H Vishwanath Press Meet ಮಹಾನುಭಾವ ರೇಣುಕಾಚಾರ್ಯ ನರ್ಸ್ ಜಯಲಕ್ಷ್ಮೀ ಪುರಾಣ ಮರೆತಿದ್ದಾರೆ -ಹೆಚ್. ವಿಶ್ವನಾಥ್
ರೇಣುಕಾಚಾರ್ಯ ಹೈದರಾಬಾದ್ಗೆ ಹೋಗಿದ್ದು ಮರೆತಿದ್ದಾರೆ. ನರ್ಸ್ ಜಯಲಕ್ಷ್ಮೀ ಪ್ರಕರಣ ರೇಣುಕಾಚಾರ್ಯ ಮರೆತಿದ್ದಾರೆ. ಹರತಾಳು ಹಾಲಪ್ಪ ಸ್ನೇಹಿತನ ಮನೆಗೆ ಊಟಕ್ಕೆ ಹೋಗಿದ್ದ. ಅಲ್ಲಿ ಸ್ನೇಹಿತನ ಪತ್ನಿ ಮೇಲೆಯೇ ಅತ್ಯಾಚಾರ ಮಾಡಿದ್ದ.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಘರ್ಷಣೆ ಜೋರಾಗಿದೆ. ಪರ-ವಿರೋಧ ಚರ್ಚೆಗಳು, ಮೀಟಿಂಗ್ಗಳು ಗರಿಗೆದರಿವೆ. ಇದರ ನಡುವೆ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ರೇಣುಕಾಚಾರ್ಯ ಹೈದರಾಬಾದ್ಗೆ ಹೋಗಿದ್ದು ಮರೆತಿದ್ದಾರೆ. ನರ್ಸ್ ಜಯಲಕ್ಷ್ಮೀ ಪ್ರಕರಣ ರೇಣುಕಾಚಾರ್ಯ ಮರೆತಿದ್ದಾರೆ. ಹರತಾಳು ಹಾಲಪ್ಪ ಸ್ನೇಹಿತನ ಮನೆಗೆ ಊಟಕ್ಕೆ ಹೋಗಿದ್ದ. ಅಲ್ಲಿ ಸ್ನೇಹಿತನ ಪತ್ನಿ ಮೇಲೆಯೇ ಅತ್ಯಾಚಾರ ಮಾಡಿದ್ದ. ನಾನು ಉಂಡ ಮನೆಗೆ ಮದ್ದು ಹಾಕುತ್ತೇನೆಂದು ಮಾತಾಡ್ತೀಯ. ಎಸ್.ಆರ್.ವಿಶ್ವನಾಥ್ ನನ್ನನ್ನು ಅರೆಹುಚ್ಚ ಎಂದಿದ್ದಾರೆ. ನನ್ನಂತಹ ಅರೆಹುಚ್ಚನಿಂದ ನೀನು ಬಿಡಿಎ ಅಧ್ಯಕ್ಷನಾಗಿದ್ದೀಯ. ವಸ್ತುಪ್ರದರ್ಶನ ಕೇಂದ್ರದಲ್ಲಿ ಮಾಡಿದ್ದ ಕೇರ್ ಸೆಂಟರ್ ಎಲ್ಲಿ. 10 ಸಾವಿರ ಬೆಡ್ ಕೇರ್ ಸೆಂಟರ್ನಲ್ಲಿ ಎಷ್ಟು ಹೊಡೆದಿದ್ದೀಯಾ? ಎಂದು ರೇಣುಕಾಚಾರ್ಯ, ಎಸ್.ಆರ್.ವಿಶ್ವನಾಥ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ನಿನ್ನೆ ಅರುಣ್ ಸಿಂಗ್ ಅವರನ್ನ ಭೇಟಿ ಮಾಡಿದ್ದೆ. ಪಕ್ಷದ ರಾಜಕಾರಣ ಬಗ್ಗೆ ಸವಿಸ್ತಾರವಾಗಿ ವಿವರಣೆ ಮಾಡಿದ್ದೆ. 2024ಕ್ಕೆ ನಡೆಯಬಹುದಾದ ಪಾರ್ಲಿಮೆಂಟ್ ಚುನಾವಣೆ ಮೇಲೆ ಅಸೆಂಬ್ಲಿ ಚುನಾವಣೆ ಪರಿಣಾಮ ಬೀರುತ್ತೆ ಅಂತ ಚರ್ಚೆ ಮಾಡಿದ್ದೇನೆ. ಪ್ರತಿಯೊಂದಕ್ಕೆ ನಾಯಕತ್ವವೇ ಕಾರಣ. ಯಡಿಯೂರಪ್ಪ ಗೌರವಿಸಿ ಸಿಎಂ ಮಾಡಿದ್ದೇವೆ. ನಮ್ಮ ಸಹಕಾರದಿಂದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಇರುವಂತಹ ವಿಚಾರ ಹೇಳಿ ಬೇರೆಯವರಿಗೆ ಅಪ್ಪಚ್ಚಿ ಆಗಬಹುದು. ಏನಾಗ್ತಿದೆ ಅನ್ನೋದನ್ನ ಹೇಳ್ತಾ ಬಂದಿದ್ದೇನೆ. 76 ವರ್ಷ ವೀರಿದವರಿಗೆ ಆಡಳಿತ ವೇಗ ಕೊಡೊಲ್ಲ. ಯಡಿಯೂರಪ್ಪ ನವರು ಸಾಕಷ್ಟು ಬಳಲಿದ್ದಾರೆ. ಅತಿವೃಷ್ಠಿ, ಅನಾವೃಷ್ಠಿ ಎದುರಿಸಲು ಒಬ್ಬ ಸಮರ್ಪಕವಾದ ನಾಯಕತ್ಷ ರಾಜ್ಯಕ್ಕೆ ಬೇಕಿದೆ. ಶಕ್ತಿ ಪೀಠ ಪ್ರಭಾವಗಳಿಗೆ ಮಸುಕಾಗ್ತಿದೆ ಇದು ಜನರಿಗೆ, ಸರ್ಕಾರಕ್ಕೆ, ಪಕ್ಷಕ್ಕೆ ಒಳ್ಳೆಯದಲ್ಲ. ಪಕ್ಷದ ನೈತಿಕತೆ, ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ನಾನು ಮಾತನಾಡ್ತಿದ್ದೇನೆ. ನನ್ನ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲಿ ಎಂದರು.
ನೀರಾವರಿ ಇಲಾಖೆಯಲ್ಲಿ ₹20 ಸಾವಿರ ಕೋಟಿ ಟೆಂಡರ್ ತರಾತುರಿಯಲ್ಲಿ ಟೆಂಡರ್ ಕರೆದು ಅಂಗೀಕರಿಸಿದ್ದಾರೆ. 20 ಸಾವಿರ ಕೋಟಿ ರೂ. ಟೆಂಡರ್ನಲ್ಲಿ ಅಕ್ರಮ ಆಗಿದೆ. ಬಿಎಸ್ವೈ ಪುತ್ರ ಬಿ.ವೈ.ವಿಜಯೇಂದ್ರ ಎಲ್ಲ ಕಡೆ ಹಸ್ತಕ್ಷೇಪ ಮಾಡ್ತಿದೆ. ಎಲ್ಲ ಸಚಿವರ ಖಾತೆಗಳಲ್ಲಿ ಹಸ್ತಕ್ಷೇಪ ಬಗ್ಗೆ ರಾಜ್ಯಕ್ಕೇ ಗೊತ್ತಿದೆ. ವಿಜಯೇಂದ್ರ ವಿರುದ್ಧ ಇಡಿಯಲ್ಲಿ ಪ್ರಕರಣವೂ ಇದೆ. ಯಡಿಯೂರಪ್ಪ ಮಕ್ಕಳಿಂದ ಜೈಲಿಗೆ ಹೋಗಿದ್ದರು. ಈಗ ಮತ್ತೆ ಎರಡನೇ ಬಾರಿಗೆ BSY ಜೈಲಿಗೆ ಹೋಗಬಾರದು. ವಿಜಯೇಂದ್ರ ದೆಹಲಿಗೆ ಪದೇಪದೆ ಹೋಗೋದು ಏಕೆ? ಇಡಿಯಲ್ಲಿ ಪ್ರಕರಣ ಇದೆ ಹಾಗಾಗಿ ದೆಹಲಿಗೆ ಹೋಗ್ತಾರೆ. ಇದು ಗುತ್ತಿಗೆದಾರರ ಕೇಂದ್ರೀಕೃತವಾದ ಸರ್ಕಾರ ಆಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ.
ಈಶ್ವರಪ್ಪ ಅವರು ರಾಜ್ಯಪಾಲರ ಬಳಿ ದೂರು ಕೊಟ್ಟಿದ್ದೇಕೆ? 1400 ಕೋಟಿ ನನ್ನ ಇಲಾಖೆಯ ಹಣ ಬಿಡುಗಡೆ ಮಾಡಿದ್ದಾರೆ. ನನ್ನ ಸಹಿ ಇಲ್ಲದೆ ಹಣ ಬಿಡುಗಡೆ ಮಾಡಿದ್ದಾರೆ ಎಂದು ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಈಶ್ವರಪ್ಪ ದೂರು ನೀಡಿದ್ದಾರೆ. ಈಶ್ವರಪ್ಪ ಒಬ್ಬರು ಮಾತ್ರ ದೈರ್ಯ ಮಾಡಿ ದೂರು ಕೊಟ್ಟರು. ಬೇರೆ ಯಾವ ಸಚಿವರೂ ಸಹ ದೂರು ಕೊಡಲು ಹೋಗ್ತಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
ಜಿಂದಾಲ್ಗೆ ಭೂಮಿ ಪರಭಾರೆ ಬಗ್ಗೆ ದನಿ ಎತ್ತಿದ್ದೇ ನಾನು. ಸಿದ್ದರಾಮಯ್ಯ, ಕುಮಾರಸ್ವಾಮಿ ಏನು ಬಾಯಿಬಿಟ್ಟಿದ್ದರಾ? ಕಿಕ್‌ಬ್ಯಾಕ್ ಪಡೆದು ಎಲ್ಲರೂ ಸುಮ್ಮನಾಗಿದ್ದಾರೆ. ಇಲ್ಲಿ ಮೂರೂ ಪಕ್ಷಗಳು ಅಧಿಕಾರ ನಡೆಸುತ್ತಿವೆ ಇದು ಸತ್ಯ. ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದು ಸತ್ಯ ಎಂದರು. ಶೇ.80ರಷ್ಟು ಶಾಸಕರು ನಾಯಕತ್ವ ಬದಲಾವಣೆ ಕೇಳಿದ್ದಾರೆ. ಅರುಣ್ ಸಿಂಗ್ ಬಳಿ ಒಳಗೆ ಮಾತನಾಡಿರುವುದೇ ಬೇರೆ. ಹೊರ ಬಂದ ಬಳಿಕ ಹೇಳಿಕೆ ನೀಡೋದೇ ಬೇರೆ ಆಗಿರುತ್ತೆ. ಬಹುತೇಕರು ನಾಯಕತ್ವ ಬದಲಾವಣೆ ಬೇಕೆಂದು ಹೇಳಿದ್ದಾರೆ. ಎಲ್ಲರಿಗೂ ಎಲ್ಲವನ್ನೂ ಮಾತನಾಡಲು ಧೈರ್ಯ ಇಲ್ಲ ಎಂದು ಹೆಚ್.ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Published On - 10:59 am, Fri, 18 June 21