ಇ.ಡಿ ಬುಲಾವ್, ಇಡೀ ಕುಟುಂಬ ದೆಹಲಿಗೆ ದೌಡು
ಬೆಂಗಳೂರು: ಡಿ.ಕೆ.ಶಿವಕುಮಾರ್ ಪತ್ನಿ, ತಾಯಿಗೆ ಇ.ಡಿ ಅಧಿಕಾರಿಗಳು ನೀಡಿರುವ ಸಮನ್ಸ್ ಸಂಬಂಧ ನಾಳೆ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ಇದೆ. ಹಾಗಾಗಿ ಇಂದು ಸಂಜೆ ಡಿಕೆಶಿ ಕುಟುಂಬ ದೆಹಲಿಗೆ ತೆರಳಲಿದ್ದಾರೆ. ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ಸಂಬಂಧ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಡಿಕೆಶಿ ಪತ್ನಿ ಉಷಾ ಮತ್ತು ತಾಯಿ ಗೌರಮ್ಮಗೆ ಇ.ಡಿ ಅಧಿಕಾರಿಗಳು ಬುಲಾವ್ ನೀಡಿದ್ದರು. ಆದ್ರೆ, ಅನಾರೋಗ್ಯದ ಕಾರಣ ಬೆಂಗಳೂರಿನಲ್ಲೇ ವಿಚಾರಣೆ ನಡೆಸಬೇಕೆಂದು ಡಿಕೆಶಿ ತಾಯಿ ದೆಹಲಿ ಹೈಕೋರ್ಟ್ಗೆ ಅರ್ಜಿ […]
ಬೆಂಗಳೂರು: ಡಿ.ಕೆ.ಶಿವಕುಮಾರ್ ಪತ್ನಿ, ತಾಯಿಗೆ ಇ.ಡಿ ಅಧಿಕಾರಿಗಳು ನೀಡಿರುವ ಸಮನ್ಸ್ ಸಂಬಂಧ ನಾಳೆ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ಇದೆ. ಹಾಗಾಗಿ ಇಂದು ಸಂಜೆ ಡಿಕೆಶಿ ಕುಟುಂಬ ದೆಹಲಿಗೆ ತೆರಳಲಿದ್ದಾರೆ.
ಡಿ.ಕೆ.ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ಸಂಬಂಧ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಡಿಕೆಶಿ ಪತ್ನಿ ಉಷಾ ಮತ್ತು ತಾಯಿ ಗೌರಮ್ಮಗೆ ಇ.ಡಿ ಅಧಿಕಾರಿಗಳು ಬುಲಾವ್ ನೀಡಿದ್ದರು. ಆದ್ರೆ, ಅನಾರೋಗ್ಯದ ಕಾರಣ ಬೆಂಗಳೂರಿನಲ್ಲೇ ವಿಚಾರಣೆ ನಡೆಸಬೇಕೆಂದು ಡಿಕೆಶಿ ತಾಯಿ ದೆಹಲಿ ಹೈಕೋರ್ಟ್ಗೆ ಅರ್ಜಿ ಹಾಕಿದ್ರು. ಹೀಗಾಗಿ ನಾಳೆ ದೆಹಲಿಯಲ್ಲಿ ಅರ್ಜಿ ವಿಚಾರಣೆ ಇರುವ ಕಾರಣ ಇಂದು ಸಂಜೆ ಡಿಕೆಶಿ ಕುಟುಂಬ ದೆಹಲಿಗೆ ತೆರಳಲಿದೆ.
ತಿಹಾರ್ ಜೈಲಿನಲ್ಲಿದ್ದ ಡಿ.ಕೆ.ಶಿವಕುಮಾರ್ 3 ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬೆಂಗಳೂರಿಗೆ ವಾಪಸಾಗಿದ್ದಾರೆ. ಡಿಕೆಶಿ ಸೋದರ ಡಿ.ಕೆ.ಸುರೇಶ್ ಮತ್ತು ಪುತ್ರಿ ಐಶ್ವರ್ಯಾ ಅವರನ್ನು ಈಗಾಗಲೇ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈಗ ಡಿಕೆಶಿ ಪತ್ನಿ ಮತ್ತು ತಾಯಿಯ ಸರದಿಯಾಗಿದೆ.
Published On - 1:10 pm, Tue, 29 October 19