ಟಿಪ್ಪು ಜಯಂತಿ, ಮುಸ್ಲಿಮರಲ್ಲಿ ಜಯಂತಿ ಅಚರಣೆ ಸಂಪ್ರದಾಯವಿಲ್ಲ -ಇಬ್ರಾಹಿಂ
ವಿಜಯಪುರ: ಟಿಪ್ಪು ಜಯಂತಿ ಆಚರಣೆಯ ವಿಚಾರವಾಗಿ ಬಹಳಷ್ಟು ಚರ್ಚೆ, ವಾದ-ಪ್ರತಿವಾದ, ವಿವಾಗಳು, ರಾಜಕೀಯ ತಿರುವುಗಳು ಘಟಿಸುತ್ತಲೇ ಇವೆ. ಈಗ ಟಿಪ್ಪು ಜಯಂತಿ ವಿಚಾರದಲ್ಲಿ ಸಿ.ಎಂ.ಇಬ್ರಾಹಿಂ ಯುಟರ್ನ್ ಹೊಡೆಯುವ ಮೂಲಕ ಮತ್ತೊಂದು ಆಯಾಮ ಕಲ್ಪಿಸಿದ್ದಾರೆ. ಮುಸ್ಲಿಮರಲ್ಲಿ ಜಯಂತಿ ಅಚರಣೆ ಇಲ್ಲ: ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ. ಮುಸ್ಲಿಮರಲ್ಲಿ ಜಯಂತಿ ಅಚರಣೆ ಸಂಪ್ರದಾಯವಿಲ್ಲ, ಮೂರ್ತಿ ಪೂಜೆಯೂ ಇಲ್ಲ. ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಟಿಪ್ಪು ಜನ್ಮದಿನ ಆಚರಣೆಯನ್ನು ಮುಸ್ಲಿಮರಿಗೆ ಬಿಟ್ಟು ಬಿಡಿ ಎಂದು ವಿಜಯಪುರದಲ್ಲಿ ಕಾಂಗ್ರೆಸ್ […]
ವಿಜಯಪುರ: ಟಿಪ್ಪು ಜಯಂತಿ ಆಚರಣೆಯ ವಿಚಾರವಾಗಿ ಬಹಳಷ್ಟು ಚರ್ಚೆ, ವಾದ-ಪ್ರತಿವಾದ, ವಿವಾಗಳು, ರಾಜಕೀಯ ತಿರುವುಗಳು ಘಟಿಸುತ್ತಲೇ ಇವೆ. ಈಗ ಟಿಪ್ಪು ಜಯಂತಿ ವಿಚಾರದಲ್ಲಿ ಸಿ.ಎಂ.ಇಬ್ರಾಹಿಂ ಯುಟರ್ನ್ ಹೊಡೆಯುವ ಮೂಲಕ ಮತ್ತೊಂದು ಆಯಾಮ ಕಲ್ಪಿಸಿದ್ದಾರೆ. ಮುಸ್ಲಿಮರಲ್ಲಿ ಜಯಂತಿ ಅಚರಣೆ ಇಲ್ಲ: ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ. ಮುಸ್ಲಿಮರಲ್ಲಿ ಜಯಂತಿ ಅಚರಣೆ ಸಂಪ್ರದಾಯವಿಲ್ಲ, ಮೂರ್ತಿ ಪೂಜೆಯೂ ಇಲ್ಲ. ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಟಿಪ್ಪು ಜನ್ಮದಿನ ಆಚರಣೆಯನ್ನು ಮುಸ್ಲಿಮರಿಗೆ ಬಿಟ್ಟು ಬಿಡಿ ಎಂದು ವಿಜಯಪುರದಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಸಿಎಂ ಇಬ್ರಾಹಿಂ ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಈಗ ಮೂರು ಗುಂಪುಗಳಾಗಿವೆ: ಟಿಪ್ಪು ಜಯಂತಿ ವಿಚಾರವಾಗಿ ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಸಂಬಂಧಿಸಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಈಗ 3 ಗುಂಪುಗಳಾಗಿವೆ, ಒಂದು ಮೂಲ ಗುಂಪು, ಮತ್ತೊಂದು ಸಿದ್ದರಾಮಯ್ಯ ಗುಂಪು ಮತ್ತು ಪರಮೇಶ್ವರ್ ಗುಂಪು. ಈಗ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂದಿದ್ದಾರೆ. ಈ ರೀತಿ ಗುಂಪುಗಾರಿಕೆ ಮಾಡಿಯೇ ಲೋಕಸಭೆಯಲ್ಲಿ ಒಂದೇ ಒಂದು ಸೀಟು ಗೆದ್ದಿದ್ದು ತಾನೇ? ಹೀಗಾಗಿ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಟಿಪ್ಪು ಜಯಂತಿ ವಿಚಾರವಾಗಿ ಹಾಗೆ ಹೇಳಿರಬಹುದು ಎಂದು ಬೆಂಗಳೂರಿನಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸಿಎಂ ಇಬ್ರಾಹಿಂಗೆ ಟಾಂಗ್ ನೀಡಿದ್ದಾರೆ.
Published On - 3:33 pm, Mon, 28 October 19