AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರನಾಡಿನಲ್ಲಿ ಚಿಕ್ಕಮಗಳೂರು ಮೂಲದ ಇಬ್ಬರು ನಕ್ಸಲರ ಎನ್​ಕೌಂಟರ್

ಚಿಕ್ಕಮಗಳೂರು: ದೇವರನಾಡು ಕೇರಳದಲ್ಲಿ ಗುಂಡಿನ ಮೊರೆತ ಕೇಳಿಬಂದಿದೆ. ಖಾಕಿ ಗುಂಡೇಟಿಗೆ ನಾಲ್ವರು ಕೆಂಪು ಉಗ್ರರು ಕಾಡಿನಲ್ಲೇ ರಕ್ತ ಚೆಲ್ಲಿದ್ದಾರೆ. ಅದ್ರಲ್ಲಿ ಇಬ್ಬರು ಕರ್ನಾಟಕದವರು. ಕೆಂಪು ಉಗ್ರರಿಗೂ ಕಾಫಿ ನಾಡು ಚಿಕ್ಕಮಗಳೂರಿಗೂ ಎಲ್ಲಿಲ್ಲದ ನಂಟು. ನಕ್ಸಲ್ ಚಟುವಟಿಕೆ ಎಲ್ಲಿ ಗರಿಗೆದರಿದ್ರೂ ಅದರ ಒಂದು ಕೊಂಡಿ ಮಲೆನಾಡಿಗೆ ಸುತ್ತಿಕೊಂಡಿರುತ್ತೆ. ದೂರದ ಕೇರಳದಲ್ಲಿ ನಾಲ್ವರು ನಕ್ಸಲರನ್ನ ಎನ್​ಕೌಂಟರ್ ಮಾಡಿ ಬಿಸಾಕಲಾಗಿದೆ. ಕೇರಳದಲ್ಲಿ ನಾಲ್ವರು ‘ಕೆಂಪು ಉಗ್ರರ’ ಎನ್​ಕೌಂಟರ್: ಕೇರಳದ ಪಾಲಕ್ಕಾಡ್​ನ ಅಗಲಿ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಿನ್ನೆ ಎನ್​ಕೌಂಟರ್ ನಡೆದಿದೆ. […]

ದೇವರನಾಡಿನಲ್ಲಿ ಚಿಕ್ಕಮಗಳೂರು ಮೂಲದ ಇಬ್ಬರು ನಕ್ಸಲರ ಎನ್​ಕೌಂಟರ್
ಸಾಧು ಶ್ರೀನಾಥ್​
|

Updated on:Oct 31, 2019 | 2:02 PM

Share

ಚಿಕ್ಕಮಗಳೂರು: ದೇವರನಾಡು ಕೇರಳದಲ್ಲಿ ಗುಂಡಿನ ಮೊರೆತ ಕೇಳಿಬಂದಿದೆ. ಖಾಕಿ ಗುಂಡೇಟಿಗೆ ನಾಲ್ವರು ಕೆಂಪು ಉಗ್ರರು ಕಾಡಿನಲ್ಲೇ ರಕ್ತ ಚೆಲ್ಲಿದ್ದಾರೆ. ಅದ್ರಲ್ಲಿ ಇಬ್ಬರು ಕರ್ನಾಟಕದವರು.

ಕೆಂಪು ಉಗ್ರರಿಗೂ ಕಾಫಿ ನಾಡು ಚಿಕ್ಕಮಗಳೂರಿಗೂ ಎಲ್ಲಿಲ್ಲದ ನಂಟು. ನಕ್ಸಲ್ ಚಟುವಟಿಕೆ ಎಲ್ಲಿ ಗರಿಗೆದರಿದ್ರೂ ಅದರ ಒಂದು ಕೊಂಡಿ ಮಲೆನಾಡಿಗೆ ಸುತ್ತಿಕೊಂಡಿರುತ್ತೆ. ದೂರದ ಕೇರಳದಲ್ಲಿ ನಾಲ್ವರು ನಕ್ಸಲರನ್ನ ಎನ್​ಕೌಂಟರ್ ಮಾಡಿ ಬಿಸಾಕಲಾಗಿದೆ.

ಕೇರಳದಲ್ಲಿ ನಾಲ್ವರು ‘ಕೆಂಪು ಉಗ್ರರ’ ಎನ್​ಕೌಂಟರ್: ಕೇರಳದ ಪಾಲಕ್ಕಾಡ್​ನ ಅಗಲಿ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಿನ್ನೆ ಎನ್​ಕೌಂಟರ್ ನಡೆದಿದೆ. ಕಾರ್ಯಾಚರಣೆ ವೇಳೆ ನಕ್ಸಲ್​ ನಿಗ್ರಹ ದಳ ಹಾಗೂ ಥಂಡರ್​ಬೋಲ್ಟ್​ ಟೀಂ ನಾಲ್ವರು ನಕ್ಸಲರನ್ನ ಹೊಡೆದುರುಳಿಸಲಾಗಿದೆ. ಈ ವೇಳೆ ಕರ್ನಾಟಕದ. ಅದ್ರಲ್ಲೂ ಚಿಕ್ಕಮಗಳೂರು ಮೂಲದ ನಕ್ಸಲರಾದ ಸುರೇಶ್ ಹಾಗೂ ಶ್ರೀಮತಿ ಎಂಬುವವರು ಕೂಡ ಫಿನಿಶ್ ಆಗಿದ್ದಾರೆ.

ಎನ್​ಕೌಂಟರ್​ನಲ್ಲಿ ಹತನಾದ ಸುರೇಶ್ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನು. ಅಸಮಾನತೆ ವಿರುದ್ಧ ದನಿ ಎತ್ತಿದ್ದ ಸುರೇಶ್​ 20 ವರ್ಷಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕೆ ಹೋಗ್ತೀನಿ ಅಂತ ಮನೆ ಬಿಟ್ಟಿದ್ದ. ಅದಾದ ನಂತರ ಮತ್ತೆ ಮನೆ ಕಡೆ ಮುಖ ಮಾಡಲೇ ಇಲ್ಲ. ಈತ 2004ರಿಂದ ನಕ್ಸಲ್ ಚಟುವಟಿಕೆಯಲ್ಲಿ ಭಾಗಿಯಾಗಿದ್ದ. ಸುರೇಶ್ ವಿರುದ್ಧ ವಿವಿಧ ಠಾಣೆಗಳಲ್ಲಿ 21ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಓದಿನಲ್ಲಿ ಮುಂದಿದ್ದ ಸುರೇಶ್ ಬಿ.ಎ.ವರೆಗೆ ವ್ಯಾಸಂಗ ಮಾಡಿದ್ದಾನೆ.

ಇನ್ನು ಶ್ರೀಮತಿ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಬೆಳಗೋಡು ಗ್ರಾಮದವಳು. ಎಸ್​ಎಸ್​ಎಲ್​ಸಿ ಫೇಲಾದ ಬಳಿಕ ಶೋಷಿತರ ಪರ ಈಕೆ ದನಿ ಎತ್ತಿದ್ದಳು. 2008ರಿಂದ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರೋ ಶ್ರೀಮತಿ ವಿರುದ್ಧ 9ಕ್ಕೂ ಹೆಚ್ಚು ಪ್ರಕರಣಗಳಿವೆ.

ಎನ್​ಕೌಂಟರ್​ನಲ್ಲಿ ಸುರೇಶ್​ ಹತನಾದ ವಿಚಾರ ಗೊತ್ತಾಗುತ್ತಿದ್ದಂತೇ ಅವನ ಮನೆಯವರಿಗೆ ಶಾಕ್ ಆಗಿದೆ. ಮನೆ ಬಿಟ್ಟು ಹೋದ ಸುರೇಶ್ ಸತ್ತು ಹೋಗಿದ್ದಾನೆ ಅಂತ ಮನೆಯವರು ಅಂದುಕೊಂಡಿದ್ರು. ಆದ್ರೀಗ ಎನ್​ಕೌಂಟರ್ ವಿಚಾರ ತಿಳಿದು ನೋವಿನ ಕಡಲಲ್ಲಿ ಮುಳುಗಿದ್ದಾರೆ.

ಕಾಫಿ ನಾಡು ಚಿಕ್ಕಮಗಳೂರಲ್ಲಿ ಚುರುಕುಗೊಂಡ ಕೂಂಬಿಂಗ್: ಮಲೆನಾಡಿನ ಇಬ್ಬರು ನಕ್ಸಲರು ಕೇರಳದಲ್ಲಿ ಎನ್​ಕೌಂಟರ್ ಆಗುತ್ತಿದ್ದಂತೇ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಂಡಿದೆ. ಕೊಪ್ಪ, ಶೃಂಗೇರಿ ತಾಲೂಕಿನ ಕೆಲ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ದಳ ಹಾಗೂ ಪೊಲೀಸರು ಕೆಂಪು ಉಗ್ರರಿಗಾಗಿ ಶೋಧ ನಡೆಸ್ತಿದ್ದಾರೆ.

Published On - 9:14 pm, Tue, 29 October 19