ಸಿದ್ದರಾಮಯ್ಯರನ್ನ ಮೂಲೆಗುಂಪಾಗಿಸಿದ್ದ ಜಾತಿಗಣತಿ ಬ್ರಹ್ಮಾಸ್ತ್ರ ಮತ್ತೆ ಮುನ್ನೆಲೆಗೆ; 2023ರ ಚುನಾವಣೆಗೆ ಬಿಜೆಪಿಯಿಂದ ಮಾಸ್ಟರ್ ಪ್ಲಾನ್!?

Socio Economic Caste Census 2011: 2023ರ ಚುನಾವಣೆಗೆ ಜಾತಿ ಗಣತಿ ವರದಿ ಪಾಲಿಟಿಕ್ಸ್ ಗೆ ಬಿಜೆಪಿ ಸೀಕ್ರೆಟ್ ಪ್ಲ್ಯಾನ್ ಮಾಡಿಕೊಂಡಿದೆ. ಸಿದ್ದರಾಮಯ್ಯ ಮೂಲೆಗುಂಪಾಗಿಸಿದ್ದ ಜಾತಿ ಗಣತಿ ವರದಿಗೆ ಜೀವಕೊಡುವ ಪ್ಲ್ಯಾನ್ ಮಾಡುತ್ತಿದೆ.

ಸಿದ್ದರಾಮಯ್ಯರನ್ನ ಮೂಲೆಗುಂಪಾಗಿಸಿದ್ದ ಜಾತಿಗಣತಿ ಬ್ರಹ್ಮಾಸ್ತ್ರ ಮತ್ತೆ ಮುನ್ನೆಲೆಗೆ; 2023ರ ಚುನಾವಣೆಗೆ ಬಿಜೆಪಿಯಿಂದ ಮಾಸ್ಟರ್ ಪ್ಲಾನ್!?
ಬಿ.ಎಸ್.ಯಡಿಯೂರಪ್ಪ
Follow us
| Updated By: ಆಯೇಷಾ ಬಾನು

Updated on: Jun 29, 2021 | 1:31 PM

ಬೆಂಗಳೂರು: 2023ರ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದ್ದರೂ ಈಗಿನಿಂದಲೇ ಚುನಾವಣೆಗೆ ತಯಾರಿ ಶುರುವಾಗಿದೆ. ಕಾಂಗ್ರೆಸ್, ಬಿಜೆಪಿ ಒಳಗೊಳಗೆ ಕಸರತ್ತು ಮಾಡುತ್ತಿದೆ. ಬಿಜೆಪಿ ಸರ್ಕಾರ ಕಾಂಗ್ರೆಸ್ ವಿರುದ್ಧ ಜಾತಿ ಗಣತಿ ವರದಿಯನ್ನೇ (Socio Economic Caste Census 2011) ಬ್ರಹ್ಮಾಸ್ತ್ರ ಮಾಡಿಕೊಳ್ಳಲು ಸಿದ್ಧತೆ ನಡೆಸಿದೆ.

2023ರ ಚುನಾವಣೆಗೆ ಜಾತಿ ಗಣತಿ ವರದಿ ಪಾಲಿಟಿಕ್ಸ್ ಗೆ ಬಿಜೆಪಿ ಸೀಕ್ರೆಟ್ ಪ್ಲ್ಯಾನ್ ಮಾಡಿಕೊಂಡಿದೆ. ಸಿದ್ದರಾಮಯ್ಯ ಮೂಲೆಗುಂಪಾಗಿಸಿದ್ದ ಜಾತಿ ಗಣತಿ ವರದಿಗೆ ಜೀವಕೊಡುವ ಪ್ಲ್ಯಾನ್ ಮಾಡುತ್ತಿದೆ. ಸಿದ್ದರಾಮಯ್ಯ ಅವಧಿಯಲ್ಲಿ ನಡೆಸಲಾಗಿದ್ದ ಜಾತಿ ಗಣತಿ ವರದಿ ಸ್ವೀಕಾರಕ್ಕೆ ಸರ್ಕಾರ ರೆಡಿಯಾಗಿದೆ. ಕಾಂಗ್ರೆಸ್ ನ ಅಹಿಂದ ಹಾಗೂ ದಲಿತ ಸಮಾವೇಶಗಳ ಚಿಂತನೆಗೆ ಬಿಜೆಪಿ ಕೌಂಟರ್ ನೀಡಲಿದೆ.

ಜಾತಿ ಗಣತಿ ವರದಿ ಸ್ವೀಕರಿಸಿ ಸರ್ವ ಸಮುದಾಯಗಳ ಮೆಚ್ಚುಗೆ ಪಡೆಯಲು ಸರ್ಕಸ್ ನಡೆಸುತ್ತಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆಸಿದ್ದ ಜಾತಿ ಸರ್ವೆ ರಿಪೋರ್ಟ್ ಮೇಲೆ ಬಿಜೆಪಿ ಸರ್ಕಾರ ಕಣ್ಣಿಟ್ಟಿದೆ. ನಾವು ವರದಿ ಸ್ವೀಕರಿಸಿದ್ದೇವೆ ಅಂತಾ ಸಿದ್ದುಗೆ ಗುದ್ದು ಕೊಡಲು ಬಿಜೆಪಿ ರಣತಂತ್ರ ಹೆಣೆಯುತ್ತಿದೆ. ಹಿಂದುಳಿದ ವರ್ಗಗಳ ಆಯೋಗ ವರದಿ ಸಲ್ಲಿಕೆ ಬಗ್ಗೆ ಈಗಾಗಲೇ 3 ಬಾರಿ ಸಭೆ ಮಾಡಿದೆ.

ನಿನ್ನೆ ಮುಖ್ಯ ಕಾರ್ಯದರ್ಶಿ, ಆಯೋಗದ ಅಧ್ಯಕ್ಷರ ಸಭೆ ಕೊನೇ ಕ್ಷಣದಲ್ಲಿ ರದ್ದಾಗಿತ್ತು. ವರದಿ ಅನುಷ್ಠಾನದ ಐಡಿಯಾ ಇಲ್ಲದಿದ್ದರೂ ಶೀಘ್ರವೇ ವರದಿ ಸ್ವೀಕರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಮುಂದಿನ ಚುನಾವಣೆ ಮೇಲೆ ಬೆಂಕಿ ಬಿರುಗಾಳಿ ಎಬ್ಬಿಸುತ್ತಾ ಜಾತಿ ಗಣತಿ (SECC 2011) ಬ್ರಹ್ಮಾಸ್ತ್ರ? ಎಂಬ ಬಲವಾದ ಅನುಮಾನ ವ್ಯಕ್ತವಾಗಿದೆ.

(karnataka-bjp-plans-to-play-caste-census-2021-report-politics-to-win-2023-general-elections-ayb)

ಇದನ್ನೂ ಓದಿ: Siddaramaiah | ಅಹಿಂದ ಸಮಾವೇಶ: ಸಿದ್ದರಾಮಯ್ಯ ಪ್ರಸ್ತಾಪಕ್ಕೆ ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ