ಕೊಪ್ಪಳ: ಜನರ ರಕ್ಷಣೆಗೆ ನಿಂತವನಿಂದಲೇ ಪತ್ನಿಗೆ ರಕ್ಷಣೆ ಸಿಗದಂತಾಗಿದೆ. ನ್ಯಾಯಕ್ಕಾಗಿ ಯಾರ ಬಳಿ ಓಡಿ ಹೋಗ್ತೀವೋ ಅವರೇ ಕತ್ತಲಿಗೆ ದೂಕಿದರೆ ಹೇಗಿರುತ್ತೇ ಹೇಳಿ. ಹೌದು ಕೊಪ್ಪಳದಲ್ಲಿ ಮುಖ್ಯ ಪೇದೆಯೇ ತನ್ನ ಪತ್ನಿಗೆ ವಿಲನ್ ಆಗಿದ್ದಾರೆ.
ಕೊಪ್ಪಳ ನಗರ ಠಾಣೆಯ ಹೆಡ್ ಕಾನ್ಸ್ ಟೇಬಲ್ ಬಸವರಾಜ್, ತಾಳಿ ಕಟ್ಟಿದ ಹೆಂಡತಿಗೆ ಕಿರುಕುಳ ನೀಡಿದ್ದಾರೆ. ವಿಚ್ಛೇದನ ಕೊಡುವಂತೆ ಪತ್ನಿ ಕವಿತಾಗೆ ಹಿಂಸಿಸುತ್ತಿದ್ದಾರಂತೆ. 2018 ರಲ್ಲಿ ಕವಿತಾ ಮತ್ತು ಹೆಡ್ ಕಾನ್ಸ್ ಟೇಬಲ್ ಬಸವರಾಜ್ ಅವರಿಗೆ ಮದುವೆಯಾಯಿತು. ಮದುವೆಯಾದ ಐದನೇ ದಿನಕ್ಕೆ ಕಿರುಕುಳ ಶುರುವಾಗಿತ್ತು ಎಂದು ಪತ್ನಿ ಕವಿತಾ ಆರೋಪಿಸಿದ್ದಾರೆ.
ನನ್ನ ಗಂಡನಿಗೆ ಬೇರೊಂದು ಹುಡಗಿ ಜೊತೆ ಅಕ್ರಮ ಸಂಬಂಧ ಇದೆ. ಹೀಗಾಗಿ ಅವರು ಕಳೆದ ಎಂಟು ದಿನಗಳ ಹಿಂದೆ ನನ್ನ ಮೇಲೆ ಹಲ್ಲೆ ಮಾಡಿದ್ದರು. ಇದರಿಂದ ನನಗೆ, ನನ್ನ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆಯಾಗುತ್ತಿದೆ ಎಂದು ಕವಿತಾ ಅಳಲು ತೋಡಿಕೊಂಡಿದ್ದಾರೆ.
ಹೆಣ್ಣು ಹುಟ್ಟಿದೆ, ಅದು ನಮಗೆ ಬೇಡ ಮಾರಿ ಬಿಡು ಅಂತಾನಂತೆ
ಕವಿತಾ ಈಗ ಮೂರು ತಿಂಗಳ ಗರ್ಭಿಣಿಯಾಗಿದ್ದಾರೆ. ಕವಿತಾ ಮೇಲೆ ಹಲ್ಲೆ ಮಾಡಿರೋ ಕಾರಣ ಹೊಟ್ಟೆಯಲ್ಲಿರೋ ಮಗುವಿಗೆ ತೊಂದರೆಯಾಗುತ್ತೆ ಎಂದು ವೈದ್ಯರು ತಿಳಿಸಿದ್ದಾರಂತೆ. ಈಗಾಗಲೇ ದಂಪತಿಗೆ ಒಂದು ಹೆಣ್ಣು ಮಗು ಇದೆ. ಹೆಣ್ಣು ಹುಟ್ಟಿದೆ. ಅದು ನಮಗೆ ಬೇಡ ಮಾರಿ ಬಿಡು ಎಂದು ಬಸವರಾಜ್ ಕಿರುಕುಳ ನೀಡಿದ್ದಾನಂತೆ. ಗಂಡನ ಕಿರುಕುಳ ತಾಳಲಾರದೆ ಕವಿತಾ ಕಣ್ಣೀರು ಹಾಕಿದ್ದಾರೆ.
ವರದಕ್ಷಿಣೆ ಕಿರುಕುಳ, ಕೊಲೆಗೆ ಯತ್ನ ಆರೋಪ: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತನ ಮೇಲೆ FIR