‘ಭಿಕ್ಷೆ ಬೇಡಿದರೂ ಅವತ್ತು ಅವರು ನನ್ನನ್ನು ಬಿಡಲಿಲ್ಲ, ಇವತ್ತು ಋಣ ತೀರಿಸ್ತಿದ್ದೇನೆ’

ರಾಮನಗರ: ಡಿಕೆ ಶಿವಕುಮಾರ್ ಇಂದು ತಮ್ಮ ಸ್ವಗ್ರಾಮವಾದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿರುವ ತನ್ನ ಅಜ್ಜಿ ಹಾಗೂ ತಂದೆ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಅಭಿಮಾನಿಗಳು,ಕಾರ್ಯಕರ್ತರು ಡಿಕೆಶಿ ಅವರನ್ನ ಅದ್ಧೂರಿಯಾಗಿ ಬರಮಾಡಿಕೊಂಡರು. ಸ್ವಗ್ರಾಮಕ್ಕೆ ಬಂದು ಇಳಿದ ನಂತರ ಡಿಕೆಶಿ ದೊಡ್ಡ ಆಲಹಳ್ಳಿಯಲ್ಲಿರುವ ತಮ್ಮ ಅಜ್ಜಿ ಪಾರ್ವತಮ್ಮ ಹಾಗೂ ತಂದೆ ಕೆಂಪೇಗೌಡ ಸಮಾಧಿಗೆ ಪೂಜೆ ಸಲ್ಲಿಸಿದರು. ಪೂಜೆಯಲ್ಲಿ ಡಿಕೆಶಿ ಸಹೋದರ ಡಿಕೆ ಸುರೇಶ್, ತಾಯಿ ಗೌರಮ್ಮ, ಡಿಕೆಶಿ ಪತ್ನಿ ಉಷಾ ಹಾಗೂ ಪುತ್ರಿಯರಾದ ಐಶ್ವರ್ಯ, ಆಭರಣ ಸೇರಿ […]

'ಭಿಕ್ಷೆ ಬೇಡಿದರೂ ಅವತ್ತು ಅವರು ನನ್ನನ್ನು ಬಿಡಲಿಲ್ಲ, ಇವತ್ತು ಋಣ ತೀರಿಸ್ತಿದ್ದೇನೆ'
Follow us
ಸಾಧು ಶ್ರೀನಾಥ್​
|

Updated on:Oct 28, 2019 | 6:21 PM

ರಾಮನಗರ: ಡಿಕೆ ಶಿವಕುಮಾರ್ ಇಂದು ತಮ್ಮ ಸ್ವಗ್ರಾಮವಾದ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯಲ್ಲಿರುವ ತನ್ನ ಅಜ್ಜಿ ಹಾಗೂ ತಂದೆ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ಅಭಿಮಾನಿಗಳು,ಕಾರ್ಯಕರ್ತರು ಡಿಕೆಶಿ ಅವರನ್ನ ಅದ್ಧೂರಿಯಾಗಿ ಬರಮಾಡಿಕೊಂಡರು. ಸ್ವಗ್ರಾಮಕ್ಕೆ ಬಂದು ಇಳಿದ ನಂತರ ಡಿಕೆಶಿ ದೊಡ್ಡ ಆಲಹಳ್ಳಿಯಲ್ಲಿರುವ ತಮ್ಮ ಅಜ್ಜಿ ಪಾರ್ವತಮ್ಮ ಹಾಗೂ ತಂದೆ ಕೆಂಪೇಗೌಡ ಸಮಾಧಿಗೆ ಪೂಜೆ ಸಲ್ಲಿಸಿದರು. ಪೂಜೆಯಲ್ಲಿ ಡಿಕೆಶಿ ಸಹೋದರ ಡಿಕೆ ಸುರೇಶ್, ತಾಯಿ ಗೌರಮ್ಮ, ಡಿಕೆಶಿ ಪತ್ನಿ ಉಷಾ ಹಾಗೂ ಪುತ್ರಿಯರಾದ ಐಶ್ವರ್ಯ, ಆಭರಣ ಸೇರಿ ಕುಟುಂಬ ಸಮೇತ ಭಾಗಿಯಾಗಿ ಪೂಜೆ ನೆರವೇರಿಸಿದ್ದಾರೆ.

ಇಡಿ ದಿನಗಳನ್ನು ನೆನೆದ ಡಿಕೆಶಿ: ತಂದೆ ಕಾರ್ಯ ಮಾಡುವ ಭಾಗ್ಯ ನನಗೆ ಇಂದು ಸಿಕ್ಕಿದೆ, ಇವತ್ತು ನನಗೆ ಪವಿತ್ರವಾದ ದಿನ. ಇಡಿಯವರು ಅವತ್ತು ತಂದೆ ಕಾರ್ಯ ಮಾಡಲು ನನ್ನನ್ನು ಬಿಟ್ಟಿರಲಿಲ್ಲ. ನಾನು ಅಂದು ಇಡಿಯವರ ಬಳಿ ವಿನಂತಿ ಮಾಡಲಿಲ್ಲ, ಭಿಕ್ಷೆ ಬೇಡಿದೆ. ನಾನು ಭಿಕ್ಷೆ ಬೇಡಿದರೂ ಅವರು ನನಗೆ ಅನುಮತಿ ಕೊಟ್ಟಿರಲಿಲ್ಲ. ಇಂದು ನಾನು, ನನ್ನ ಕುಟುಂಬ ಸೇರಿ ತಂದೆ ಕಾರ್ಯ ಮಾಡಿದ್ದೇವೆ. ಇಡಿಯವರ ವ್ಯಾಪಾರ ನಡೆದ ಬಗ್ಗೆ ನಾನು ಯಾವುದೇ ವ್ಯಾಖ್ಯಾನ ಮಾಡಲ್ಲ. ನಾನು ಕೆಂಪೇಗೌಡರಿಗೆ ಹುಟ್ಟಿರಬಹುದು ಅಷ್ಟೆ, ಜನ ನನ್ನನ್ನು ಸಾಕಿದ್ದಾರೆ, ಬೆಳೆಸಿದ್ದಾರೆ, ನಾನು ಅವರ ಋಣ ತೀರಿಸುತ್ತೇನೆ. ಮುಂದೆ ರಾಜಕೀಯ ಇದೆ. ರಾಜಕಾರಣ ಮಾಡೋಣ ಎಂದು ಪೂಜೆಯ ನಂತರ ಡಿಕೆಶಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

Published On - 5:24 pm, Mon, 28 October 19

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!