‘ಕನಕಪುರವೇ ಕರ್ನಾಟಕ ಅಲ್ಲ; ಡಿಕೆ ಶಿವಕುಮಾರ್ ಪ್ರಾಣ ಬಿಡುವುದೇನು ಬೇಡ’

|

Updated on: Oct 29, 2019 | 5:48 PM

ಚಿಕ್ಕಬಳ್ಳಾಪುರ: ‘ಕನಕಪುರವೇ ಕರ್ನಾಟಕ ಅಲ್ಲ, ಡಿಕೆ ಶಿವಕುಮಾರ್ ಪ್ರಾಣ ಬಿಡುವುದೇನು ಬೇಡ’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಮೆಡಿಕಲ್ ಕಾಲೇಜು ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಅವರು ‘ನನ್ನ ಪ್ರಾಣ ಬೇಕಾದ್ರು ಕೋಡ್ತಿನಿ ಮೆಡಿಕಲ್ ಕಾಲೇಜು ಬಿಟ್ಟುಕೊಡಲ್ಲ’ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಈ ಕುರಿತು ಮಾತನಾಡಿದ ಡಾ.ಕೆ.ಸುಧಾಕರ್ ಡಿ.ಕೆ.ಶಿ ಪ್ರಾಣ ಬಿಡುವುದೇನು ಬೇಡ, ಮೆಡಿಕಲ್ ಕಾಲೇಜು ಮಾಡುವುದು ಪ್ರಾಣ ಉಳಿಸುವುದಕ್ಕೆ. ಡಿ.ಕೆ.ಶಿ. ಕನಕಪುರವನ್ನೇ ಕರ್ನಾಟಕ ಎಂದು ಕೊಂಡಿದ್ದಾರೆ. ಚಿಕ್ಕಬಳ್ಳಾಪುರದಲ್ಲೇ ಮೆಡಿಕಲ್ ಕಾಲೇಜು […]

ಕನಕಪುರವೇ ಕರ್ನಾಟಕ ಅಲ್ಲ; ಡಿಕೆ ಶಿವಕುಮಾರ್ ಪ್ರಾಣ ಬಿಡುವುದೇನು ಬೇಡ
Follow us on

ಚಿಕ್ಕಬಳ್ಳಾಪುರ: ‘ಕನಕಪುರವೇ ಕರ್ನಾಟಕ ಅಲ್ಲ, ಡಿಕೆ ಶಿವಕುಮಾರ್ ಪ್ರಾಣ ಬಿಡುವುದೇನು ಬೇಡ’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

ಮೆಡಿಕಲ್ ಕಾಲೇಜು ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಅವರು ‘ನನ್ನ ಪ್ರಾಣ ಬೇಕಾದ್ರು ಕೋಡ್ತಿನಿ ಮೆಡಿಕಲ್ ಕಾಲೇಜು ಬಿಟ್ಟುಕೊಡಲ್ಲ’ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ಈ ಕುರಿತು ಮಾತನಾಡಿದ ಡಾ.ಕೆ.ಸುಧಾಕರ್ ಡಿ.ಕೆ.ಶಿ ಪ್ರಾಣ ಬಿಡುವುದೇನು ಬೇಡ, ಮೆಡಿಕಲ್ ಕಾಲೇಜು ಮಾಡುವುದು ಪ್ರಾಣ ಉಳಿಸುವುದಕ್ಕೆ. ಡಿ.ಕೆ.ಶಿ. ಕನಕಪುರವನ್ನೇ ಕರ್ನಾಟಕ ಎಂದು ಕೊಂಡಿದ್ದಾರೆ. ಚಿಕ್ಕಬಳ್ಳಾಪುರದಲ್ಲೇ ಮೆಡಿಕಲ್ ಕಾಲೇಜು ಮಾಡುವುದು ಶತಸಿದ್ದ ಎಂದು ತಿರುಗೇಟು ನೀಡಿದ್ದಾರೆ.

ಬಾಗೇಪಲ್ಲಿಯಿಂದ ಬೆಂಗಳೂರಿಗೆ ಚಿಕಿತ್ಸೆಗೆ ಬರಲು ದೂರ
ಚಿಕ್ಕಬಳ್ಳಾಪುರಕ್ಕೆ ಅನ್ಯಾಯ ಮಾಡಿ, ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಾಡಿಕೊಂಡ್ರು. ಚಿಕ್ಕಬಳ್ಳಾಪುರದಲ್ಲೇ ಮೆಡಿಕಲ್ ಕಾಲೇಜು ಮಾಡುವುದು ಶತಸಿದ್ದ. ಮಾಡದಿದ್ರೆ ರಾಜಕೀಯ ನಿವೃತ್ತಿಯಾಗುತ್ತೇನೆ. ಬಾಗೇಪಲ್ಲಿಯಿಂದ ಬೆಂಗಳೂರಿಗೆ ಚಿಕಿತ್ಸೆಗೆ ಬರಲು ದೂರವಾಗುತ್ತೆ. ಹೀಗಾಗಿ ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಆಗಬೇಕು. ಇದರಿಂದ ಕ್ಷೇತ್ರದ ಜನರಿಗೆ ಅನುಕೂಲವಾಗುತ್ತದೆ. ನಾನು ಬಜೆಟ್‌ನಲ್ಲಿ ಇಲ್ಲದೆ ಇರುವುದನ್ನು ಕೇಳುತ್ತಿಲ್ಲ ಎಂದು ಸುಧಾಕರ್ ಪೇರೇಸಂದ್ರ ಗ್ರಾಮದಲ್ಲಿ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡಿ.ಕೆ.ಶಿ ನನ್ನ ಹಿರಿಯಣ್ಣನಲ್ಲ:
ಅನರ್ಹ ಶಾಸಕ ಡಾ.ಕೆ.ಸುಧಾಕರ್ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರ ಕುರಿತು ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿ.ಕೆ.ಶಿ ನನ್ನ ಹಿರಿಯಣ್ಣನಲ್ಲ, ನನ್ನ ಬಗ್ಗೆ ಏಕ ವಚನದಲ್ಲಿ ಮಾತನಾಡುವುದಕ್ಕೆ ಅವರು ಯಾರು? ಎಂದು ಡಿಕೆಶಿಗೆ ಪ್ರಶ್ನಿಸಿದ್ದಾರೆ.

ಡಿ.ಕೆ.ಶಿ ಮಾತು ಅವರ ಸಂಸ್ಕೃತಿಯನ್ನು ಸೂಚಿಸುತ್ತದೆ. ನೇಣು ಹಾಕುವುದು, ಹಾಕಿಸುವುದು, ಸಾಯಿಸುವುದು, ಹೊಡಿ ಬಡಿ ಕಡಿ ಅನ್ನುವುದು ಅವರ ಸಂಸ್ಕೃತಿ. ನನಗೆ ಉತ್ತಮ ಸಂಸ್ಕಾರ, ಸಾಮಾಜಿಕ ಕಾಳಜಿಯಿದೆ. ಡಿ.ಕೆ.ಶಿ ಹೇಳಿಕೆ ಖಂಡಿಸಿ ನಾಳೆ ಚಿಕ್ಕಬಳ್ಳಾಪುರದಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ. ನಗರದ ಪಿ.ಎಲ್.ಡಿ.ಬ್ಯಾಂಕ್ ನಿಂದ ಶಿಡ್ಲಘಟ್ಟ ವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ ಎಂದರು.

Published On - 5:03 pm, Tue, 29 October 19