ಸುದೀರ್ಘ ಸುತ್ತಾಟದಿಂದ ಡಿಕೆಶಿ ಸುಸ್ತು, ಇಂದು ದಿನವಿಡೀ ಮನೆಯಲ್ಲೇ..
ಬೆಂಗಳೂರು: ಅನಾರೋಗ್ಯದ ನೆಪವೊಡ್ಡಿ ತಿಹಾರ್ ಜೈಲಿನಿಂದ ಹೊರಬಿದ್ದಿದ್ದ ಡಿಕೆಶಿ ಸುದೀರ್ಘ ಸುತ್ತಾಟದಿಂದ ಸುಸ್ತಾಗಿದ್ದಾರೆ. ಮೂರು ದಿನ ನಿರಂತರ ಪ್ರವಾಸದಿಂದ ದಣಿದಿದ್ದ ಕನಕಪುರದ ಗ್ರಾನೈಟ್ ಧಣಿ ಡಿ.ಕೆ.ಶಿವಕುಮಾರ್ ಇಂದು ಯಾವುದೇ ಪ್ರವಾಸ ಹಾಕಿಕೊಳ್ಳದೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಮೊದಲಿಗೆ ಆಸ್ಪತ್ರೆಗೆ ತೆರಳಿ ಆರೋಗ್ಯವನ್ನು ಚೆಕಪ್ ಮಾಡಿಸಲಿದ್ದಾರೆ. ಬಳಿಕ ಸದಾಶಿವನಗರದ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ವಿಶ್ರಾಂತಿ ಪಡೆಯಲಿದ್ದಾರೆ. ಶನಿವಾರ ದೆಹಲಿಯಿಂದ ಆಗಮಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿತ್ತು. ಭಾನುವಾರ ತುಮಕೂರು ಹಾಗೂ ಸೋಮವಾರ ಕನಕಪುರದಲ್ಲಿ ಸುದೀರ್ಘ ಸುತ್ತಾಟ ನಡೆಸಿದ್ದಾರೆ. ಇದರಿಂದ ಆಯಾಸಗೊಂಡ ಡಿಕೆಶಿ […]
ಬೆಂಗಳೂರು: ಅನಾರೋಗ್ಯದ ನೆಪವೊಡ್ಡಿ ತಿಹಾರ್ ಜೈಲಿನಿಂದ ಹೊರಬಿದ್ದಿದ್ದ ಡಿಕೆಶಿ ಸುದೀರ್ಘ ಸುತ್ತಾಟದಿಂದ ಸುಸ್ತಾಗಿದ್ದಾರೆ. ಮೂರು ದಿನ ನಿರಂತರ ಪ್ರವಾಸದಿಂದ ದಣಿದಿದ್ದ ಕನಕಪುರದ ಗ್ರಾನೈಟ್ ಧಣಿ ಡಿ.ಕೆ.ಶಿವಕುಮಾರ್ ಇಂದು ಯಾವುದೇ ಪ್ರವಾಸ ಹಾಕಿಕೊಳ್ಳದೆ ವಿಶ್ರಾಂತಿ ಪಡೆಯುತ್ತಿದ್ದಾರೆ.
ಮೊದಲಿಗೆ ಆಸ್ಪತ್ರೆಗೆ ತೆರಳಿ ಆರೋಗ್ಯವನ್ನು ಚೆಕಪ್ ಮಾಡಿಸಲಿದ್ದಾರೆ. ಬಳಿಕ ಸದಾಶಿವನಗರದ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ವಿಶ್ರಾಂತಿ ಪಡೆಯಲಿದ್ದಾರೆ. ಶನಿವಾರ ದೆಹಲಿಯಿಂದ ಆಗಮಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿತ್ತು. ಭಾನುವಾರ ತುಮಕೂರು ಹಾಗೂ ಸೋಮವಾರ ಕನಕಪುರದಲ್ಲಿ ಸುದೀರ್ಘ ಸುತ್ತಾಟ ನಡೆಸಿದ್ದಾರೆ. ಇದರಿಂದ ಆಯಾಸಗೊಂಡ ಡಿಕೆಶಿ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಅಲ್ಲದೆ, ಇಂದು ಮನೆಯಲ್ಲೇ ಪಕ್ಷದ ನಾಯಕರ ಭೇಟಿಗೆ ಸಮಯ ಮೀಸಲಿಟ್ಟಿದ್ದಾರೆ.