ನಡುರಾತ್ರಿ ನಾಯಿ ಜಾಗಕ್ಕಾಗಿ ಹಾಲಿ-ಮಾಜಿ ಶಾಸಕರ ರಿಲೆಟೀವ್ಸ್ ಫೈಟ್​!

ಬಾಗಲಕೋಟೆ: ಇಳಕಲ್ ನಗರದ ಪ್ರವಾಸಿ ಮಂದಿರದಲ್ಲಿ ನಾಯಿ ಶೆಡ್ ಕಿತ್ತಾಕಿದ ವಿಚಾರಕ್ಕೆ ಹಾಲಿ ಶಾಸಕನ ಪುತ್ರ ಮತ್ತು ಮಾಜಿ ಶಾಸಕನ ಸಹೋದರರ ಮಧ್ಯೆ ತಡರಾತ್ರಿ ಜಗಳವಾಗಿದೆ. ಶಾಸಕ ದೊಡ್ಡನಗೌಡ ಪಾಟೀಲ ಪುತ್ರ ರಾಜುಗೌಡ ಪಾಟೀಲ ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸಹೋದರ ದೇವಾನಂದ ಕಾಶಪ್ಪನವರ್ ನಡುವೆ ತಡರಾತ್ರಿ ಗಲಾಟೆಯಾಗಿದೆ. ನಾಯಿ ಶೆಡ್​ ಸಂಬಂಧ ಮಾತಿಗೆ ಮಾತು ಬೆಳೆದು ಪರಸ್ಪರ ಎಳೆದಾಡಿಕೊಂಡಿದ್ದಾರೆ. ಈ ವೇಳೆ ರಾತ್ರಿ ಬೀಟ್ ಪೊಲೀಸರು ಸ್ಥಳಕ್ಕಾಗಮಿಸಿ ಜಗಳ ಬಿಡಿಸಿದ್ದಾರೆ. ಘಟನಾ ಸ್ಥಳಕ್ಕೆ ಇಳಕಲ್ […]

ನಡುರಾತ್ರಿ ನಾಯಿ ಜಾಗಕ್ಕಾಗಿ ಹಾಲಿ-ಮಾಜಿ ಶಾಸಕರ ರಿಲೆಟೀವ್ಸ್ ಫೈಟ್​!
ಸಾಧು ಶ್ರೀನಾಥ್​

Updated on: Oct 21, 2019 | 3:12 PM

ಬಾಗಲಕೋಟೆ: ಇಳಕಲ್ ನಗರದ ಪ್ರವಾಸಿ ಮಂದಿರದಲ್ಲಿ ನಾಯಿ ಶೆಡ್ ಕಿತ್ತಾಕಿದ ವಿಚಾರಕ್ಕೆ ಹಾಲಿ ಶಾಸಕನ ಪುತ್ರ ಮತ್ತು ಮಾಜಿ ಶಾಸಕನ ಸಹೋದರರ ಮಧ್ಯೆ ತಡರಾತ್ರಿ ಜಗಳವಾಗಿದೆ.

ಶಾಸಕ ದೊಡ್ಡನಗೌಡ ಪಾಟೀಲ ಪುತ್ರ ರಾಜುಗೌಡ ಪಾಟೀಲ ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸಹೋದರ ದೇವಾನಂದ ಕಾಶಪ್ಪನವರ್ ನಡುವೆ ತಡರಾತ್ರಿ ಗಲಾಟೆಯಾಗಿದೆ. ನಾಯಿ ಶೆಡ್​ ಸಂಬಂಧ ಮಾತಿಗೆ ಮಾತು ಬೆಳೆದು ಪರಸ್ಪರ ಎಳೆದಾಡಿಕೊಂಡಿದ್ದಾರೆ. ಈ ವೇಳೆ ರಾತ್ರಿ ಬೀಟ್ ಪೊಲೀಸರು ಸ್ಥಳಕ್ಕಾಗಮಿಸಿ ಜಗಳ ಬಿಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಇಳಕಲ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಘಟನೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಆದ್ರೆ ಇವರಿಬ್ಬರ ಗಲಾಟೆ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

Published On - 3:03 pm, Mon, 21 October 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us