AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತೀಶ್ ಜಾರಕಿಹೊಳಿ ಜೊತೆ ಯಾವುದೇ ವೈಮನಸ್ಸಿಲ್ಲ ಅಂತ ಸಾರ್ವಜನಿಕವಾಗಿ ತೋರುವ ಪ್ರಯತ್ನ ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆಯೇ?

ಸತೀಶ್ ಜಾರಕಿಹೊಳಿ ಜೊತೆ ಯಾವುದೇ ವೈಮನಸ್ಸಿಲ್ಲ ಅಂತ ಸಾರ್ವಜನಿಕವಾಗಿ ತೋರುವ ಪ್ರಯತ್ನ ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆಯೇ?

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 09, 2023 | 8:01 PM

ಮತ್ತೊಬ್ಬ ಸಚಿವ ಕೆಎನ್ ರಾಜಣ್ಣ ಹೆಗಲ ಮೇಲೆ ಕೈ ಹಾಕ್ಕೊಂಡು ಬರುವ ಶಿವಕುಮಾರ್ ಎಡಗೈಯನ್ನು ಸತೀಶ್ ಮೇಲೆ ಹಾಕಿ ಆತ್ಮೀಯವಾಗಿ ಹರಟುತ್ತಾ ಮುಂದೆ ಸಾಗುತ್ತಾರೆ. ಸತೀಶ್ ಜೊತೆ ಡಿಕೆ ಸಹೋದರರು ಬಹಳ ಸಲುಗೆಯಿಂದ ವರ್ತಿಸುವುದರ ಹಿಂದೆ ಬೇರೆ ಕಾರಣವೇನಾದರೂ ಇದೆಯೇ? ಇರಬಹುದು ಮಾರಾಯ್ರೇ. ಇಂದು ಬೆಳಗ್ಗೆ ಡಿಕೆ ಸುರೇಶ್ ಸತೀಶ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು.

ಬೆಂಗಳೂರು: ತನ್ನ ಮತ್ತು ಸತೀಶ್ ಜಾರಕಿಹೊಳಿ (Satish Jarkiholi) ನಡುವೆ ಯಾವುದೇ ವೈಮನಸ್ಸಿಲ್ಲ ಅಂತ ಮಾಧ್ಯಮಗಳ ಮೂಲಕ ಜನರಿಗೆ ಅದರಲ್ಲೂ ವಿಶೇಷವಾಗಿ ವಿರೋಧ ಪಕ್ಷಗಳ ನಾಯಕರಿಗೆ ತೋರಿಸುವ ಪ್ರಯತ್ನವನ್ನು ಡಿಕೆ ಶಿವಕುಮಾರ್ (DK Shivakumar) ಮಾಡುತ್ತಿದ್ದಾರೆಯೇ? ಇವತ್ತು ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ವಿಧಾನ ಸೌಧದೊಳಗೆ ಹೋಗುವ ಮೊದಲು ಅವರು ವರ್ತಿಸಿದ ರೀತಿ ಹಾಗಿತ್ತು ಮಾರಾಯ್ರೇ! ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಗೆ ಸಚಿವರು ತಂಡಗಳಲ್ಲಿ ಆಗಮಿಸಿದರು. ಮಿನಿಸ್ಟ್ರುಗಳಿದ್ದಲ್ಲಿ ಅವರ ಅಂಗರಕ್ಷಕರು, ಹಿಂಬಾಲಕರು ಚೇಲಾಗಳು ಇರಲೇಬೇಕು, ಇಲ್ನೋಡಿ ಮೊದಲಿಗೆ ಈ ಗುಂಪಿನಲ್ಲಿ ಇಬ್ಬರು ಸಚಿವರು ಮಾತ್ರ ಕಾಣುತ್ತಾರೆ, ಸತೀಶ್ ಜಾರಕಿಹೊಳಿ ಮತ್ತು ರಾಮಲಿಂಗಾರೆಡ್ಡಿ (Ramalinga Reddy). ಆದರೆ ಬೇರೆ ಜನ ಅವರನ್ನು ಸುತ್ತುವರೆದಿದ್ದಾರೆ. ಸತೀಶ್ ಎತ್ತರದ ಆಳು ಮಾರಾಯ್ರೇ, ಗುಂಪಿನಲ್ಲಿ ಎದ್ದು ಕಾಣುತ್ತಾರೆ. ನಡೆದ ಬರುತ್ತಿದ್ದ ಅವರು ಪ್ರಾಯಶಃ ಹಿಂದಿನಿಂದ ಶಿವಕುಮಾರ್ ಕೂಗಿದ್ದಕ್ಕೆ ನಿಂತು ತಿರುಗಿ ನೋಡುತ್ತಾರೆ. ಮತ್ತೊಬ್ಬ ಸಚಿವ ಕೆಎನ್ ರಾಜಣ್ಣ ಹೆಗಲ ಮೇಲೆ ಕೈ ಹಾಕ್ಕೊಂಡು ಬರುವ ಶಿವಕುಮಾರ್ ಎಡಗೈಯನ್ನು ಸತೀಶ್ ಮೇಲೆ ಹಾಕಿ ಆತ್ಮೀಯವಾಗಿ ಹರಟುತ್ತಾ ಮುಂದೆ ಸಾಗುತ್ತಾರೆ. ಸತೀಶ್ ಜೊತೆ ಡಿಕೆ ಸಹೋದರರು ಬಹಳ ಸಲುಗೆಯಿಂದ ವರ್ತಿಸುವುದರ ಹಿಂದೆ ಬೇರೆ ಕಾರಣವೇನಾದರೂ ಇದೆಯೇ? ಇರಬಹುದು ಮಾರಾಯ್ರೇ. ಇಂದು ಬೆಳಗ್ಗೆ ಡಿಕೆ ಸುರೇಶ್ ಸತೀಶ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ