H Vishwanath: ನಮ್ಮದು 3 ಪಕ್ಷಗಳ ಸರ್ಕಾರ; ಸಚಿವ ಯೋಗೇಶ್ವರ್ ಮಾತಿಗೆ ಧ್ವನಿಗೂಡಿಸಿದ ಹೆಚ್ ವಿಶ್ವನಾಥ್

ಯಡಿಯೂರಪ್ಪರನ್ನ ಜೈಲಿಗೆ ಕಳಿಸಿದ್ದೇ ಪುತ್ರ ವಿಜಯೇಂದ್ರ. ಅವರ ನಕಲಿ ಸಹಿ ಮಾಡಿ ಬಿಎಸ್​​ವೈರನ್ನ ಜೈಲಿಗೆ ಕಳಿಸಿದ್ದ. ಇದೀಗ ಇಡೀ ಕುಟುಂಬವನ್ನೇ ಜೈಲಿಗೆ ಕಳುಹಿಸುತ್ತಾನೆ ಎಂದು ವಿಜಯೇಂದ್ರ ವಿರುದ್ಧ ಹೆಚ್.ವಿಶ್ವನಾಥ್ ಗಂಭೀರ​ ಆರೋಪ ಮಾಡಿದ್ದಾರೆ.

H Vishwanath: ನಮ್ಮದು 3 ಪಕ್ಷಗಳ ಸರ್ಕಾರ; ಸಚಿವ ಯೋಗೇಶ್ವರ್ ಮಾತಿಗೆ ಧ್ವನಿಗೂಡಿಸಿದ ಹೆಚ್ ವಿಶ್ವನಾಥ್
ಹೆಚ್ ವಿಶ್ವನಾಥ್
Follow us
TV9 Web
| Updated By: ganapathi bhat

Updated on: Jul 05, 2021 | 8:13 PM

ಮೈಸೂರು: ನಮ್ಮದು 3 ಪಕ್ಷಗಳ ಸರ್ಕಾರ. ಸರ್ಕಾರದ ಯಾವುದೇ ಭ್ರಷ್ಟಾಚಾರದ ಬಗ್ಗೆ ವಿರೋಧ ಪಕ್ಷದವರು ಮಾತನಾಡುತ್ತಿಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯ ಧ್ವನಿ ಎತ್ತುತ್ತಿಲ್ಲ. ಜಿಂದಾಲ್ ಭೂಮಿ ಪರಭಾರೆ ವಿಚಾರ ನಾನು ವಿರೋಧಿಸಿದೆ. ಬೇರೆ ಯಾರು ಇದನ್ನು ಕೇಳಲಿಲ್ಲ, ಇದರಿಂದ ಸ್ಪಷ್ಟವಾಗುತ್ತೆ. ರಾಜ್ಯದಲ್ಲಿರುವುದು 3 ಪಾರ್ಟಿ ಸರ್ಕಾರವೆಂಬುದು ಗೊತ್ತಾಗುತ್ತೆ ಎಂದು ಸಚಿವ ಯೋಗೇಶ್ವರ್ ಮಾತಿಗೆ ಮೈಸೂರಿನಲ್ಲಿ ಬಿಜೆಪಿ ಎಂಎಲ್​ಸಿ ಹೆಚ್. ವಿಶ್ವನಾಥ್ ಧ್ವನಿಗೂಡಿಸಿದ್ದಾರೆ.

‘ಸಿಎಂ ವಿರುದ್ಧ ಮಾತಾಡುವವರು ಅವರ ಧೂಳಿಗೂ ಸಮರಲ್ಲ’ ಎಂಬ ಸಚಿವ ಸೋಮಶೇಖರ್ ಹೇಳಿಕೆಗೆ ಹೆಚ್.ವಿಶ್ವನಾಥ್ ಟಾಂಗ್ ಕೊಟ್ಟಿದ್ದಾರೆ. ಸೋಮಶೇಖರ್ ನೀನು ಬೇಕಾದರೆ ಬಿಎಸ್​ವೈ ಪಾದ ನೆಕ್ಕು. ಸಿಎಂ ಪುತ್ರನ ಭ್ರಷ್ಟಾಚಾರ ಅವ್ಯವಹಾರ ನಿಮಗೆ ಕಾಣುತ್ತಿಲ್ವಾ? ರಾಜ್ಯದಲ್ಲಿ ಬಿಜೆಪಿಗೆ 104 ಸ್ಥಾನ ಬಂದಿದ್ದು ಬಿಎಸ್​​ವೈರಿಂದಲ್ಲ. 25 ಸಂಸದರು ಗೆದ್ದಿದ್ದು ಸಿಎಂ ಬಿ.ಎಸ್. ಯಡಿಯೂರಪ್ಪರಿಂದಲ್ಲ. ಇದೆಲ್ಲಾ ಆಗಿದ್ದು ಪ್ರಧಾನಿ ನರೇಂದ್ರ ಮೋದಿಯವರಿಂದ ಎಂದು ಹೆಚ್. ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಮೋದಿ ಹೆಸರನ್ನೇ ಯಡಿಯೂರಪ್ಪ ಮರೆಸಿದ್ದಾರೆ. ರಾಜ್ಯದಲ್ಲಿ ಸಿಎಂ ಬದಲಾಗಲೇ ಬೇಕು, ಆ ಪ್ರಕ್ರಿಯೆ ನಡೆದಿದೆ. ಫಲ ತಡವಾಗಬಹುದು ಆದ್ರೆ ಖಂಡಿತ ಬದಲಾವಣೆ ಆಗಲಿದೆ ಎಂದು ಮೈಸೂರಿನಲ್ಲಿ ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪರನ್ನ ಜೈಲಿಗೆ ಕಳಿಸಿದ್ದೇ ಪುತ್ರ ವಿಜಯೇಂದ್ರ. ಅವರ ನಕಲಿ ಸಹಿ ಮಾಡಿ ಬಿಎಸ್​​ವೈರನ್ನ ಜೈಲಿಗೆ ಕಳಿಸಿದ್ದ. ಇದೀಗ ಇಡೀ ಕುಟುಂಬವನ್ನೇ ಜೈಲಿಗೆ ಕಳುಹಿಸುತ್ತಾನೆ ಎಂದು ವಿಜಯೇಂದ್ರ ವಿರುದ್ಧ ಹೆಚ್.ವಿಶ್ವನಾಥ್ ಗಂಭೀರ​ ಆರೋಪ ಮಾಡಿದ್ದಾರೆ.

ಸಿಎಂ ಪುತ್ರ ವಿಜಯೇಂದ್ರನ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಹಿಂದುಳಿದ ನಾಯಕರನ್ನು ತುಳಿಯುವ ಕೆಲಸ ನಡೆಯುತ್ತಿದೆ. ನನ್ನನ್ನು ರಾಜಕೀಯವಾಗಿ ಮುಗಿಸಿದ್ದೇ ಬಿ.ವೈ.ವಿಜಯೇಂದ್ರ. ರಮೇಶ್ ಜಾರಕಿಹೋಳಿ, ಶ್ರೀರಾಮುಲು ಮುಗಿಸಲು ಯತ್ನ ನಡೆದಿದೆ. ಶ್ರೀರಾಮುಲು ಮುಗಿಸಲು ಹೊರಟಿರುವುದು ವಿಜಯೇಂದ್ರನೇ. ರಮೇಶ್​ ಸಿಡಿ ಪ್ರಕರಣದಲ್ಲಿ ಬಿ.ವೈ.ವಿಜಯೇಂದ್ರ ಪಾತ್ರವಿದೆ. ಎಷ್ಟು ದಿನ ನಿಮ್ಮದು ನಡೆಯುತ್ತೆ ಎಂದು ನಾವು ನೋಡ್ತೇವೆ. ರಾಜಕಾರಣದಲ್ಲಿ ಇದು ಸರಿಯಲ್ಲ ಎಂದು ಹೆಚ್.ವಿಶ್ವನಾಥ್​ ಹೇಳಿದ್ದಾರೆ.

ಕೆಆರ್​ಎಸ್ ಡ್ಯಾಂ​ ಬಾಗಿಲಿಗೆ ಸುಮಲತಾರನ್ನು ಮಲಗಿಸಬೇಕು ಎಂಬ ಹೇಳಿಕೆಗೆ ಟೀಕಿಸಿದ್ದಾರೆ. ಮಿಸ್ಟರ್ ಕುಮಾರಸ್ವಾಮಿ ಮೈಂಡ್ ಯುವರ್ ಲಾಂಗ್ವೇಜ್ ಎಂದು ಮಾಜಿ ಸಿಎಂ ಹೆಚ್​ಡಿಕೆ ಹೇಳಿಕೆಗೆ ಹೆಚ್.ವಿಶ್ವನಾಥ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಮ್ಮ ಪುತ್ರನ ಸೋಲಿನ ಸೇಡನ್ನು ಈ ರೀತಿ ತೀರಿಸಿಕೊಳ್ತಿದ್ದೀರಾ? ಸುಮಲತಾ ರೆಬೆಲ್ ಌಕ್ಟರ್, ರೆಬೆಲ್ ಸಂಸದೆ ಎಂದು ವಿಶ್ವನಾಥ್ ಹೇಳಿದ್ದಾರೆ.

ಸುಮಲತಾ ಮಂಡ್ಯದ ಸೊಸೆ ರೆಬೆಲ್​ಸ್ಟಾರ್​ ಅಂಬರೀಶ್​ ಪತ್ನಿ ಆಗಿದ್ದಾರೆ. ಅಂತಹ ಹೆಣ್ಣುಮಗಳಿಗೆ ಅವಮಾನ ಮಾಡುತ್ತೀರಾ ಎಂದು ಕಿಡಿಕಾರಿದ್ದಾರೆ. 2 ಬಾರಿ ಸಿಎಂ ಆದವರ ಬಾಯಲ್ಲಿ ಈ ಮಾತು ಬರಬಾರದು. ಕೆಆರ್​ಎಸ್ ಡ್ಯಾಂ ಸಮಸ್ಯೆಯಿದ್ದರೆ ಪರಿಶೀಲಿಸೋಣ ಎಂದು ಹೇಳಿ. ಅದನ್ನು ಬಿಟ್ಟು ಹೆಣ್ಣುಮಗಳನ್ನು ಮಲಗಿಸಿ ಅಂದರೆ ಏನರ್ಥ. ಕುಮಾರಸ್ವಾಮಿಯವರೇ ಏನು ನಿಮ್ಮ ಭಾಷೆಯ ಅರ್ಥ ಎಂದು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹೆಚ್.ವಿಶ್ವನಾಥ್​ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಎಸ್ಎಸ್ಎಲ್​ಸಿ ಪರೀಕ್ಷೆ ನಡೆಸಲು ಬಿಜೆಪಿ ಎಂಎಲ್​ಸಿ ಹೆಚ್.ವಿಶ್ವನಾಥ್ ವಿರೋಧ

H Vishwanath Press Meet ಮಹಾನುಭಾವ ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮೀ ಪುರಾಣ ಮರೆತಿದ್ದಾರೆ -ಹೆಚ್. ವಿಶ್ವನಾಥ್

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ