ಬೆಂಗಳೂರು: ಪಾದರಾಯನಪುರದಲ್ಲಾದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ರಾಮನಗರದ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಆರೋಪಿಗಳಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ವಿಷಯಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಊರಲ್ಲಿ ಜನ ನನಗೆ ಹೊಡೆಯೊಕ್ಕೆ ಬರ್ತಿದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಪಾದರಾಯನಪುರ ದುಷ್ಕರ್ಮಿಗಳನ್ನ ರಾಮನಗರ ಜೈಲಿಗೆ ಯಾಕೆ ಹಾಕಿದ್ರೋ ಗೊತ್ತಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ ಒಬ್ಬ ಡಾಕ್ಟರ್. ಅವರು ನಮ್ಮ ಜಿಲ್ಲೆಯನ್ನು ಕ್ಲೀನ್ ಮಾಡ್ತೀನಿ ಎಂದು ಹೇಳಿದ್ದಾರೆ ಸಚಿವ ಅಶ್ವತ್ಥ್ ನಾರಾಯಣ ಅವರಲ್ಲಿ ನಾನು ಮನವಿ ಮಾಡುತ್ತೇನೆ ದಯಮಾಡಿ ನಮ್ಮ ಜಿಲ್ಲೆಯನ್ನ ಆರಾಮಾಗಿ ಇರಲು ಬಿಡಿ ಎಂದಿದ್ದಾರೆ. ನಿನ್ನೆಯಿಂದ ನನಗೆ ನಿದ್ರೆ ಇಲ್ಲ. ಅಲ್ಲಿನ ಜನ ಹೋರಾಟ ಮಾಡಲು ಹಿಂದೆ ಮುಂದೆ ನೋಡಲ್ಲ.
ಅಲ್ಲಿನ ಜನರು ನನಗೆ ಹೊಡೆಯೋದೊಂದೇ ಬಾಕಿಯಿದೆ. ನನ್ನ ತಮ್ಮನೇ ನನಗೆ ಹೊಡೆದು ಬಿಡುತ್ತಾನೆ ಎಂದ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆರೋಪಿಗಳನ್ನು ಯಾರು ಜೈಲಿಗೆ ಕರೆದುಕೊಂಡು ಹೋದರು. ಎಲ್ಲದರ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಡಿಕೆಶಿ ಆಗ್ರಹಿಸಿದ್ದಾರೆ.
Published On - 1:21 pm, Fri, 24 April 20