ಮಂಗಳೂರು: ಏಳು ವರ್ಷದ ನಾಯಿಮರಿಯೊಂದು ಚಿರತೆ ಮುಂದೆ, ಸಾವಿನ ದವಡೆಯಲ್ಲಿ ಕಳೆದು ಅದೃಷ್ಟವಷಾತ್ ಬದುಕಿ ಉಳಿದು ಬಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯ ಗ್ರಾಮವೊಂದರಲ್ಲಿ ನಡೆದಿದೆ. ಸಾಕುನಾಯಿ, ಪುಟಾಣಿ ನಾಯಿಮರಿಯನ್ನು ಕುತ್ತಿಗೆಯ ಮೂಲಕ ಚಿರತೆ ಕಚ್ಚಿ ಹಿಡಿದುಕೊಂಡಿದೆ. ಆದರೆ, ಬಳಿಕ ಅಪ್ಪಿತಪ್ಪಿ ಎಂಬಂತೆ ಚಿರತೆ ಬಾಯಿಯಿಂದ ನಅಯಿಮರಿ ತಪ್ಪಿಸಿಕೊಂಡು ಬಚಾವಾಗಿದೆ.
ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ನಾಯಿಮರಿ ಬದುಕಿದೆಯಾ ಬಡಜೀವವೇ ಎಂಬಂತೆ ಹಿಂದೆಮುಂದೆ ನೋಡದೆ ಓಡಿ ಬಂದಿದೆ. ತನ್ನ ಸುರಕ್ಷ ವಲಯ ಸೇರಿಕೊಂಡಿದೆ. ಈ ಘಟನೆ ಗುರುವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆ ಸಮೀಪದ ಪಡುಕೊಣಾಜೆ ಎಂಬಲ್ಲಿ ನಡೆದಿದೆ. ಕಾಡಿನ ವಲಯಕ್ಕೆ ಸಮೀಪ ಇರುವ ಸತೀಶ್ ಕೋಟ್ಯಾನ್ ಎಂಬವರ ಮನೆಯಲ್ಲಿ ಹೀಗಾಗಿದೆ.
ಹೊಟೇಲ್ ಕೆಲಸ ಮಾಡುವ ಸತೀಶ್ ಎಂಬವರು ಇದೇ ಮನೆಯಲ್ಲಿ ಸುಮಾರು 20 ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ಆದರೆ, ಚಿರತೆ ಮನೆಯ ಬಳಿಗೆ ಬಂದ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ. ಉಪ ಅರಣ್ಯಾಧಿಕಾರಿ ಮಂಜುನಾಥ್ ಗಾಣಿಗ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾತ್ರಿ 11.20 ಸುಮಾರಿಗೆ ಘಟನೆ ನಡೆದಿದೆ. ಮನೆಯ ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ.
ಸಿಸಿಟಿವಿ ಫೂಟೇಜ್ ಮಾಹಿತಿಯ ಪ್ರಕಾರ, ರಾತ್ರಿ 11.42ರ ವೇಳೆಗೆ ಚಿರತೆ ಹಿಂದಿರುಗಿದೆ. ಆದರೆ, ಘಟನೆಯಿಂದ ಭಯ, ಆತಂಕಕ್ಕೆ ಒಳಗಾಗಿದ್ದ ನಾಯಿಮರಿ ರಾತ್ರಿ 2.30ರ ಬಳಿಕವೇ ಮನೆಯ ಸಿಟ್ ಔಟ್ಗೆ ಬಂದಿದೆ. ಚಿರತೆಯ ಬಾಯಿಗೆ ಸಿಕ್ಕಿ ಗಾಯಗೊಂಡಿರುವ ನಾಯಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿರತೆ ದಾಳಿಗೆ ಎರಡು ಕರುಗಳು ಬಲಿ.. ದೊಡ್ಡೇರಿ ಗ್ರಾಮಸ್ಥರಲ್ಲಿ ಆತಂಕ
Viral Photo: 20 ಅಡಿ ಆಳದ ಬಾವಿಯಲ್ಲಿ ಮುಖವನ್ನಷ್ಟೆ ಮೇಲೆತ್ತಿ ನೋಡುತ್ತಿದೆ ಚಿರತೆ! ಅದ್ಭುತ ಚಿತ್ರ ವೈರಲ್