ಕೆಲಸದಲ್ಲಿ ಬ್ಯೂಸಿಯಾಗಿರುವ ನಾನು ಕೆಲಸವಿಲ್ಲದೆ ಹರಟುವವರ ಮಾತುಗಳಿಂದ ವಿಚಲಿತನಾಗಲ್ಲ: ಬಿವೈ ವಿಜಯೇಂದ್ರ
ರಾಜ್ಯಾಧ್ಯಕ್ಷ ಮತ್ತು ರಾಷ್ಟ್ರೀಯ ಅಧ್ಯಕ್ಷರ ಅಯ್ಕೆಗೆ ಸಂಘಟನಾ ಪೂರ್ವ ಪ್ರಕ್ರಿಯೆಗಳು ಜಾರಿಯಲ್ಲಿವೆ, ಮಂಡಲ ಮತ್ತು ಜಿಲ್ಲಾ ಮಟ್ಟದ ಅಧ್ಯಕ್ಷರ ಆಯ್ಕೆ ಮಾಡಲು ಸಿದ್ಧತೆಗಳು ನಡೆದಿವೆ, ನಾಳೆ ನಡೆಯುವ ಸಭೆಯಲ್ಲಿ 13 ರಿಟರ್ನಿಂಗ್ ಆಫೀಸರ್ಗಳು ಸಹ ಭಾಗಿಯಾಗಲಿದ್ದಾರೆ ಎಂದು ಹೇಳುವ ವಿಜಯೇಂದ್ರ ಅವರಿಗೆ ತಾವೇ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವ ವಿಶ್ವಾಸವಿದೆ.
ಬೆಂಗಳೂರು: ತನ್ನನ್ನು ಟಾರ್ಗೆಟ್ ಮಾಡಿ ಮಾತಾಡುವವರು ಬಸನಗೌಡ ಯತ್ನಾಳ್ ಆಗಿರಲಿ ಅಥವಾ ಬೇರೆ ಯಾರೇ ಅಗಿರಲಿ, ಅವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಪಕ್ಷದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದೇನೆ, ಕೆಲಸ ಮಾಡದೇ ಸುಮ್ಮನೆ ಹರಟುವವರ ಮಾತು ತನ್ನ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದರು. ನಾಳೆ ಹಲವು ಸಭೆಗಳು ನಡೆಯಲಿವೆ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನದಾಸ್ ಅಗರ್ವಾಲ್, ತಮಿಳುನಾಡಿನ ಪೊನ್ನು ರಾಧಾಕೃಷ್ಣನ್ ಮತ್ತು ಸುಧಾಕರ್ ರೆಡ್ಡಿ ಮೊದಲಾವರೆಲ್ಲ ಭಾಗಿಯಾಗಲಿದ್ದಾರೆ, ಸಭೆಯಲ್ಲಿ ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಚರ್ಚಿಸಲಾಗುವುದು ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅತಿರೇಕ್ಕೇರಿದ ಬಿಜೆಪಿ ಬಣಬಡಿದಾಟ: ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ವಿಜಯೇಂದ್ರ