ಏಳೂವರೆ ತಿಂಗಳ ಮಗುವಿನ ಎರಡೂ ಕಿಡ್ನಿಗಳಲ್ಲಿದ್ದ ಕಲ್ಲುಗಳನ್ನು ತೆಗೆದ ವೈದ್ಯರು; ಜಗತ್ತಿನಲ್ಲೇ ಅಪರೂಪದ ಶಸ್ತ್ರಚಿಕಿತ್ಸೆ ಇದು

ಮಕ್ಕಳಲ್ಲಿ ಕಂಡು ಬರುವ ಮೂತ್ರಪಿಂಡ ಕಲ್ಲು ಸಮಸ್ಯೆ ನಿವಾರಿಸಲು ಎಂಡೋಸ್ಕೋಪಿ ಜತೆಗೆ ಹೊಲ್ಮಿಯಮ್ ತಂತ್ರಜ್ಞಾವನ್ನು ಬಳಕೆ ಮಾಡಲಾಗುತ್ತದೆ. ಮಕ್ಕಳ ಮೂತ್ರ ಸಮಸ್ಯೆ ನಿವಾರಣಾ ತಜ್ಞ ಡಾ. ಪ್ರಸನ್ನ ವೆಂಕಟೇಶ್ ನೇತೃತ್ವದ ಪರಿಣಿತರ ತಂಡ, ಆಧುನಿಕ ವೈದ್ಯಕೀಯ ಪರಿಕರಗಳ ಜತೆಗೆ ವೈದ್ಯಕೀಯ ಕೌಶಲವನ್ನು ಬಳಕೆ ಮಾಡಿಕೊಂಡಿದೆ.

ಏಳೂವರೆ ತಿಂಗಳ ಮಗುವಿನ ಎರಡೂ ಕಿಡ್ನಿಗಳಲ್ಲಿದ್ದ ಕಲ್ಲುಗಳನ್ನು ತೆಗೆದ ವೈದ್ಯರು; ಜಗತ್ತಿನಲ್ಲೇ ಅಪರೂಪದ ಶಸ್ತ್ರಚಿಕಿತ್ಸೆ ಇದು
ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 31, 2020 | 7:44 PM

ನೆಲಮಂಗಲ: ಚಿಕ್ಕ ಮಗುವಿಗೆ ಮೂತ್ರಪಿಂಡದ ಶಸ್ತ್ರ ಚಿಕಿತ್ಸೆಯನ್ನು ನಡೆಸುವ ಮೂಲಕ ಇಲ್ಲಿನ ಎನ್​ಯು ಆಸ್ಪತ್ರೆ ತಜ್ಞ ವೈದ್ಯರು, ವೈದ್ಯಕೀಯ ಲೋಕದಲ್ಲಿ ಅಚ್ಚರಿ ಮೂಡಿಸಿದ್ದಾರೆ. ಇಂಥ ಶಸ್ತ್ರಚಿಕಿತ್ಸೆ ವಿಶ್ವದಲ್ಲಿಯೇ ಅಪರೂಪ ಎನ್ನಲಾಗುತ್ತಿದೆ.

ಕೇಲವ 7 ತಿಂಗಳು 15 ದಿನಗಳ ಹೆಣ್ಣು ಮಗುವಿನ ಎರಡೂ ಮೂತ್ರಪಿಂಡಗಳಲ್ಲಿ ಕಲ್ಲು ಉಂಟಾಗಿತ್ತು. ಇದನ್ನೀಗ ರಾಜಾಜಿನಗರದ ಎನ್​ಯು ಆಸ್ಪತ್ರೆಯ ಪರಿಣಿತ ವೈದ್ಯರ ತಂಡ ಮಿನಿ ಪಿಇಆರ್​ಸಿ ಮತ್ತು ಲೇಸರ್​ ಚಿಕಿತ್ಸೆ ಮೂಲಕ ಕಲ್ಲುಗಳನ್ನು ತೆಗೆದಿದ್ದಾರೆ. ಮಗು ಆರೋಗ್ಯದಿಂದ ಇದ್ದು, ಚೇತರಿಸಿಕೊಳ್ಳುತ್ತಿದೆ.

ಮಕ್ಕಳಲ್ಲಿ ಮೂತ್ರಪಿಂಡದ ಕಲ್ಲಿನ ಸಮಸ್ಯೆ ಕಾಣಿಸುವುದೇ ಅಪರೂಪ. ಇಷ್ಟು ಪುಟ್ಟ ಮಕ್ಕಳು ಘನ ಪದಾರ್ಥಗಳನ್ನು ಸೇವಿಸದ ಕಾರಣ ಕಲ್ಲು ಉಂಟಾಗುವುದಿಲ್ಲ. ಆದರೆ ಈ ಹೆಣ್ಣುಮಗುವಿನಲ್ಲಿ ಹುಟ್ಟಿದ ಏಳು ತಿಂಗಳಿಗೆ ಮೂತ್ರಪಿಂಡದಲ್ಲಿ ಕಲ್ಲು ಕಾಣಿಸಿಕೊಂಡಿದ್ದೇ ಒಂದು ಅಚ್ಚರಿಯಾಗಿದೆ ಎನ್ನುತ್ತಾರೆ ವೈದ್ಯರು.

ಜ್ವರದಿಂದ ಬಳಲುತ್ತಿತ್ತು ಪುಟ್ಟ ಮಗು ಮೂರು ವಾರಗಳ ಹಿಂದೆ ಜ್ವರದಿಂದ ಬಳಲುತ್ತಿತ್ತು. ಸಿಕ್ಕಾಪಟ್ಟೆ ಅಳುತ್ತಿತ್ತು. ತಜ್ಞ ವೈದ್ಯರು ತೀವ್ರ ತಪಾಸಣೆಗೆ ಒಳಪಡಿಸಿದಾಗ ಎರಡೂ ಕಿಡ್ನಿಗಳಲ್ಲಿ ಕಲ್ಲುಗಳು ಇರುವುದನ್ನು ಪತ್ತೆಯಾಗಿತ್ತು. ಎಡ ಭಾಗದಲ್ಲಿ ಕಿಡ್ನಿಯಿಂದ ಮೂತ್ರಕೋಶಕ್ಕೆ ಸಂಪರ್ಕ ಕಲ್ಪಿಸುವ ಟ್ಯೂಬ್ನಲ್ಲಿ 9 ಮಿಲಿಮೀಟರ್, ಒಂದು ಸೆಂಟಿಮೀಟರ್ ಕಲ್ಲು ಇರುವುದು ಕಂಡುಬಂತು. ಯುರೆಕ್ಟ್ರೋಸ್ಕೋಪಿ ತಂತ್ರಜ್ಞಾನದ ಮೂಲಕ ಕಲ್ಲು ತೆಗೆಯಲಾಗಿದೆ. ಎರಡು ವಾರಗಳ ನಂತರ ಇದೀಗ ಮಗು ಮೂತ್ರಪಿಂಡದ ಕಲ್ಲಿನ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತವಾಗಿದೆ.

ಮಕ್ಕಳಲ್ಲಿ ಕಂಡು ಬರುವ ಮೂತ್ರಪಿಂಡ ಕಲ್ಲು ಸಮಸ್ಯೆ ನಿವಾರಿಸಲು ಎಂಡೋಸ್ಕೋಪಿ ಜತೆಗೆ ಹೊಲ್ಮಿಯಮ್ ತಂತ್ರಜ್ಞಾವನ್ನು ಬಳಕೆ ಮಾಡಲಾಗುತ್ತದೆ. ಮಕ್ಕಳ ಮೂತ್ರ ಸಮಸ್ಯೆ ನಿವಾರಣಾ ತಜ್ಞ ಡಾ. ಪ್ರಸನ್ನ ವೆಂಕಟೇಶ್ ನೇತೃತ್ವದ ಪರಿಣಿತರ ತಂಡ, ಆಧುನಿಕ ವೈದ್ಯಕೀಯ ಪರಿಕರಗಳ ಜತೆಗೆ ವೈದ್ಯಕೀಯ ಕೌಶಲವನ್ನು ಬಳಕೆ ಮಾಡಿಕೊಂಡಿದೆ. ಮಕ್ಕಳ ಅನಸ್ತೇಷಿಯಾ ತಂಡ ಮತ್ತಿತರರ ಪರಿಶ್ರಮದಿಂದ ಮಗು ಚೇತರಿಸಿಕೊಂಡಿದೆ.

Published On - 7:43 pm, Thu, 31 December 20