಸ್‌? ಇಲ್ಲಿದೆ ಡ್ರೋನ್ ದೃಶ್ಯ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ
ಫಿನಾಲೆ ಟಿಕೆಟ್ ಪಡೆಯಲು ತ್ರಿವಿಕ್ರಂ ಹಾಗೂ ಮಂಜು ಮಧ್ಯೆ ನಡೆಯಿತು ಯುದ್ಧ