ಮಗಳ ಮದ್ವೆಗೆ ತಂದ ಚಿನ್ನ ಜಪ್ತಿ ಮಾಡಿದ್ದು ಬಹಳ ಬೇಸರವಾಯಿತು: ಸ್ವಾಮೀಜಿ ಮುಂದೆ ಡಿಕೆಶಿ ದುಃಖ

|

Updated on: Oct 06, 2020 | 1:54 PM

ಬೆಂಗಳೂರು: KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಮನೆ ಮೇಲೆ ನಿನ್ನೆ ನಡೆದ CBI ಅಧಿಕಾರಿಗಳ ದಾಳಿ ಬಳಿಕ ಇಂದು ನಂಜಾವಧೂತ ಶ್ರೀಗಳು ಶಿವಕುಮಾರ್​ರ ಸದಾಶಿವನಗರದ ನಿವಾಸಕ್ಕೆ ಭೇಟಿಕೊಟ್ಟರು. ಸ್ವಾಮೀಜಿಯವರನ್ನು ಬರಮಾಡಿಕೊಂಡ ಡಿ.ಕೆ ಶಿವಕುಮಾರ್​ ಶ್ರೀಗಳ ಜೊತೆ ಬಹಳ ಹೊತ್ತು ಮಾತುಕತೆ ನಡೆಸಿದರು. ಇದೇ ವೇಳೆ ಡಿಕೆಶಿಗೆ ನಂಜಾವಧೂತ ಸ್ವಾಮೀಜಿ ಧೈರ್ಯ ತುಂಬಿದರು ಎಂದು ತಿಳಿದುಬಂದಿದೆ. ಶಿವಕುಮಾರ್ ಜೊತೆ ಮಾತನಾಡಿದ ಶ್ರೀಗಳ ಕಳೆದ ವರ್ಷವೂ ನಿಮ್ಮ ವಿರುದ್ಧ ದಾಳಿ ಆಗಿದೆ. ED, IT ನೋಡಿದ್ದೀರಿ. ಒಳ್ಳೆಯದು ಆಗಬೇಕು ಅಂದ್ರೆ […]

ಮಗಳ ಮದ್ವೆಗೆ ತಂದ ಚಿನ್ನ ಜಪ್ತಿ ಮಾಡಿದ್ದು ಬಹಳ ಬೇಸರವಾಯಿತು: ಸ್ವಾಮೀಜಿ ಮುಂದೆ ಡಿಕೆಶಿ ದುಃಖ
Follow us on

ಬೆಂಗಳೂರು: KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಮನೆ ಮೇಲೆ ನಿನ್ನೆ ನಡೆದ CBI ಅಧಿಕಾರಿಗಳ ದಾಳಿ ಬಳಿಕ ಇಂದು ನಂಜಾವಧೂತ ಶ್ರೀಗಳು ಶಿವಕುಮಾರ್​ರ ಸದಾಶಿವನಗರದ ನಿವಾಸಕ್ಕೆ ಭೇಟಿಕೊಟ್ಟರು.

ಸ್ವಾಮೀಜಿಯವರನ್ನು ಬರಮಾಡಿಕೊಂಡ ಡಿ.ಕೆ ಶಿವಕುಮಾರ್​ ಶ್ರೀಗಳ ಜೊತೆ ಬಹಳ ಹೊತ್ತು ಮಾತುಕತೆ ನಡೆಸಿದರು. ಇದೇ ವೇಳೆ ಡಿಕೆಶಿಗೆ ನಂಜಾವಧೂತ ಸ್ವಾಮೀಜಿ ಧೈರ್ಯ ತುಂಬಿದರು ಎಂದು ತಿಳಿದುಬಂದಿದೆ. ಶಿವಕುಮಾರ್ ಜೊತೆ ಮಾತನಾಡಿದ ಶ್ರೀಗಳ ಕಳೆದ ವರ್ಷವೂ ನಿಮ್ಮ ವಿರುದ್ಧ ದಾಳಿ ಆಗಿದೆ. ED, IT ನೋಡಿದ್ದೀರಿ. ಒಳ್ಳೆಯದು ಆಗಬೇಕು ಅಂದ್ರೆ ಕಷ್ಟ ದಾಟಿಕೊಂಡು ಹೋಗಬೇಕು. ಸ್ವಲ್ಪ ದಿನ ಕಷ್ಟ ಸಹಜ ಅಂತಾ ಸ್ವಾಮೀಜಿ ಡಿಕೆಶಿಗೆ ಧೈರ್ಯ ತುಂಬಿದರಂತೆ.

ಆಗ, ಶಿವಕುಮಾರ್​ ನಾನು ಕೆಪಿಸಿಸಿ ಅಧ್ಯಕ್ಷನಾದ ಬಳಿಕ ಆಕ್ಟೀವ್ ಆಗಿದ್ದೇ ತಪ್ಪಾಯಿತು. ಬಿಜೆಪಿ ಬೈ ಎಲೆಕ್ಷನ್ ಅಂತಾ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ. ಎಲ್ಲವನ್ನೂ ನೋಡಿದ್ದೀನಿ. ಇದು ಅದರ ಒಂದು ಭಾಗ ಎಂದು ಶಿವಕುಮಾರ್​ ಹೇಳದರಂತೆ.

ನನ್ನ ಮೇಲೆ ರೇಡ್ ಬೇಸರವಿಲ್ಲ. ಎಲ್ಲದಕ್ಕೂ ನನ್ನ ಬಳಿ ದಾಖಲೆ ಇದೆ. ಆದರೆ, ಮಗಳ ಮದುವೆಗೆ ತಂದ ಚಿನ್ನವನ್ನು ಜಪ್ತಿ ಮಾಡಿದ್ದು ಬಹಳ ಬೇಸರವಾಯಿತು ಎಂದು ಸ್ವಾಮೀಜಿ ಮುಂದೆ ಡಿ.ಕೆ ಶಿವಕುಮಾರ್​ ಅಲವತ್ತುಕೊಂಡರಂತೆ.

‘CBI ಅಧಿಕಾರಿಗಳು ಕಿರುಕುಳ ಕೊಟ್ಟರು’
ಸಿಬಿಐ ಅಧಿಕಾರಿಗಳು ನನಗೆ ಕಿರುಕುಳ ಕೊಟ್ಟರು. ಸಿಬಿಐ ಅಧಿಕಾರಿಗಳು ನನ್ನ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾರೆಂದು ಡಿಕೆ ಶಿವಕುಮಾರ್​ ನಂಜಾವಧೂತ ಶ್ರೀಗಳ ಜೊತೆ ಚರ್ಚೆ ವೇಳೆ ಮಾಹಿತಿ ನೀಡಿದರು.
CBI ರೇಡ್​ ಬಳಿಕ.. ಸಂಸದ DK ಸುರೇಶ್​ಗೆ ಕೊರೊನಾ ಪಾಸಿಟಿವ್

Published On - 10:49 am, Tue, 6 October 20