Anushree call details: ನನಗೆ ಆ ಬಗ್ಗೆ ಗೊತ್ತಿಲ್ಲಪ್ಪಾ! ನಶೆ, ಪಶೆ ಎಲ್ಲಾ ಗೊತ್ತಿಲ್ಲ-ಡಿಕೆಶಿ

ಬೆಳಗಾವಿ: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಆ್ಯಂಕರ್ ಅನುಶ್ರೀ ಸಿಸಿಬಿ ವಿಚಾರಣೆಗೂ ಮುನ್ನ ಪ್ರಭಾವಿಗಳಿಗೆ ಕರೆ ಮಾಡಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಕೇಳಿದ್ರೆ ಅವರು ಏನಂತಿದ್ದಾರೆ ಗೊತ್ತಾ? ನನಗೆ ಆ ಬಗ್ಗೆ ಗೊತ್ತಿಲ್ಲಪ್ಪಾ ನಶೆ, ಪಶೆ ಎಲ್ಲಾ ಗೊತ್ತಿಲ್ಲ. ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ? ಟಿವಿಯಲ್ಲಿ ಬರೀ ಎಂಟರ್ಟೈನಮೆಂಟ್ ಇಂಡಸ್ಟ್ರಿಯವರಲ್ಲಿರೋರನ್ನ ನೋಡಿ ಆಶ್ಚರ್ಯ ಆಗ್ತಿದೆ ಎಂದು ಡಿಕೆಶಿ ಮಾರ್ಮಿಕವಾಗಿ […]

Anushree call details: ನನಗೆ ಆ ಬಗ್ಗೆ ಗೊತ್ತಿಲ್ಲಪ್ಪಾ! ನಶೆ, ಪಶೆ ಎಲ್ಲಾ ಗೊತ್ತಿಲ್ಲ-ಡಿಕೆಶಿ

Updated on: Oct 03, 2020 | 10:40 AM

ಬೆಳಗಾವಿ: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಆ್ಯಂಕರ್ ಅನುಶ್ರೀ ಸಿಸಿಬಿ ವಿಚಾರಣೆಗೂ ಮುನ್ನ ಪ್ರಭಾವಿಗಳಿಗೆ ಕರೆ ಮಾಡಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಕೇಳಿದ್ರೆ ಅವರು ಏನಂತಿದ್ದಾರೆ ಗೊತ್ತಾ?

ನನಗೆ ಆ ಬಗ್ಗೆ ಗೊತ್ತಿಲ್ಲಪ್ಪಾ ನಶೆ, ಪಶೆ ಎಲ್ಲಾ ಗೊತ್ತಿಲ್ಲ. ನಟಿಯರನ್ನು ಬಿಟ್ಟು ಬೇರೆ ಯಾರೂ ಡ್ರಗ್ಸ್ ತಗೊಂಡಿಲ್ವಾ? ಟಿವಿಯಲ್ಲಿ ಬರೀ ಎಂಟರ್ಟೈನಮೆಂಟ್ ಇಂಡಸ್ಟ್ರಿಯವರಲ್ಲಿರೋರನ್ನ ನೋಡಿ ಆಶ್ಚರ್ಯ ಆಗ್ತಿದೆ ಎಂದು ಡಿಕೆಶಿ ಮಾರ್ಮಿಕವಾಗಿ ಹೇಳಿದರು.

ಇದಕ್ಕೆಲ್ಲ ನಾನೇಕೆ ರಿಯ್ಯಾಕ್ಟ್ ಮಾಡಬೇಕು?: ಶಿವಕುಮಾರ್ 
ಇನ್ನು, ಸಚಿವ ಆನಂದ ಸಿಂಗ್ ಹೇಳಿಕೆ ಪ್ರಸ್ತಾಪಿಸಿದ ಡಿಕೆಶಿ ಯಾವಾಗ ಬೇಕಾದರೂ ಸರ್ಕಾರ ಬೀಳಬಹುದು ಎಂದು ಹೇಳ್ತಾರೆ. ಅವರೇ ಹೇಳ್ತಾರೋ, ಬೆಳಗಾವಿಯ ಕೆಲವರು ಹೇಳ್ತಾರೋ.. ಅದಕ್ಕೆಲ್ಲ ನಾನೇಕೆ ರಿಯ್ಯಾಕ್ಟ್ ಮಾಡಬೇಕು? ಎಂದು ಡಿಕೆಶಿ ನಗೆಯಾಡಿದರು.

ಭದ್ರವಾಗಿ ಇರ್ತಿವಿ, ಬಿಗಿಯಾಗಿ ಇರ್ತಿವಿ, ಆರು ತಿಂಗಳು ಇರ್ತಿವಿ. 150 ಜನ ಇದ್ದೀವಿ. ಇನ್ನೂ 10 ವರ್ಷ ಇರ್ತೀವಿ ಅಂತಾ ಬಿಎಸ್‌ವೈ ಹೇಳ್ತಾರೆ. ಅದಕ್ಕೆಲ್ಲ ನಾನೇಕೆ ರಿಯ್ಯಾಕ್ಟ್ ಮಾಡಲಿ ಎಂದೂ ಡಿ.ಕೆ. ಶಿವಕುಮಾರ್ ಬೆಳಗಾವಿಯಲ್ಲಿ ಪ್ರತಿಕ್ರಿಯೆಸಿದ್ರು. ಇನ್ನು ಬೆಳಗಾವಿ ಲೋಕಸಭಾ ಅಭ್ಯರ್ಥಿ ವಿಚಾರ ಬಗ್ಗೆ ನನಗೇನೂ ಗೊತ್ತಿಲ್ಲ. ಫಸ್ಟ್ ಪಾರ್ಟಿ ಕಟ್ಟುವ ಕೆಲಸ, ಪಕ್ಷ ಸಂಘಟನೆ ಮಾಡಲು ಒತ್ತು ಕೊಡಬೇಕು. ನಂತರ ವ್ಯಕ್ತಿಯ ಮೇಲೆ ಎಂದು ಡಿಕೆಶಿ ಸೂಚ್ಯವಾಗಿ ಹೇಳಿದರು.