ನಾಯಿ ಮಾಂಸ ಸಾಗಾಟ ಪ್ರಕರಣ: ಠಾಣೆಯಲ್ಲಿ ಹಿಂದೂ ಮುಖಂಡ ಪುನೀತ್​ ಕೆರೆಹಳ್ಳಿ ಅಸ್ವಸ್ಥ, ಆಸ್ಪತ್ರೆಗೆ ಶಿಫ್ಟ್

| Updated By: ಆಯೇಷಾ ಬಾನು

Updated on: Jul 27, 2024 | 8:03 AM

ಬೇರೆ ರಾಜ್ಯದಿಂದ ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ರಾತ್ರಿ 12 ಗಂಟೆಗೆ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿಲಾಗಿತ್ತು. ಠಾಣೆಯಲ್ಲಿ ಮಲಗಿದ್ದಾಗ ಪುನೀತ್ ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ನಾಯಿ ಮಾಂಸ ಸಾಗಾಟ ಪ್ರಕರಣ: ಠಾಣೆಯಲ್ಲಿ ಹಿಂದೂ ಮುಖಂಡ ಪುನೀತ್​ ಕೆರೆಹಳ್ಳಿ ಅಸ್ವಸ್ಥ, ಆಸ್ಪತ್ರೆಗೆ ಶಿಫ್ಟ್
ಪುನೀತ್​ ಕೆರೆಹಳ್ಳಿ ಅಸ್ವಸ್ಥ
Follow us on

ಬೆಂಗಳೂರು, ಜುಲೈ.27: ಬೇರೆ ರಾಜ್ಯದಿಂದ ಬೆಂಗಳೂರಿಗೆ ನಾಯಿ ಮಾಂಸ (Dog Meat) ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಕಾಟನ್​ಪೇಟೆ ಪೊಲೀಸರು (Cottonpet Police) ಬಂಧಿಸಿದ್ದ ಹಿಂದೂ ಸಂಘಟನೆಯ ಮುಖಂಡ ಪುನೀತ್​ ಕೆರೆಹಳ್ಳಿ ಠಾಣೆಯಲ್ಲಿ ಅಸ್ವಸ್ಥರಾಗಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ರಾತ್ರಿ 12 ಗಂಟೆಗೆ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿಲಾಗಿತ್ತು. ಬಂಧನದ ಬಳಿಕ ಠಾಣೆಯಲ್ಲಿ ಮಲಗಿದ್ದಾಗ ಮುಂಜಾನೆ 4.45ರಲ್ಲಿ ಅಸ್ವಸ್ಥಗೊಂಡಿದ್ದಾರೆ. ಪುನೀತ್​ನನ್ನು ಕೆ.ಸಿ.ಜನರಲ್​​ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದ್ದು ಇದೀಗ ಕೆ.ಸಿ.ಜನರಲ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್​​​ ಮಾಡಲಾಗಿದೆ.

ಪೊಲೀಸ್ ಠಾಣೆಯಲ್ಲಿ ಪುನೀತ್ ಸುಸ್ತಾಗಿ ಮಲಗಿದ್ದ ಹಿನ್ನೆಲೆ ತಕ್ಷಣವೇ ಕಾಟನ್ ಪೇಟೆ ಪೊಲೀಸ್ ಸಿಬ್ಬಂದಿ ಆತನನ್ನು ಹೊತ್ತು ತಂದು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಸದ್ಯ ಈಗ ಹೆಚ್ಚಿನ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಮೂಲಕ ಪುನೀತ್ ಕೆರೆಹಳ್ಳಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್​​​ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿದೆಯಾ? ರಾಜಸ್ಥಾನದಿಂದ ಬಂದ ಮಾಂಸದ ಬಾಕ್ಸ್​ಗೆ ತಡೆ

ನಿನ್ನೆ ರಾತ್ರಿ ಜೈಪುರದಿಂದ ಬಂದ ಸುಮಾರು 50ಕ್ಕೂ ಹೆಚ್ಚು ಬಾಕ್ಸ್ ಗಳಲ್ಲಿ 4,500 ಕೆಜಿ ಮಾಂಸ ಇತ್ತು. ಆದರೆ ಈ ಮಾಂಸದ ಬಾಕ್ಸ್ ಗಳಲ್ಲಿ ಕುರಿಯ ಮಾಂಸದ ಜೊತೆ ನಾಯಿ ಮಾಂಸವನ್ನ ಮಿಕ್ಸ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂತು. ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರು ರೈಲಿನಿಂದ ಈ ಬಾಕ್ಸ್ ಗಳು ಹೊರಗೆ ಬರ್ತಿದ್ದಂತೆ ರೈಲ್ವೆ ನಿಲ್ದಾಣದಲ್ಲೇ ತಡೆದಿದ್ದರು. ಬಳಿಕ ಈ ಬಾಕ್ಸ್ ಗಳಲ್ಲಿ ನಾಯಿ ಮಾಂಸ ಮಿಕ್ಸ್ ಆಗಿದೆ. ಸ್ವಚ್ಚತೆ ಇಲ್ಲ ಅಕ್ರಮವಾಗಿ ಸಾಗಟ ಮಾಡಲಾಗ್ತಿದೆ ಎಂದು ಆರೋಪಿಸಿದ್ರು.

ಇನ್ನು ಈ ಮಾಂಸದ ಬಾಕ್ಸ್ ಗಳ ಮಾಲೀಕ ಎಂದು ಹೇಳಿಕೊಂಡಿರೋ ಅಬ್ದುಲ್ ರಜಾಕ್ ಎನ್ನುವರು, ಈ ಆರೋಪವನ್ನ ನಿರಾಕರಿಸಿದ್ದಾರೆ. ಪುನೀತ್ ಕೆರೆಹಳ್ಳಿ ರೋಲ್ ಕಾಲ್ ಮಾಡ್ತಿದ್ದು, ಅದನ್ ಕೊಡಲಿಲ್ಲ ಅಂತ ಈ ಆರೋಪ ಮಾಡ್ತಿದ್ದಾರೆ ಎಂದ್ರು.. ಅಷ್ಟಲ್ಲದೇ ಈ ಮಾಂಸದ ಸಾಗಾಟಕ್ಕೆ ಪರ್ಮಿಷನ್ ಕೂಡ ಇದೆ ಅಂತ ಸಮರ್ಥಿಸಿಕೊಂಡ್ರು.

ಈ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ರಾತ್ರಿ 12 ಗಂಟೆಗೆ ಪುನೀತ್ ಕೆರೆಹಳ್ಳಿ ಅವರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಲಾಗಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:01 am, Sat, 27 July 24