AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಕನ್ನಡ: ಚಿರತೆಯ ಹಿಡಿತಕ್ಕೆ ಸಿಕ್ಕಿಬಿದ್ದ ನಾಯಿಮರಿ; ಅದೃಷ್ಟವಷಾತ್ ಸಾವಿನ ದವಡೆಯಿಂದ ಪಾರು!

ಸಿಸಿಟಿವಿ ಫೂಟೇಜ್ ಮಾಹಿತಿಯ ಪ್ರಕಾರ, ರಾತ್ರಿ 11.42ರ ವೇಳೆಗೆ ಚಿರತೆ ಹಿಂದಿರುಗಿದೆ. ಆದರೆ, ಘಟನೆಯಿಂದ ಭಯ, ಆತಂಕಕ್ಕೆ ಒಳಗಾಗಿದ್ದ ನಾಯಿಮರಿ ರಾತ್ರಿ 2.30ರ ಬಳಿಕವೇ ಮನೆಯ ಸಿಟ್ ಔಟ್​ಗೆ ಬಂದಿದೆ. ಚಿರತೆಯ ಬಾಯಿಗೆ ಸಿಕ್ಕಿ ಗಾಯಗೊಂಡಿರುವ ನಾಯಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ.

ದಕ್ಷಿಣ ಕನ್ನಡ: ಚಿರತೆಯ ಹಿಡಿತಕ್ಕೆ ಸಿಕ್ಕಿಬಿದ್ದ ನಾಯಿಮರಿ; ಅದೃಷ್ಟವಷಾತ್ ಸಾವಿನ ದವಡೆಯಿಂದ ಪಾರು!
ಚಿರತೆ ( ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on: Jul 05, 2021 | 7:42 PM

Share

ಮಂಗಳೂರು: ಏಳು ವರ್ಷದ ನಾಯಿಮರಿಯೊಂದು ಚಿರತೆ ಮುಂದೆ, ಸಾವಿನ ದವಡೆಯಲ್ಲಿ ಕಳೆದು ಅದೃಷ್ಟವಷಾತ್ ಬದುಕಿ ಉಳಿದು ಬಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯ ಗ್ರಾಮವೊಂದರಲ್ಲಿ ನಡೆದಿದೆ. ಸಾಕುನಾಯಿ, ಪುಟಾಣಿ ನಾಯಿಮರಿಯನ್ನು ಕುತ್ತಿಗೆಯ ಮೂಲಕ ಚಿರತೆ ಕಚ್ಚಿ ಹಿಡಿದುಕೊಂಡಿದೆ. ಆದರೆ, ಬಳಿಕ ಅಪ್ಪಿತಪ್ಪಿ ಎಂಬಂತೆ ಚಿರತೆ ಬಾಯಿಯಿಂದ ನಅಯಿಮರಿ ತಪ್ಪಿಸಿಕೊಂಡು ಬಚಾವಾಗಿದೆ.

ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ನಾಯಿಮರಿ ಬದುಕಿದೆಯಾ ಬಡಜೀವವೇ ಎಂಬಂತೆ ಹಿಂದೆಮುಂದೆ ನೋಡದೆ ಓಡಿ ಬಂದಿದೆ. ತನ್ನ ಸುರಕ್ಷ ವಲಯ ಸೇರಿಕೊಂಡಿದೆ. ಈ ಘಟನೆ ಗುರುವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆ ಸಮೀಪದ ಪಡುಕೊಣಾಜೆ ಎಂಬಲ್ಲಿ ನಡೆದಿದೆ. ಕಾಡಿನ ವಲಯಕ್ಕೆ ಸಮೀಪ ಇರುವ ಸತೀಶ್ ಕೋಟ್ಯಾನ್ ಎಂಬವರ ಮನೆಯಲ್ಲಿ ಹೀಗಾಗಿದೆ.

ಹೊಟೇಲ್ ಕೆಲಸ ಮಾಡುವ ಸತೀಶ್ ಎಂಬವರು ಇದೇ ಮನೆಯಲ್ಲಿ ಸುಮಾರು 20 ವರ್ಷಗಳಿಂದ ಜೀವನ ನಡೆಸುತ್ತಿದ್ದಾರೆ. ಆದರೆ, ಚಿರತೆ ಮನೆಯ ಬಳಿಗೆ ಬಂದ ಘಟನೆ ಇದೇ ಮೊದಲ ಬಾರಿಗೆ ನಡೆದಿದೆ. ಉಪ ಅರಣ್ಯಾಧಿಕಾರಿ ಮಂಜುನಾಥ್ ಗಾಣಿಗ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾತ್ರಿ 11.20 ಸುಮಾರಿಗೆ ಘಟನೆ ನಡೆದಿದೆ. ಮನೆಯ ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ.

ಸಿಸಿಟಿವಿ ಫೂಟೇಜ್ ಮಾಹಿತಿಯ ಪ್ರಕಾರ, ರಾತ್ರಿ 11.42ರ ವೇಳೆಗೆ ಚಿರತೆ ಹಿಂದಿರುಗಿದೆ. ಆದರೆ, ಘಟನೆಯಿಂದ ಭಯ, ಆತಂಕಕ್ಕೆ ಒಳಗಾಗಿದ್ದ ನಾಯಿಮರಿ ರಾತ್ರಿ 2.30ರ ಬಳಿಕವೇ ಮನೆಯ ಸಿಟ್ ಔಟ್​ಗೆ ಬಂದಿದೆ. ಚಿರತೆಯ ಬಾಯಿಗೆ ಸಿಕ್ಕಿ ಗಾಯಗೊಂಡಿರುವ ನಾಯಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಚಿರತೆ ದಾಳಿಗೆ ಎರಡು ಕರುಗಳು ಬಲಿ.. ದೊಡ್ಡೇರಿ ಗ್ರಾಮಸ್ಥರಲ್ಲಿ ಆತಂಕ

Viral Photo: 20 ಅಡಿ ಆಳದ ಬಾವಿಯಲ್ಲಿ ಮುಖವನ್ನಷ್ಟೆ ಮೇಲೆತ್ತಿ ನೋಡುತ್ತಿದೆ ಚಿರತೆ! ಅದ್ಭುತ ಚಿತ್ರ ವೈರಲ್​

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು