ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ವಿರೋಧ
ಪ್ರಧಾನಿಯವರೇ ಜೀವ ಮುಖ್ಯ, ನಂತರ ಜೀವನ ಎಂದಿದ್ದಾರೆ. ಆದರೆ ಎಸ್.ಸುರೇಶ್ ಕುಮಾರ್ಗೆ ಎಲ್ಲ ಗೊತ್ತೆಂಬ ಅಹಂ ಇದೆ. ಇಂತಹ ಅಹಂ ಇರಬಾರದೆಂದು ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಪರೀಕ್ಷೆ ಬೇಕಾಗಿರಲಿಲ್ಲ. ಸರ್ಕಾರದ ನಿರ್ಧಾರ ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳುತ್ತಿದೆ.
ಮೈಸೂರು: ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ವಿರೋಧ ವ್ಯಕ್ತಪಡಿಸಿದ್ದಾರೆ. ಯಾವ ಹಠಕ್ಕೆ ಬಿದ್ದು ಪರೀಕ್ಷೆ ನಡೆಸಲು ನಿರ್ಧರಿಸಿದ್ದೀರಿ? ಎಂದು ಸಚಿವ ಸುರೇಶ್ ಕುಮಾರ್ಗೆ ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಸಿಬಿಎಸ್ಇ ಪರೀಕ್ಷೆಯನ್ನೇ ರದ್ದು ಮಾಡಿದೆ. ಇಂಥ ಸಂದರ್ಭದಲ್ಲಿ ಪರೀಕ್ಷೆ ಮಾಡುವುದು ಬೇಡ ಎಂದಿದ್ದೆ. ಆದರೆ ಈಗ ಯಾವ ಪುರುಷಾರ್ಥಕ್ಕೆ ಪರೀಕ್ಷೆ ಮಾಡಲಾಗುತ್ತಿದೆ. ಜೀವ, ಜೀವನ ಎರಡನ್ನೂ ತೆಗೆಯಲು ಮುಂದಾಗಿದ್ದಾರೆ ಎಂದು ಸುರೇಶ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿಯವರೇ ಜೀವ ಮುಖ್ಯ, ನಂತರ ಜೀವನ ಎಂದಿದ್ದಾರೆ. ಆದರೆ ಎಸ್.ಸುರೇಶ್ ಕುಮಾರ್ಗೆ ಎಲ್ಲ ಗೊತ್ತೆಂಬ ಅಹಂ ಇದೆ. ಇಂತಹ ಅಹಂ ಇರಬಾರದೆಂದು ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಪರೀಕ್ಷೆ ಬೇಕಾಗಿರಲಿಲ್ಲ. ಸರ್ಕಾರದ ನಿರ್ಧಾರ ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳುತ್ತಿದೆ. ಸರ್ಕಾರ, ಸಚಿವರು ಅಹಂ ಬಿಟ್ಟು ಕೆಲಸ ಮಾಡಬೇಕಾಗಿದೆ. ಇದು ಮಗುವನ್ನು ಮರೆತ ಸರ್ಕಾರವೆಂದು ವಿಶ್ವನಾಥ್ ಹೇಳಿದರು.
10-15 ದಿನದಲ್ಲಿ 3ನೇ ಅಲೆ ಆರಂಭವಾಗುತ್ತೆಂದು ಹೇಳುತ್ತಿದ್ದಾರೆ. ಈ ಸಮಯದಲ್ಲಿ ಪರೀಕ್ಷೆ ನಡೆಸುವುದಕ್ಕೆ ಮುಂದಾಗಿದ್ದಾರೆ. ಏಕಾಏಕಿ ಎಸ್ಎಸ್ಎಲ್ಸಿ ಪರೀಕ್ಷೆ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಶ್ವವೇ ಕೊರೊನಾ ಸೋಂಕು ಸವಾಲನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಮಾಡುವುದು ಅವೈಜ್ಞಾನಿಕ ಎಂದು ತಿಳಿಸಿದರು.
ಶಾಲೆ ಶುಲ್ಕಕ್ಕೆ ಬಸವರಾಜ ಹೊರಟ್ಟಿ ಸಲಹೆ ಹುಬ್ಬಳ್ಳಿ: ಶಾಲೆ ಶುಲ್ಕ ವಿಚಾರಕ್ಕೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳ ವಿಚಾರವಾಗಿ ನಾನು ಸರ್ಕಾರಕ್ಕೆ ಸಲಹೆ ನೀಡಿರುವೆ. ಎಬಿಸಿಡಿ ಆಧಾರದ ಮೇಲೆ ಸಲಹೆ ನೀಡಿರುವೆ. ಫೀ ವಿಚಾರದ ಬಗ್ಗೆ ನಾನು ಮನವಿ ಮಾಡಿರುವೆ. ಆದ್ಯತೆ ಮೇರೆಗೆ ಅಧಿಕಾರಿಗಳು ಶುಲ್ಕ ಮಾರ್ಗಸೂಚಿ ರಚಿಸಬೇಕು ಎಂದು ತಿಳಿಸಿದ್ದಾರೆ.
ವಿದೇಶಕ್ಕೆ ಹೋದಾಗ ರಾಹುಲ್ ಗಾಂಧಿ ವಿಚಾರದಲ್ಲಿ ಮಾಡಿದ್ದ ದೊಡ್ಡ ತಪ್ಪಿನ ಬಗ್ಗೆ ಬಾಯ್ಬಿಟ್ಟ ರಮ್ಯಾ
(BJP MLC H Vishwanath has opposed the SSLC exam )